ಕೊಲ್ಲೂರು ಸೌಪರ್ಣಿಕಾ ನದಿ ಮಾಲಿನ್ಯ: ಉಡುಪಿ ಜಿಲ್ಲಾಧಿಕಾರಿ, KUWSDBಯಿಂದ ವರದಿ ಕೇಳಿದ NGT

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಸುತ್ತಮುತ್ತಲಿನ ವಾಣಿಜ್ಯ ಸಂಸ್ಥೆಗಳು- ಲಾಡ್ಜ್‌ಗಳು ಮತ್ತು ಹೋಟೆಲ್‌ಗಳಿಂದ ಕೊಳಚೆನೀರು ಮತ್ತು ಕಲ್ಮಶಯುಕ್ತ ನೀರನ್ನು ಹೊರಹಾಕಲಾಗುತ್ತಿದೆ ಹೀಗಾಗಿ ನದಿ ಹಲವು ವರ್ಷಗಳಿಂದ ಕಲುಷಿತವಾಗಿದೆ ಅರ್ಜಿಯಲ್ಲಿ ತಿಳಿಸಿದ್ದಾರೆ.
A view of the contaminated Sauparnika river in Kollur.
ಸೌಪರ್ಣಿಕಾ ನದಿ
Updated on

ಉಡುಪಿ: ಕೊಲ್ಲೂರಿನ ಸೌಪರ್ಣಿಕಾ ನದಿಗೆ ತ್ಯಾಜ್ಯ ನೀರು ಹರಿಯುವುದನ್ನು ನಿಲ್ಲಿಸಲು ಕೈಗೊಂಡಿರುವ ಕ್ರಮ ಹಾಗೂ ಸಮಯದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ಅಧ್ಯಕ್ಷರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಚೆನ್ನೈನ ದಕ್ಷಿಣ ವಲಯ ಇತ್ತೀಚೆಗೆ ನಿರ್ದೇಶನ ನೀಡಿದೆ. ಈ ವಿಷಯವನ್ನು ಮುಂದಿನ ವಿಚಾರಣೆಗೆ ಫೆಬ್ರವರಿ 9, 2026ಕ್ಕೆ ನಿಗದಿಪಡಿಸಿದೆ.

ಕೊಲ್ಲೂರಿನ ಸಾಮಾಜಿಕ ಕಾರ್ಯಕರ್ತ ಹರೀಶ್ ಥೋಳರ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಾಂಗ ಸದಸ್ಯೆ-ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ಡಾ. ಪ್ರಶಾಂತ್ ಗರ್ಗವ ಈ ಆದೇಶ ಹೊರಡಿಸಿದ್ದಾರೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಸುತ್ತಮುತ್ತಲಿನ ವಾಣಿಜ್ಯ ಸಂಸ್ಥೆಗಳು- ಲಾಡ್ಜ್‌ಗಳು ಮತ್ತು ಹೋಟೆಲ್‌ಗಳಿಂದ ಕೊಳಚೆನೀರು ಮತ್ತು ಕಲ್ಮಶಯುಕ್ತ ನೀರನ್ನು ಹೊರಹಾಕಲಾಗುತ್ತಿದೆ ಹೀಗಾಗಿ ನದಿ ಹಲವು ವರ್ಷಗಳಿಂದ ಕಲುಷಿತವಾಗಿದೆ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೊಲ್ಲೂರಿನಲ್ಲಿ 2015 ರಲ್ಲಿ 19.97 ಕೋಟಿ ರೂ.ಗಳಿಗೆ ಭೂಗತ ಒಳಚರಂಡಿ ಯೋಜನೆ (UGSS) ಕಾಮಗಾರಿಯನ್ನು ಪ್ರಾರಂಭಿಸಲಾಯಿತು ಮತ್ತು 2020 ರಲ್ಲಿ ಪೂರ್ಣಗೊಂಡಿದ್ದರೂ, ನೀರಿನ ಮಾಲಿನ್ಯ ನಿಂತಿಲ್ಲ. ಎರಡು ವರ್ಷಗಳ ಸೂಚನೆಯ ನಂತರ, ನವೆಂಬರ್ 25, 2025 ರಂದು ಉಡುಪಿ ಜಿಲ್ಲಾಧಿಕಾರಿಯವರ ವರದಿಯನ್ನು ಸಲ್ಲಿಸಲಾಗಿದ್ದರೂ, ಅದು ಸಮಗ್ರವಾಗಿಲ್ಲ ಎಂದು NGT ಗಮನಿಸಿದೆ.

