

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಹುದ್ದೆಗಾಗಿ ತೀವ್ರ ಫೈಟ್ ನಡೆಯುತ್ತಿರುವ ಬೆನ್ನಲ್ಲೇ ಕೋಡಿ ಮಠದ ಶ್ರೀಗಳು ಸೋಮನಾರ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇಂದು ಕಾಗಿನೆಲೆ ಕನಕಪೀಠದ ಕಾರ್ಯಕ್ರಮದಲ್ಲಿ ಸಂಕ್ರಾಂತಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಶ್ರೀಗಳು, ಸಂಕ್ರಾಂತಿ, ಯುಗಾದಿ ಅಲ್ಲ, ಬಜೆಟ್‌ವರೆಗೂ ಯಾವುದೇ ಬದಲಾವಣೆ ಇಲ್ಲ ಎಂದರು.
ಜ್ಯೋತಿಷ್ಯವನ್ನು ನಂಬುವ ಜನ ಸಂಕ್ರಾಂತಿ, ಯುಗಾದಿ ಅಂತಾ ಹೇಳ್ತಾರೆ. ಸಂಕ್ರಾಂತಿಯಲ್ಲಿ ಸೂರ್ಯ, ಯುಗಾದಿಯಲ್ಲಿ ಚಂದ್ರನನ್ನು ಹಿಡಿದು ಜ್ಯೋತಿಷ್ಯ ಹೇಳುತ್ತಾರೆ. ಆದರೆ ಯುಗಾದಿ ಹಬ್ಬ ಮುಗಿಯುವವರೆಗೂ ಸಿದ್ದರಾಮಯ್ಯ ಸಿಎಂ ಆಗಿ ಇರಲಿದ್ದು, ಮುಂದಿನದು ಯುಗಾದಿ ನೋಡಿಕೊಂಡು ಹೇಳಬೇಕು ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಡದಲ್ಲಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರಶ್ರೀಗಳು, ಆತ ಒಳ್ಳೆಯ ಕಾರ್ಯಕರ್ತ, ಸಂಘಟನೆಯ ಮನುಷ್ಯ, ಹೋರಾಟಗಾರ. ಆದ್ರೆ ಇಲ್ಲಿ ಸಂಘಟನೆ ಪ್ರಶ್ನೆ ಬರುವುದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡ್ತಾರಾ? ಇಲ್ಲವಾ? ಅನ್ನೋದನ್ನ ನೋಡಿ ಹೇಳ್ತೇನೆ ಎಂದರು.
Advertisement