• Tag results for pollution

ವಾಯು ಮಾಲಿನ್ಯ: 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್-ಡೀಸೆಲ್ ವಾಹನಗಳ ನೋಂದಣಿ ರದ್ದು- ದೆಹಲಿ ಸರ್ಕಾರ

ಮುಂದಿನ ದಿನಗಳಲ್ಲಿ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ನೋಂದಣಿಯನ್ನೂ ರದ್ದುಪಡಿಸಲಾಗುವುದು ಎಂದು ದೆಹಲಿ ಸರ್ಕಾರ ಮಾಹಿತಿ ನೀಡಿದೆ.

published on : 4th January 2022

ದೆಹಲಿ ವಾಯು ಮಾಲಿನ್ಯ: ಸಿರಿಂಜ್ ಉತ್ಪಾದಕ ಸಂಸ್ಥೆ ಸ್ಥಗಿತಕ್ಕೆ ಸೂಚನೆ, ಕೋವಿಡ್ ಲಸಿಕೆ ಅಭಿಯಾನದ ಮೇಲೆ ಪರಿಣಾಮ ಸಾಧ್ಯತೆ

ದೆಹಲಿ ಹಾಗೂ ಎನ್ ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಹರ್ಯಾಣದ ಫರೀದಾಬಾದ್ ನಲ್ಲಿರುವ ಸಿರೆಂಜ್ ಉತ್ಪಾದನಾ ಸಂಸ್ಥೆಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಾಗಿದೆ. 

published on : 11th December 2021

ದೆಹಲಿ ವಾಯುಗುಣಮಟ್ಟದಲ್ಲಿ ಅಲ್ಪ ಚೇತರಿಕೆ; ನಿರ್ಬಂಧ ಸಡಿಲಿಕೆಗೆ ಸಮಿತಿಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್!

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಮಟ್ಟದಲ್ಲಿ 'ಸ್ವಲ್ಪ' ಸುಧಾರಣೆ ಕಂಡುಬಂದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಬಂಧ ಸಡಿಲಿಕೆಗೆ ಸಮಿತಿಗೆ ಅನುಮತಿ ನೀಡಿದೆ.

published on : 10th December 2021

ವಾಯು ಮಾಲಿನ್ಯ ತಡೆಗೆ 2015 ರಿಂದ ಡಿಪಿಸಿಸಿ ಖರ್ಚು ಮಾಡಿದ್ದು 478 ಕೋಟಿ ರೂಪಾಯಿ! 

ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗೆ 2015 ರಿಂದಲೂ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ 478 ಕೋಟಿ ರೂಪಾಯಿ ಖರ್ಚು ಮಾಡಿರುವುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ.

published on : 8th December 2021

ಆನೇಕಲ್ ತಾಲೂಕಿನಲ್ಲಿ ಅಕ್ರಮ ಬ್ಯಾಟರಿ ಘಟಕಗಳು ನೆಲಸಮ: ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಾಚರಣೆ

ಅಕ್ರಮ ಸೀಸ ಆಸಿಡ್ ಬ್ಯಾಟರಿ ಸಂಸ್ಕರಣಾ ಘಟಕಗಳನ್ನು ಪತ್ತೆಹಚ್ಚುವ ಬಹುದೊಡ್ಡ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಗ್ರಾಮಗಳಲ್ಲಿ 13 ಇಂತಹ ಘಟಕಗಳನ್ನು ಗುರುತಿಸಿ ನೆಲಸಮ ಮಾಡಿದೆ. 

published on : 4th December 2021

ವಾಯು ಮಾಲಿನ್ಯ: ಮುಂದಿನ ಆದೇಶದವರೆಗೂ ನಾಳೆಯಿಂದ ದೆಹಲಿಯಲ್ಲಿ ಶಾಲೆಗಳು ಸ್ಥಗಿತ- ಸಚಿವ ಗೋಪಾಲ್ ರಾಯ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಶಾಲೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ.

published on : 2nd December 2021

ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಸಲಹೆಗೆ 24 ಗಂಟೆ ಡೆಡ್ ಲೈನ್: ಕೇಂದ್ರ, ದೆಹಲಿ ಸರ್ಕಾರಕ್ಕೆ 'ಸುಪ್ರೀಂ' ಗಡುವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ 24 ಗಂಟೆಗಳ ಒಳಗೆ ಸಲಹೆಗಳನ್ನು ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

published on : 2nd December 2021

ವಾಯುಮಾಲಿನ್ಯದ ನಡುವೆಯೂ ಶಾಲೆಗಳ ಆರಂಭಿಸಿದ ದೆಹಲಿ ಸರ್ಕಾರದ ವಿರುದ್ಧ 'ಸುಪ್ರೀಂ' ಚಾಟಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಉಲ್ಬಣವಾಗಿರುವಂತೆಯೇ ಶಾಲೆಗಳನ್ನು ತೆರೆಯುವ ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

published on : 2nd December 2021

ವಾಯು ಮಾಲಿನ್ಯ: ಡಿ.​​​ 7ರವರೆಗೆ ಕಟ್ಟಡ ನಿರ್ಮಾಣ ಕಾರ್ಯ, ಟ್ರಕ್​​ಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ ದೆಹಲಿ ಸರ್ಕಾರ