ಜಿಲ್ಲಾ ಆಡಳಿತವು KUWSDB ಮತ್ತು PDO ಗೆ ಕೊಳಚೆನೀರಿನ ಸಂಸ್ಕರಣಾ ಘಟಕದ (STP) ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ನಿರ್ದೇಶನಗಳನ್ನು ನೀಡಿದೆ ಎಂದು ರಾಷ್ಟ್ರೀಯ ಹಸಿರು ಮಂಡಳಿ ತನ್ನ ಮುಂದೆ ಸಲ್ಲಿಸಿದ ವರದಿಯಲ್ಲಿ ಗಮನಿಸಿದೆ.

A view of the contaminated Sauparnika river in Kollur.
ಬೆಂಗಳೂರು ಅವಳಿ ಸುರಂಗ ರಸ್ತೆ ಯೋಜನೆ: ರಾಜ್ಯ ಸರ್ಕಾರ-ಸಂಸ್ಥೆಗಳಿಗೆ NGT ನೊಟೀಸ್

ಉತ್ಪಾದಿಸುವ ತ್ಯಾಜ್ಯದ ಪ್ರಮಾಣ, ಅಸ್ತಿತ್ವದಲ್ಲಿರುವ UGSS ನ ಸಾಗಿಸುವ ಸಾಮರ್ಥ್ಯ, ಸಾಮರ್ಥ್ಯವನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು, ಅಂದಾಜು ವೆಚ್ಚ ಮತ್ತು ಅಂತಹ ಸುಧಾರಣೆಗಳಿಗೆ ಸಮಯದ ಬಗ್ಗೆ ವಿವರಗಳನ್ನು ಉಡುಪಿ ಜಿಲ್ಲಾಧಿಕಾರಿ ಒದಗಿಸದಿದ್ದಕ್ಕೆ NGT ಆಕ್ಷೇಪ ವ್ಯಕ್ತಪಡಿಸಿದೆ.

ಉಡುಪಿ ಜಿಲ್ಲಾಧಿಕಾರಿ ಮತ್ತು KUWSDB ಅಧ್ಯಕ್ಷರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತನ್ನ ಮುಂದೆ ಹಾಜರಾಗುವಂತೆ ಕೇಳಿದೆ. ಉಲ್ಲಂಘಿಸುವವರನ್ನು ಗುರುತಿಸಿ ಮತ್ತು ಅಂತಹ ಉಲ್ಲಂಘನೆಗಳನ್ನು ತಡೆಯಲು ತೆಗೆದುಕೊಂಡ ಕ್ರಮವನ್ನು ನಿರ್ದಿಷ್ಟಪಡಿಸುವ ವಿವರವಾದ ವರದಿಯನ್ನು ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ NGT ನಿರ್ದೇಶನ ನೀಡಿದೆ.

ಸೌಪರ್ಣಿಕಾ ನದಿಗೆ ಕೊಳಚೆ ನೀರನ್ನು ಬಿಡುವುದರಿಂದ ನೀರು ಕಲುಷಿತವಾಗಿದೆ ಮತ್ತು ಭಕ್ತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಥೋಲರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಕೊಲ್ಲೂರಿನಲ್ಲಿ ಯುಜಿಎಸ್ಎಸ್ ಜಾರಿಗೆ ಬಂದಿದ್ದರೂ, ವಾಣಿಜ್ಯ ಸಂಸ್ಥೆಗಳು ನದಿಯನ್ನು ಕಲುಷಿತಗೊಳಿಸುತ್ತಲೇ ಇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com