ಡಿಕೆಶಿಗೆ ಸಿಎಂ ಆಗಲು ಅವಕಾಶ ಕೊಡಬೇಡಿ, ಇನ್ನೂ ಎರಡೂವರೆ ವರ್ಷ ನೀವೇ ಮುಂದುವರೆಯಿರಿ: ಸಿದ್ದು ಪರ ಜನಾರ್ಧನ ರೆಡ್ಡಿ ಬ್ಯಾಟಿಂಗ್..!

ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​​ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು.
Janardhana Reddy and Sriramulu
ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು
Updated on

ಬೆಂಗಳೂರು: ಬಳ್ಳಾರಿ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಬಳ್ಳಾರಿ ಗಲಾಟೆ ಪ್ರಕರಣ ವಿಷಯ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ ಅವರು, ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಳ್ಳಾರಿ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್​​ ನಡೆದುಕೊಂಡ ರೀತಿ ನೋಡಿದರೆ, ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವರಿಗೆ ಅವಕಾಶ ಮಾಡಿ ಕೊಡಬಾರದು. ಮುಖ್ಯಮಂತ್ರಿಯಾಗಿ ನೀವೇ ಎರಡೂವರೆ ವರ್ಷ ಮುಂದುವರಿಯಬೇಕು. ರಾಜ್ಯದ ಕಾನೂನನ್ನು ನೀವು ಕಾಪಾಡಿ. ವಿಶೇಷವಾಗಿ ಬಳ್ಳಾರಿಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಒಳ್ಳೆಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

'ಬಳ್ಳಾರಿಯಲ್ಲಿ ಅಂದು ಎಲ್ಲರೂ ಮದ್ಯ ಕುಡಿದು ಬಂದಿದ್ದರು. ನೆರೆದಿದ್ದ ಜನ ಕಲ್ಲು ಹೊಡೆದರೆ. ಅಂಗರಕ್ಷಕರು ಗುಂಡು ಹಾರಿಸಿದರು. ಅದೆಲ್ಲವೂ ನಮ್ಮ ಮನೆಗೆ ಬಂದು ಹೊಡೆದಿದೆ. ಈ ಘಟನೆ ಸಂಬಂಧ ಫಾರೆನ್ಸಿಕ್​ ಲ್ಯಾಬ್‌ನವರು ಬಂದು ಸಾಕ್ಷ್ಯ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ನಮ್ಮ ಮನೆಗೆ ಎಸ್'ಪಿ ಮತ್ತು ಐಜಿ ಬಂದರು. ಜನಾರ್ದನ ರೆಡ್ಡಿ ಅವರೇ ನೀವು ಹೆದರಬೇಡಿ ಎಂದರು. ಅವರಿಗೆ ಈಗಾಗಲೇ ವರದಿ ಬಂದಿರಬಹದು. ಎಸ್​ಪಿ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ನಮ್ಮ‌ ಮನೆ ಮೇಲೆ ಕಲ್ಲು ತೂರುತ್ತಿದ್ದರು. ಈ ವೇಳೆ ಪೊಲೀಸರು ಲಾಟಿ ಚಾರ್ಜ್ ಮಾಡುತ್ತಿದ್ದರು. ಈ ವೇಳೆ ವಾಪಸ್ ಓಡುವಾಗ ಗನ್ ಪಾಯಿಂಟ್‌ಗೆ ಸಿಕ್ಕಿ ಕಾರ್ಯಕರ್ತ ಸಾವನ್ನಪ್ಪಿದ್ದಾರೆ.

