

ಬೆಂಗಳೂರು: ವಾಹನ ದಟ್ಟಣೆ ಸಮಸ್ಯೆಗೆ ಸಿಲುಕಿರುವ ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ನಮ್ಮ ಮೆಟ್ರೋ ಗುಡ್ನ್ಯೂಸ್ ಕೊಟ್ಟಿದ್ದು, ಎರಡು ಹೊಸ ಮಾರ್ಗಗಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸೇವೆ ಒದಗಿಸುತ್ತಿರುವ ಗ್ರೀನ್, ಪರ್ಪಲ್ ಮತ್ತು ಯಲ್ಲೋ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ.
ಹೊಸ ಮಾರ್ಗಗಳು
2026ರ ಅಂತ್ಯದ ಒಳಗೆ ಪಿಂಕ್ ಮತ್ತು ಬ್ಲೂ ಲೈನ್ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಆರಂಭವಾದರೆ, ಡಿಸೆಂಬರ್ ವೇಳೆಗೆ ಬ್ಲೂ ಲೈನ್ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ.
ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಪಿಂಕ್ ಲೈನ್ 21.25 ಕಿ.ಮೀ. ವಿಸ್ತೀರ್ಣವಿದ್ದು, ಆ ಪೈಕಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ.ಯ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳು ಮೇನಲ್ಲಿ ಆರಂಭವಾಗಲಿದೆ. ನವೆಂಬರ್ನಲ್ಲಿ ತಾವರೆಕೆರೆಯಿಂದ ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ಗಳ ಕಾರ್ಯಾಚರಣೆ ಆರಂಭವಾಗಲಿದೆ. ಪಿಂಕ್ ಲೈನ್ಗಾಗಿ ಈಗಾಗಲೇ BEMLನಿಂದ ಒಂದು ಚಾಲಕರಹಿತ ರೈಲು ಆರಂಭವಾಗಲಿದೆ.
ಬ್ಲೂ ಲೈನ್ನ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂ ಮಾರ್ಗ ಈ ವರ್ಷ ಡಿಸೆಂಬರ್ ವೇಳೆಗೆ ಓಪನ್ ಆಗಲಿದೆ. ಇದು 17.75 ಕಿ.ಮೀ. ಮಾರ್ಗದಲ್ಲಿ, 13 ಸ್ಟೇಷನ್ಗಳಿವೆ. ಬ್ಲೂ ಮಾರ್ಗವು ಒಟ್ಟು 58.19 ಕಿ.ಮೀ. ವಿಸ್ತೀರ್ಣವಿದ್ದು, ಮೊದಲ ಹಂತ 2026ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭವಾದರೆ, 2027ರಲ್ಲಿ ಎರಡನೇ ಹಂತ ಓಪನ್ ಆಗಲಿದೆ.
Advertisement