ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ 2028ರ ಚುನಾವಣೆಯಲ್ಲಿ ಗೆಲುವು: ನನಗೆ ಸಚಿವ ಸ್ಥಾನ ಬೇಡ; KN ರಾಜಣ್ಣ

ಸಿದ್ದರಾಮಯ್ಯ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಜನ ನಾಯಕರೆಂದು ಗುರುತಿಸಿಕೊಂಡ ವರ ಶಕ್ತಿ, ಜನಪ್ರಿಯತೆಯನ್ನು ತುಳಿಯಲು ಸಾಧ್ಯವೂ ಇಲ್ಲ ಎಂದರು.
KN Rajanna
ಕೆ.ಎನ್. ರಾಜಣ್ಣ
Updated on

ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಜನ ನಾಯಕ. ಅವರನ್ನು ದೂರ ಇಟ್ಟು ಪಕ್ಷ ಸಂಘಟನೆ ಮಾಡುತ್ತೇವೆಂದರೆ, ಅದು ಒಂದು ದೊಡ್ಡ ಪ್ರಮಾದವಾಗಲಿದೆ ಎಂದು ಶಾಸಕ ಕೆ.ಎನ್‌. ರಾಜಣ್ಣ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಮಾತ್ರ ನಾವು 2028ರ ಚುನಾವಣೆ ಗೆಲ್ಲುತ್ತೇವೆ ಎಂದೂ ಹೇಳಿದರು. ಸದ್ಯದಲ್ಲಿಯೇ ಪಾಲಿಕೆ ಚುನಾವಣೆ ಎದುರಿಸಬೇಕಾಗುತ್ತದೆ.

ಸಿದ್ದರಾಮಯ್ಯ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಜನ ನಾಯಕರೆಂದು ಗುರುತಿಸಿಕೊಂಡ ವರ ಶಕ್ತಿ, ಜನಪ್ರಿಯತೆಯನ್ನು ತುಳಿಯಲು ಸಾಧ್ಯವೂ ಇಲ್ಲ ಎಂದರು.

ಇನ್ನೂ ಸಚಿವ ಸ್ಥಾನಕ್ಕಾಗಿ ಶಾಸಕರು ಲಾಭಿ ನಡೆಸುತ್ತಿರುವ ನಡುವೆ ನನಗೆ ಮಂತ್ರಿ ಸ್ಥಾನ ಬೇಡ ಎಂದು ಶಾಸಕ ರಾಜಣ್ಣ ಹೇಳಿದ್ದಾರೆ. ನನಗೆ ಕೊಟ್ಟರೂ ಸಚಿವ ಸ್ಥಾನ ಬೇಡ. ಹಾಗೆಂದು ವೈರಾಗ್ಯ ಎಂದೇನೂ ಇಲ್ಲ. ನಾನು ಎರಡು ವರ್ಷ ಸಚಿವನಾಗಿ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ, ದಕ್ಷತೆಯಿಂದ ಮಾಡಿದ್ದೇನೆ. ಹೀಗಾಗಿ, ಬೇರೆಯವರಿಗೂ ಅವಕಾಶ ಕೊಡಲಿ ಎಂದರು.

KN Rajanna
ಚಪ್ಪಲಿ ಎಸೆತ ಪ್ರಕರಣ: ನನ್ನ ಕುಟುಂಬವನ್ನು ಕೀಳಾಗಿ ನಿಂದಿಸಿದರು; ಸಿದ್ದರಾಮಯ್ಯ ಮುಂದೆ ಪ್ರದೀಪ್ ಈಶ್ವರ್ ಕಣ್ಣೀರು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com