ಶಾಸಕ ಅಲ್ಲೇ ಇದ್ದ, ನನ್ನ ಮನೆ ಮುಂದೆಯೇ ಕಾರ್ಯಕರ್ತ ಅಸು ನೀಗಿದ್ದ. ಕಾರ್ಯಕರ್ತನ ಸಾವಿಗೆ ನಾವು ಕಾರಣ ಎಂದು ಮನೆ ಮುಂದೆ ಪ್ರತಿಭಟನೆ ಮಾಡಿದರು. ಜನಾರ್ದನ ರೆಡ್ಡಿ ಮನೆ ಮೇಲೆ ಸಾವಿರಾರು ಜನ ದಾಳಿ ಮಾಡಿದ್ದಾರೆ ಎಂದು ಎಸ್ಪಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಪೊಲೀಸರು ಕರ್ತವ್ಯ ಮಾಡಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಐ ಸ್ಟಾಂಡ್ ವಿತ್ ಅವರ್ ಎಂಎಲ್‌ಎ ಅಂತ ಹೇಳಿದ್ದಾರೆ. ಅವರು ಅವರ ಎಂಎಲ್‌ಎ ಅವರ ಪರವಾಗಿ ನಿಲ್ಲಲಿ. ಆದರೆ, ಎಂಥವರ ಪರ ನಿಲ್ಲಬೇಕು.? ನಾನೂ ಬಳ್ಳಾರಿಯಲ್ಲಿ ರಾಜಕಾರಣ ಮಾಡಿದ್ದೇನೆ. ಆದರೆ ನಿಮ್ಮ‌ ಹುದ್ದೆಗೆ ನೀವು ಗೌರವ ಕೊಟ್ಟಿಲ್ಲ' ಎಂದು ದೂರಿದರು.

Janardhana Reddy and Sriramulu
ಜನಾರ್ಧನ ರೆಡ್ಡಿ ಅಮೆರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ, ಬೇಡ ಅಂದವರು ಯಾರು? ವಾಲ್ಮೀಕಿ ಒಂದು ಸಮುದಾಯಕ್ಕೆ ಸೇರಿದವರೇ?

ನೀವು ಆ ಕುರ್ಚಿಯಲ್ಲಿ ಕೂರಲು ಯೋಗ್ಯರೋ, ಇಲ್ಲವೋ ಗೊತ್ತಿಲ್ಲ. ಅದನ್ನು ನಿಮ್ಮ ಪಕ್ಷವೇ ತೀರ್ಮಾನ ಮಾಡಲಿ. ಇಷ್ಟೆಲ್ಲಾ ಘಟನೆ ನಡೆದರೂ ಕ್ರಮ ಆಗಿಲ್ಲ. ಮುಖ್ಯಮಂತ್ರಿಗಳಿಗೆ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ನೀವು ಪಾದಯಾತ್ರೆ ಮಾಡಿದ್ದೀರಿ, ಏನೆಲ್ಲಾ ಮಾಡಿದ್ದೀರಿ. ನಾನು ಜೈಲಿಗೆ ಹೋಗೋದು, ಮತ್ತೆ ಆಯ್ಕೆಯಾಗಿ ಬರೋದು ಎಲ್ಲಾ ಭಗವಂತನ ಇಚ್ಚೆ. ಬಳ್ಳಾರಿಯಲ್ಲಿ ನಾವೇ ಸಂಪೂರ್ಣ ಗೆಲ್ಲಬಹುದು, ಸೋಲಬಹುದು. ನೀವು ಅಧಿಕಾರ ಬಳಸಿಕೊಂಡು ಅಭಿವೃದ್ಧಿ ಮಾಡಿ. ಅದು ಬಿಟ್ಟು ಬಳ್ಳಾರಿಯಲ್ಲಿ ಬಾಂಬು, ಗನ್ ಮಾತನಾಡುತ್ತಿದೆ.