ರಾಷ್ಟ್ರರಾಜಧಾನಿಯಲ್ಲಿ ವಾಯುಗುಣಮಟ್ಟ ಹದಗೆಟ್ಟಿರುವುದರಿಂದ ಇದನ್ನು ತಡೆಯುವ ಸಲುವಾಗಿ, ಡಿಸೆಂಬರ್​​​ 7ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಟ್ರಕ್​​ಗಳ ರಾಜಧಾನಿ ಪ್ರವೇಶಕ್ಕೆ ದೆಹಲಿ ಸರ್ಕಾರ ನಿರ್ಬಂಧ ವಿಧಿಸಿದೆ.

published on : 29th November 2021

ವಾಯುಮಾಲಿನ್ಯ: ದೆಹಲಿಯಲ್ಲಿ ಮತ್ತೆ ನಿರ್ಮಾಣ ಚಟುವಟಿಕೆ ನಿಷೇಧಿಸಿದ ಸುಪ್ರೀಂ ಕೋರ್ಟ್

ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನಿಸಿದ ಸುಪ್ರೀಂ ಕೋರ್ಟ್ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಮತ್ತೆ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ವಿಧಿಸಿದೆ ಮತ್ತು ಈ ಅವಧಿಗೆ ಕಾರ್ಮಿಕ ಸೆಸ್‌ನಂತೆ...

published on : 25th November 2021

ವಾಯು ಮಾಲಿನ್ಯ: ನಿರ್ಮಾಣ ಮೇಲಿನ ನಿಷೇಧ ತೆರವುಗೊಳಿಸಿದ ದೆಹಲಿ ಸರ್ಕಾರ, ಶಾಲೆ ಪುನರಾರಂಭ ಕುರಿತು ಬುಧವಾರ ನಿರ್ಧಾರ

ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಮಾಣ ಮತ್ತು  ಧ್ವಂಸ ಮಾಡುವ ಚಟುವಟಿಕೆಗಳ ಮೇಲಿನ ನಿಷೇಧವನ್ನು ದೆಹಲಿ ಸರ್ಕಾರ ತೆರವುಗೊಳಿಸಿದೆ ಎಂದು ಪರಿಸರ ಸಚಿವ ಗೋಪಾಲ್ ರಾಯ್ ಸೋಮವಾರ ತಿಳಿಸಿದ್ದಾರೆ.

published on : 22nd November 2021

ವಾಯು ಮಾಲಿನ್ಯ: ದೆಹಲಿಯಲ್ಲಿ ಶಾಲೆಗಳಲ್ಲಿನ ಭೌತಿಕ ತರಗತಿಗಳ ಮೇಲಿನ ನಿರ್ಬಂಧ ಮುಂದುವರಿಕೆ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯಮಾಲಿನ್ಯ ಮುಂದುವರೆದಿದ್ದು, ವಾಯು ಗುಣಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಲ್ಲಿನ ಭೌತಿಕ ತರಗತಿಗಳ ಮೇಲಿನ ನಿರ್ಬಂಧ ಮುಂದುವರೆಸಲಾಗಿದೆ.

published on : 21st November 2021

ಟಿವಿ ಡಿಬೇಟುಗಳಿಂದಲೇ ಹೆಚ್ಚು ಮಾಲಿನ್ಯ ಸೃಷ್ಟಿ: ಸುಪ್ರೀಂ ಕೋರ್ಟ್

ಟಿವಿ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗಿಯಾದ ಪ್ರತಿಯೊಬ್ಬರು ತಮ್ಮದೇ ಆದ ಅಜೆಂಡಾಗಳನ್ನು ಹೊಂದಿರುತ್ತಾರೆ.  ಅವರೆಲ್ಲರಿಂದಾಗಿ ವಿಷಯ ಹಾದಿ ತಪ್ಪುತ್ತಿದೆ. ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವವರಿಗೆ ನಿಜಕ್ಕೂ ದೆಹಲಿಯ ಪರಿಸ್ಥಿತಿ ಏನು ಎಂಬುದರ ಅರಿವು ಇರುವುದಿಲ್ಲ.

published on : 17th November 2021

ದೆಹಲಿ ವಾಯುಮಾಲಿನ್ಯ: ಸರ್ಕಾರಿ ನೌಕರರ 'ವರ್ಕ್ ಫ್ರಂ ಹೋಂ' ಗೆ ಕೇಂದ್ರ ವಿರೋಧ, ಕಾರ್‌ಪೂಲಿಂಗ್'ಗೆ ಸಲಹೆ

ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲು ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಇದರ ಬದಲಿಗೆ ಕಾರ್ಪೂಲಿಂಗ್ ಅನುಸರಿಸಲು ಸಿಬ್ಬಂದಿಗಳಿಗೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.

published on : 17th November 2021

ಶಬ್ದ ಮಾಲಿನ್ಯ: ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ಸೂಚನೆ

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಯಾವ ಕಾನೂನಿನ ಅಡಿ ಅವಕಾಶ ಮಾಡಿಕೊಡಲಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

published on : 17th November 2021
1 2 3 > 

ರಾಶಿ ಭವಿಷ್ಯ