

ಬೆಂಗಳೂರು: ಉತ್ತರ ಪ್ರದೇಶ ವಿಧಾನಸಭೆ ಸ್ಪೀಕರ್ ಕುಳಿತುಕೊಳ್ಳುವ ಕುರ್ಚಿಯು ಕರ್ನಾಟಕದೊಂದಿಗೆ ವಿಶಿಷ್ಟ ಸಂಪರ್ಕ ಹೊಂದಿದೆ. ಈ ಕುರ್ಚಿ ನಿರ್ಮಾಣಕ್ಕೆ ಕರ್ನಾಟಕದ ರೋಸ್‌ವುಡ್ ಅನ್ನು ಬಳಸಲಾಗುತ್ತಿದ್ದು, ರಾಜ್ಯದ ನುರಿತ ಕುಶಲಕರ್ಮಿಗಳು ಇದನ್ನು ಕೆತ್ತುತ್ತಿದ್ದಾರೆ.
ಕುತೂಹಲಕಾರಿಯಾಗಿ, ಇದರ ವಿನ್ಯಾಸ ಕರ್ನಾಟಕ ಸ್ಪೀಕರ್ ಬಳಸುವ ಕುರ್ಚಿಯನ್ನೇ ಹೋಲುತ್ತದೆ. ಕರ್ನಾಟಕ ಸ್ಪೀಕರ್ ಕುರ್ಚಿಯು ಮುಚ್ಚಿದ ರಚನೆಯನ್ನು ಹೊಂದಿದ್ದು, ಗಂಡಬೆರುಂಡ ಮತ್ತು ಸಿಂಹದ ಲಾಂಛನಗಳನ್ನು ಹೊಂದಿದೆ. ಯುಪಿ ಸ್ಪೀಕರ್ ಕುರ್ಚಿಯು ಎಲ್ಲ ಕಡೆಗಳಲ್ಲಿ ತೆರೆದ ವಿನ್ಯಾಸವನ್ನು ಹೊಂದಿದೆ. ಕುರ್ಚಿಯ ಮುಖ್ಯ ರಚನೆಯು ಒಂದೇ ರೀತಿಯದ್ದಾಗಿದ್ದರೂ, ಕರ್ನಾಟಕದ ಗಂಡಬೇರುಂಡ ಬದಲಿಗೆ ಯುಪಿ ಲಾಂಛನದಂತಹ ಕೆಲವು ವಿನ್ಯಾಸ ಬದಲಾವಣೆಗಳನ್ನು ಒಳಗೊಂಡಿದೆ.
ಕರ್ನಾಟಕ ಸ್ಪೀಕರ್ ಯುಟಿ ಖಾದರ್, ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನ ಅವರು ಈ ಹಿಂದೆ ಬೆಂಗಳೂರಿನಲ್ಲಿರುವ ಕರ್ನಾಟಕ ವಿಧಾನಸಭೆಗೆ ಭೇಟಿ ನೀಡಿದಾಗ, ಸ್ಪೀಕರ್ ಕುರ್ಚಿಯನ್ನು ಮೆಚ್ಚಿಕೊಂಡಿದ್ದರು ಎಂದು ಹೇಳಿದರು.
'ಅದರ ವಿನ್ಯಾಸದಿಂದ ಪ್ರಭಾವಿತರಾದ ಮಹಾನ ಅವರು, ಉತ್ತರ ಪ್ರದೇಶದ ವಿಧಾನಸಭೆಗೆ ಇದೇ ರೀತಿಯ ಕುರ್ಚಿಯನ್ನು ತಯಾರಿಸಿಕೊಳ್ಳುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಕಳೆದ ವರ್ಷ ಬೆಳಗಾವಿಯ ಸುವರ್ಣ ಸೌಧಕ್ಕೂ ಇದೇ ರೀತಿಯ ಕುರ್ಚಿಯನ್ನು ಮಾಡಿಸಲಾಗಿತ್ತು. ನಾನು ಅವರಿಗೆ ಛಾಯಾಚಿತ್ರವನ್ನು ತೋರಿಸಿದಾಗ, ಅವರು ಕುರ್ಚಿ ತಯಾರಿಸುವ ವಿವರಗಳನ್ನು ಸಂಗ್ರಹಿಸಿದರು. ಈಗ ಮೈಸೂರಿನಲ್ಲಿ ಕೆಲಸ ನಡೆಯುತ್ತಿದೆ' ಎಂದು ಖಾದರ್ ಹೇಳಿದರು.
ಆರ್‌ಟಿಐ ಕಾರ್ಯಕರ್ತರೊಬ್ಬರು ಹೇಳುವಂತೆ, ಸುವರ್ಣ ಸೌಧಕ್ಕಾಗಿ ಮಾಡಿದ ಕುರ್ಚಿಯ ಬೆಲೆ ₹43 ಲಕ್ಷ ರೂ.ಗಳಿಗೂ ಹೆಚ್ಚು.
Advertisement