ತೀವ್ರ ವಿರೋಧದ ಬೆನ್ನಲ್ಲೇ ಸಿಎಂ ಮಾಧ್ಯಮ ಕಾರ್ಯದರ್ಶಿ ರಾಘವೇಂದ್ರ ಭಟ್ ನೇಮಕಾತಿ ವಾಪಸ್: ರಾಜ್ಯ ಸರ್ಕಾರ ಆದೇಶ

ಸಿಎಂ ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ನೇಮಕವಾಗಿದ್ದ ರಾಘವೇಂದ್ರ ಭಟ್ ನೇಮಕಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Raghavendra Bhat
ರಾಘವೇಂದ್ರ ಭಟ್
Updated on

ಬೆಂಗಳೂರು: ಸಿಎಂ ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ನೇಮಕವಾಗಿದ್ದ ರಾಘವೇಂದ್ರ ಭಟ್ ನೇಮಕಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜುಲೈ 8ರಂದು ಮಾಧ್ಯಮ ಕಾರ್ಯದರ್ಶಿ-1 ಹುದ್ದೆಗೆ ಟಿ. ತ್ಯಾಗರಾಜ್, ಮಾಧ್ಯಮ ಕಾರ್ಯದರ್ಶಿ-2 ಹುದ್ದೆಗೆ ಆರ್. ಜಯಪ್ರಕಾಶ್ ಮತ್ತು ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ರಾಘವೇಂದ್ರ ಭಟ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ರಾಘವೇಂದ್ರ ಭಟ್ ನೇಮಕಾತಿಯನ್ನು ವಾಪಸ್ ಪಡೆದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೂತನ ಅಧಿಸೂಚನೆ ಹೊರಡಿಸಿದೆ.

Raghavendra Bhat
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಧ್ಯಮ ಕಾರ್ಯದರ್ಶಿಯಾಗಿ ಪಿ.ತ್ಯಾಗರಾಜ್ ಸೇರಿದಂತೆ ಮೂವರನ್ನು ನೇಮಿಸಿ ಸರ್ಕಾರ ಆದೇಶ!

ರಾಘವೇಂದ್ರ ಭಟ್ ನೇಮಕಾತಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿರುದ್ಧ ರಾಘವೇಂದ್ರ ಭಟ್ ಟೀಕಿಸಿದ್ದರು ಎನ್ನಲಾದ ಪೋಸ್ಟ್ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಅವರ ನೇಮಕಾತಿಯನ್ನು ಅಮಾನತಿನಲ್ಲಿ ಇರಿಸಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com