ಇಡೀ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು. ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಗೆ ತನಿಖೆಗೆ ನೀಡಬೇಕು. ಈ ಮೂಲಕ ಬಳ್ಳಾರಿ ಜನತೆಯ ಹಿತ ಕಾಪಾಡಬೇಕು. ಕಾನೂನು ಕ್ರಮ ಕೂಡಲೇ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ, ನಾನು ಕಾನೂನು ಹೋರಾಟ ಮಾಡುತ್ತೇನೆ. ನನ್ನ ಕಚೇರಿಯ ಹತ್ತು ಅಡಿ ದೂರದಲ್ಲೇ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಯಿತು. ಶಾಸಕನ ಖಾಸಗಿ ಗನ್‌ಮ್ಯಾನ್‌ಗಳಿಂದಲೇ ಫೈರಿಂಗ್ ಆಗಿದ್ದು ಎಂದು ಎಸ್‌ಪಿ ಹೇಳಿದರು. ಸಿಎಂ ಅವರು ಗಂಭೀರವಾಗಿ ಅವರ ಮನೆ ಬಳಿ ಬ್ಯಾನರ್ ಯಾಕೆ ಕಟ್ಟಿದ್ರು ಅಂತ ಹೇಳಿದರು. ಆದರೆ, ಡಿಸಿಎಂ ಅವರು ತಮ್ಮ ಪಕ್ಷದ ಶಾಸಕನ ಪರ ನಿಂತ್ಕೊಂಡರು. ಆ ಶಾಸಕನ ತಪ್ಪಿದರೂ ಡಿಸಿಎಂ ಪರ ನಿಂತರು ಎಂದು ದೂರಿದರು.

ನಾನು ಈ ಪ್ರಕರಣ ಇಲ್ಲಿಗೇ ಬಿಡಲ್ಲ, ಹೋರಾಟ ಮಾಡುತ್ತೇನೆ. ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಗರದ ವಾರ್ಡ್​ಗಳಲ್ಲಿ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿ ಹೋಗಿದ್ದಾರೆ. ಜನಾರ್ದನ ರೆಡ್ಡಿ ಕುಟುಂಬ ಅಂತ್ಯ ಮಾಡಲು ಹೊರಟಿದ್ದಾರೆ. ಸಿಎಂ ಅವರಿಗೆ ನಾನು ಕೈಜೋಡಿಸಿ ಕೇಳಿಕೊಳ್ಳುತ್ತೇನೆ. ರಾಜಕೀಯವಾಗಿ ನಮ್ಮ ನಿಮ್ಮ ಹೋರಾಟ, ಪಾದಯಾತ್ರೆ ಬೇರೆ. ದೇವರಿಚ್ಚೆ ಇತ್ತೇನೋ ನಾನು ಜೈಲಿಗೆ ಹೋಗಿ ಬಂದೆ.

ಬಳ್ಳಾರಿಯಲ್ಲಿ ಕಾನೂನು ಕಾಪಾಡಿ, ನಗರಕ್ಕೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ. ಅಧಿಕಾರ ಇರಲಿ ಬಿಡಲಿ ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿಯಲ್ಲಿ ಶಾಸಕರು ಅಭಿವೃದ್ಧಿ ಮಾಡಲಿ, ತಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಲಿ. ಗ್ಯಾಂಗ್ ಇಟ್ಕೊಂಡು ಗನ್, ರೈಫಲ್ ಇಟ್ಕೊಂಡು ಓಡಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಇರಾನ್, ಅಮೆರಿಕ ಸೇರಿದಂತೆ ಇತರ ದೇಶಗಳಿಂದ ಖಾಸಗಿ ಭದ್ರತೆ ಪಡೆಯಬೇಕು ಎಂಬ ಡಿಕೆಶಿ ಹೇಳಿಕೆಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಳ್ಳಾರಿ ನಗರದ ಪ್ರತಿಯೊಂದು ವಾರ್ಡಿನಲ್ಲೂ ಯುವಕರು ಗ್ಯಾಂಗ್‌ಸ್ಟರ್‌ಗಳಾಗಿ ಮಾರ್ಪಟ್ಟಿದ್ದಾರೆ. ಗಾಂಜಾ ಮಾರಾಟ, ಮಟ್ಕಾ ಜೂಜು, ಅಕ್ರಮ ಕ್ಲಬ್‌ಗಳಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ನಿರ್ಬಂಧವಿಲ್ಲದೆ ನಡೆಯುತ್ತಿದೆ. ಈ ಅಕ್ರಮಗಳ ಮುಂದುವರೆಸಲು ನನ್ನನ್ನು ದೂರ ಮಾಡಲು ಅವರು ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com