ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂ. ದರೋಡೆ: ಬೆಳಗಾವಿ ಎಸ್ ಪಿ ಹೇಳಿದ್ದೇನು?

ಜನವರಿ 6 ರಂದು ನಾಸಿಕ್ ಎಸ್ ಪಿಯಿಂದ ನಮಗೆ ಪತ್ರ ಬರುತ್ತೆ. ಚೋರ್ಲಾ ಘಾಟ್ ನಲ್ಲಿ ರಾಬರಿಯಾಗಿದೆ. ಹಳೆಯ 400 ಕೋಟಿ ರೂ.ಆಗಿರಬಹುದು ಅಂತಾ ಪತ್ರದಲ್ಲಿತ್ತು.ಈ ಕಾರಣಕ್ಕೆ ಖಾನಾಪುರದ ಸಬ್ ಇನ್ಸ್ ಪೆಕ್ಟರ್ ಸೇರಿ ಒಂದು ತಂಡವನ್ನು ಕಳುಹಿಸಿದ್ದೇವೆ ಎಂದರು.
Belagavi district Superintendent of Police K Ramarajan
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್
Updated on

ಬೆಳಗಾವಿ: ಮಹಾರಾಷ್ಟ್ರ ಗಡಿಯಲ್ಲಿರುವ ಚೋರ್ಲಾ ಘಾಟ್ ನಲ್ಲಿ ಸಿನಿಮಾ ರೀತಿಯಲ್ಲಿ 400 ಕೋಟಿ ರೂ. ದರೋಡೆ ನಡೆದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಹೈಜಾಕ್​​ ಮಾಡಲಾಗಿದೆ.

ಈ ಪ್ರಕರಣ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದು, ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರೇ ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ ಎಂದರು.

ಜನವರಿ 6 ರಂದು ನಾಸಿಕ್ ಎಸ್ ಪಿಯಿಂದ ನಮಗೆ ಪತ್ರ ಬರುತ್ತೆ. ಚೋರ್ಲಾ ಘಾಟ್ ನಲ್ಲಿ ರಾಬರಿಯಾಗಿದೆ. ಹಳೆಯ 400 ಕೋಟಿ ರೂ.ಆಗಿರಬಹುದು ಅಂತಾ ಪತ್ರದಲ್ಲಿತ್ತು.ಈ ಕಾರಣಕ್ಕೆ ಖಾನಾಪುರದ ಸಬ್ ಇನ್ಸ್ ಪೆಕ್ಟರ್ ಸೇರಿ ಒಂದು ತಂಡವನ್ನು ಕಳುಹಿಸಿದ್ದೇವೆ ಎಂದರು.

ಡಿವೈಎಸ್ಪಿ ಈ ವಿಷಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರತಿದಿನವೂ ಮಾಹಿತಿ ನೀಡುತ್ತಿದ್ದಾರೆ. ನಾಸಿಕ್ ಪೊಲೀಸರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ಬಯಸಿದರೆ, ಅವರೊಂದಿಗೆ ಸಂಪರ್ಕದಲ್ಲಿರಲು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 22 ರಂದು ಐವರು ನನ್ನನ್ನು ಬಲವಂತವಾಗಿ ಫಾರ್ಚುನರ್ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ, ಅಪಹರಿಸಿದ್ದಾರೆ ಎಂದು ಸಂದೀಪ್ ದತ್ತ ಪಾಟೀಲ್ ಅವರು ನಾಸಿಕ್‌ನಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆತನನ್ನು ಕರೆದೊಯ್ದ ಅಪಹರಣಕಾರರು ಅಕ್ಟೋಬರ್ 16 ರಂದು 400 ಕೋಟಿ ರೂ. ದರೋಡೆ ಆಗಿದ್ದು, ಈತ ದರೋಡೆಕೋರರೆಂದು ಶಂಕಿಸಿ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ. ದರೋಡೆ ನಡೆದಿರುವ ನಿಖರವಾದ ಸ್ಥಳವೂ ತಿಳಿದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಘಾಟ್ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತದೆ.

"ಘಟನೆಯನ್ನು ನೋಡಿದವರು ಯಾರೂ ಇಲ್ಲ ಅಥವಾ ಯಾವುದೇ ಪ್ರತ್ಯಕ್ಷದರ್ಶಿಗಳು ಇಲ್ಲ. ನಾಸಿಕ್‌ಗೆ ಕಳುಹಿಸಲಾದ ಸಬ್‌ಇನ್‌ಸ್ಪೆಕ್ಟರ್ ಬಿರಾದಾರ್, ಸಂದೀಪ್ ಪಾಟೀಲ್ ಅವರೊಂದಿಗೆ ಮಾತನಾಡಿದ್ದು, ನನ್ನನ್ನು ದರೋಡೆಯಲ್ಲಿ ಭಾಗವಹಿಸಿದ್ದಾನೆ ಎಂದು ದರೋಡೆಕೋರರು ಆರೋಪಿಸಿದ ಈ ಪ್ರಕರಣ ಗೊತ್ತಾಯಿತು. ಅಲ್ಲಿಯವರೆಗೂ ಏನೂ ಗೊತ್ತಿರಲಿಲ್ಲ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.

Belagavi district Superintendent of Police K Ramarajan
ಹುಣಸೂರು ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣ: ಬಿಹಾರದಲ್ಲಿ ಇಬ್ಬರು ಆರೋಪಿಗಳ ಬಂಧನ

ಬಂಧಿತ ಅಪಹರಣಕಾರರನ್ನು ಇದುವರೆಗೆ ಪ್ರಶ್ನಿಸಲು ಕರ್ನಾಟಕ ಪೊಲೀಸ್ ತಂಡಕ್ಕೆ ಅವಕಾಶ ಸಿಕ್ಕಿಲ್ಲ. ಅಪರಾಧದ ತಯಾರಿ ಮಹಾರಾಷ್ಟ್ರದಲ್ಲಿ ನಡೆದಿದ್ದರೆ ಮತ್ತು ಕರ್ನಾಟಕದ ಮಿತಿಯಲ್ಲಿ ದರೋಡೆ ನಡೆದಿದ್ದರೆ, ಎರಡು ಕಾನೂನು ಆಯ್ಕೆಗಳಿವೆ. ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್ ದಾಖಲಿಸಿ ಅಲ್ಲಿಯೇ ಆರೋಪಪಟ್ಟಿ ಸಲ್ಲಿಸಬಹುದು ಅಥವಾ ಇಲ್ಲಿ ಪ್ರಕರಣ ದಾಖಲಿಸಬಹುದು ಎಂದು ಎಸ್‌ಪಿ ಹೇಳಿದರು.

ಬೆಳಗಾವಿ ಪೊಲೀಸರಿಗೆ ಪ್ರತ್ಯಕ್ಷದರ್ಶಿಗಳ, ಸಂತ್ರಸ್ತರ ವಿವರಗಳು ಅಥವಾ ಕಂಟೈನರ್‌ಗಳ ವಿವರಗಳಂತಹ ಯಾವುದೇ ಖಚಿತವಾದ ಮಾಹಿತಿಯನ್ನು ಪಡೆದರೆ, ಅಗತ್ಯವಿದ್ದರೆ ತನಿಖೆಯನ್ನು ತೆಗೆದುಕೊಳ್ಳಲು ಪೊಲೀಸರು ಸಿದ್ಧರಾಗಿದ್ದಾರೆ ಎಂದು ಎಸ್ ಪಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com