ಬಳ್ಳಾರಿ: 55 ಸಾವಿರ ಲಂಚದ ಹಣ ಹಂಚಿಕೊಳ್ಳುತ್ತಿದ್ದ ಇಂಜಿನಿಯರ್‌ಗಳನ್ನು ಬಂಧಿಸಿದ Lokayukta!

ನೀರು ಮತ್ತು ಒಳಚರಂಡಿ ಎಸ್ಟಿಮೇಟ್‌ಗೆ ಅನುಮತಿ ನೀಡಲು 75,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಇಂಜಿನಿಯರ್ ಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
Karnataka Lokayukta
ಕರ್ನಾಟಕ ಲೋಕಾಯುಕ್ತ
Updated on

ಬಳ್ಳಾರಿ: ನೀರು ಮತ್ತು ಒಳಚರಂಡಿ ಎಸ್ಟಿಮೇಟ್‌ಗೆ ಅನುಮತಿ ನೀಡಲು 75,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಇಂಜಿನಿಯರ್ ಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಇಂಜಿನಿಯರ್ ಗಳಾದ ಅಶೋಕ್ ಮತ್ತು ಕಾಶಿನಾಥ್ ರಿಯಲ್ ಎಸ್ಟೇಟ್ ಉದ್ಯಮಿ ವೀರೇಶ್ ಅವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 55,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Karnataka Lokayukta
ಶ್ರೀರಂಗಪಟ್ಟಣದಲ್ಲಿ 200 ಎಕರೆ ಭೂಕಬಳಿಕೆ ಬಯಲಿಗೆಳೆದ ಲೋಕಾಯುಕ್ತ; 9 ಜನರ ಬಂಧನ, ADLR ಅಧಿಕಾರಿ ಮೊಹಮ್ಮದ್ ಪರಾರಿ!

ಬಳ್ಳಾರಿಯಲ್ಲಿ 2.47 ಎಕರೆಯ ಖಾಸಗಿ ಲೇಔಟ್ ಗೆ ಅನುಮತಿ ನೀಡಲು ಲಂಚ ನೀಡುವಂತೆ ಒತ್ತಾಯಿಸಿದ್ದರು. ಅದರಂತೆ 55,000 ಲಂಚ ಪಡೆದು ಹಣ ಹಂಚಿಕೊಳ್ಳುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com