ರಾಹುಲ್ ಭೇಟಿ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಡಿ ಎನ್ನುತ್ತಾ ಮತ್ತೆ 'ಗೂಡಾರ್ಥದ ಪೋಸ್ಟ್', ಸ್ಪಷ್ಟನೆ ಕೊಟ್ಟ DKS!
ಬೆಂಗಳೂರು: ಇತ್ತೀಚಿಗೆ ಮೈಸೂರಿನಲ್ಲಿ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದರ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಾಡಿಕೆಯಂತೆ ರಾಹುಲ್ ಗಾಂಧಿ ಅವರೊಂದಿಗೆ ರಾಜಕೀಯ ಕುರಿತಂತೆ ಮಾತನಾಡಿದ್ದೇನೆ. ವಿವಿಧ ವಿಷಯಗಳ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಮಾತನಾಡುವುದು ಮುಂದುವರೆಯುತ್ತದೆ ಎಂದು ಹೇಳಿದ್ದರೂ ಅದಕ್ಕೆ ಹೆಚ್ಚಿನ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಈ ಮಧ್ಯೆ "ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆಗಳು ವಿಫಲ ಆಗುವುದಿಲ್ಲ' ಎಂದು ಮತ್ತೆ ಗೂಡಾರ್ಥದ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ತಮಿಳುನಾಡಿಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ನಂತರ ಇಬ್ಬರ ನಡುವಿನ ಚರ್ಚೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ ಅಂತಾ ಟ್ವೀಟ್ ಮಾಡಿದ್ದೆ. ಅದನ್ನು ವಿವಿಧ ರೀತಿಯಲ್ಲಿ ನೀವು ವ್ಯಾಖ್ಯಾನಿಸಿದ್ದೀರಿ ಎಂದರು.
ನನ್ನ ಕಾವೇರಿ ಆರತಿ ನನ್ನ ಪ್ರಾರ್ಥನೆಗೆ ನ್ಯಾಯಾಲಯದಿಂದ ಹೊಸ ರೂಪ ಕೊಡಲು ಕೇಂದ್ರ ಸರ್ಕಾರಕ್ಕೆ ನೇರವಾಗಿ ಹೇಳಿದೆ. ಇದು ಟಕ್ನಿಕಲ್ ಆಗಿ ನೀವೇ ತೆಗೆದುಕೊಳ್ಳಬೇಕಾಗಿರೋ ತೀರ್ಮಾನ. ಮೇಕೆ ದಾಟು ವಿಚಾರವಾಗಿ ನೀವೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ದೇವರು ನಂಗೆ ವರ ಕೊಟ್ಟಿದ್ದಾನೆ ಅದಕ್ಕೆ ನಾನು ಟ್ಬೀಟ್ ಮಾಡಿದ್ದೇನೆ ಎಂದರು.
ಆದರೆ ನನ್ನ ಟ್ವೀಟ್‌ನ್ನು ನೀವು ಬೇರೆ ತರಹ ಅರ್ಥ ಮಾಡಿಕೊಂಡಿದ್ದೀರಿ. ಆದರೂ ಚಿಂತೆಯಿಲ್ಲ, ಹಳ್ಳಿ ರೈತರ ಸುಗ್ಗಿ ಅವರ ಬದುಕು ಯಾವತ್ತು ಕೂಡ ತುಂಬು ಬದುಕಾಗಲಿ ಎಂದು ಪಕ್ಷದ ಪರವಾಗಿ ಶುಭ ಹಾರೈಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ನಾನು ರಾಹುಲ್ ಅವರೊಂದಿಗೆ ಮಾತನಾಡಿಲ್ಲ ಎಂದು ಹೇಳುವುದಿಲ್ಲ. ನಾವು ಏನು ಚರ್ಚಿಸಿದ್ದೇವೆ ಎಂಬುದನ್ನು ಬಹಿರಂಗಪಡಿಸಲಾರೆ. ಅದು ನನ್ನ ಮತ್ತು ಅವರ ನಡುವೆ ಇದೆ. ಶುಕ್ರವಾರ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತೇನೆ. ಅಸ್ಸಾಂ ವಿಧಾನಸಭಾ ಚುನಾವಣೆಯ ಬಗ್ಗೆ ಸಭೆ ನಡೆಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ , ಎಐಸಿಸಿ ಅಧ್ಯಕ್ಷರು ರಾಜ್ಯಕ್ಕೆ ಭೇಟಿ ನೀಡಿದಾಗ ಅವರನ್ನು ಕೆಪಿಸಿಸಿ ಅಧ್ಯಕ್ಷರು ಬರಮಾಡಿಕೊಳ್ಳುವುದು ಪಕ್ಷದ ಶಿಷ್ಟಾಚಾರ ಆಗಿದೆ ಎಂದರು.

