ದೆಹಲಿಯಲ್ಲಿ ತಂದೆ ಮನೆಗೆ ಹೋದ್ರೂ ಪ್ರಿಯಾಂಕ್ ಖರ್ಗೆ AICC ಅಧ್ಯಕ್ಷರ ಮನೆಗೆ ಹೋದ್ರು ಅಂತ ಹಾಕ್ತೀರಾ, ಕಾಫಿ ಕುಡಿಯೋದಕ್ಕೂ ಶಾಸಕರು ಒಟ್ಟು ಸೇರ್ಬಾರ್ದಾ? -Video

ಬೆಂಗಳೂರಿನಲ್ಲಿಂದು ಸುದ್ದಿಗಾರರು ಸಂಪುಟ ವಿಸ್ತರಣೆಯ ಹೊತ್ತಿನಲ್ಲಿ ಒಕ್ಕಲಿಗ ಶಾಸಕರು ಒಟ್ಟಿಗೆ ಸೇರಿ ಡಿನ್ನರ್ ಸಭೆ ಮಾಡಿದ್ದರು ಎಂದು ಹೇಳಿದಾಗ, ಸೇರಬಾರದು ಎಂಬ ನಿಯಮ ಇದೆಯೇ, ನಾವು ಕಾಫಿ ಕುಡಿಯೋದಿಕ್ಕೆ ಹೋದರೂ ಸಂಘಟಿತರಾಗುತ್ತಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಹಾಕಿದರೆ ಹೇಗೆ ಎಂದು ಕೇಳಿದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ನಾವು ಕಾಂಗ್ರೆಸ್ ನಾಯಕರು ಊಟ-ತಿಂಡಿ ಮಾಡಲು ಕೂಡ ಒಟ್ಟು ಸೇರಬಾರದಾ, ಅದಕ್ಕೂ ನಿರ್ಬಂಧವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರು ಸಂಪುಟ ವಿಸ್ತರಣೆಯ ಹೊತ್ತಿನಲ್ಲಿ ಒಕ್ಕಲಿಗ ಶಾಸಕರು ಒಟ್ಟಿಗೆ ಸೇರಿ ಡಿನ್ನರ್ ಸಭೆ ಮಾಡಿದ್ದರು ಎಂದು ಹೇಳಿದಾಗ, ಸೇರಬಾರದು ಎಂಬ ನಿಯಮ ಇದೆಯೇ, ನಾವು ಕಾಫಿ ಕುಡಿಯೋದಿಕ್ಕೆ ಹೋದರೂ ಸಂಘಟಿತರಾಗುತ್ತಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಹಾಕಿದರೆ ಹೇಗೆ ಎಂದು ಕೇಳಿದರು.

ಮೊನ್ನೆ ನಾನು ದೆಹಲಿಗೆ ಹೋಗಿದ್ದಾಗ ನಮ್ಮ ಮನೆಗೇ ಹೋಗಿದ್ದೆ. ಅಂದರೆ ನನ್ನ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ. ಮಾಧ್ಯಮದವರು ಪ್ರಿಯಾಂಕ್ ಖರ್ಗೆ ಎಐಸಿಸಿ ಅಧ್ಯಕ್ಷರ ಮನೆಗೆ ಹೋಗ್ತಾ ಇದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಹಾಕಿದರು. ನಾನು ದೆಹಲಿಗೆ ಹೋದರೆ ಅಲ್ಲೇ ಇರೋದಲ್ವಾ ಎಂದು ನಗುತ್ತಾ ಕೇಳಿದರು.

ಸಂಪೂರ್ಣ ಸಂಪುಟ ವಿಸ್ತರಣೆ ಸದ್ಯದಲ್ಲಿಯೇ ನಡೆಯಬಹುದು, ಇನ್ನೊಂದೆರಡು ವಾರದಲ್ಲಿ ನಡೆಯಬಹುದು ಎಂದರು.

Priyank Kharge
'ಮೋದಿ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಬಿಜೆಪಿಯವರು ಹೇಳಲಿ, ಯಾರು ಬೇಡ ಅಂದವರು?: ಪ್ರಿಯಾಂಕ್ ಖರ್ಗೆ-Video

ಸರ್ಕಾರದಲ್ಲಿ ಎನ್ ಐಆರ್ ಇಲಾಖೆ ಸ್ಥಾಪಿಸುವ ಬಗ್ಗೆ ಆಕ್ಷೇಪದ ಪ್ರಶ್ನೆಯಲ್ಲ, ಕರ್ನಾಟಕ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ನಮ್ಮ ಮಾನವ ಸಂಪನ್ಮೂಲ ಜಗತ್ತಿನ ಎಲ್ಲಾ ಕಡೆ ಇದೆ, ಕೆಲವು ನೀತಿ ನಿಯಮಗಳನ್ನು ಸರ್ಕಾರದ ಮಟ್ಟದಲ್ಲಿ ತಂದಾಗ ಅದು ಬಂಡವಾಳ ಸಂಗ್ರಹ, ಉದ್ಯೋಗ ಸೃಷ್ಟಿಗೆ ಹೇಗೆ ಅನುಕೂಲ ಆಗಬಹುದು ಎಂದು ನೋಡಬೇಕು. ಬೇರೆ ಬೇರೆ ಇಲಾಖೆಗಳಲ್ಲಿ ನಡೆಯುತ್ತಿದೆ. ವಿದೇಶ ಬಂಡವಾಳ ಹರಿವಿಗೆ ಉತ್ತಮ ಇಲಾಖೆ ಬೇಕಾಗಿದೆ. ಇಂದು ಭೌಗೋಳಿಕ ಭೂದೃಶ್ಯ ಬದಲಾಗಿದೆ. ಹೋದ ವರ್ಷ 60 ದೇಶಗಳ ರಾಯಭಾರಿಗಳು ಬಂದಿದ್ದರು. ಕೊಡು-ಕೊಳ್ಳುವಿಕೆ ಆಗುತ್ತದೆ, ವ್ಯವಸ್ಥಿತವಾಗಿ ಇಲಾಖೆ ಮಾಡಿದಾಗ ಸಂಪರ್ಕವಾಗುತ್ತದೆ, ಇಲಾಖೆ ಸ್ಥಾಪನೆ ಪ್ರಕ್ರಿಯೆಯಲ್ಲಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com