ಸುರತ್ಕಲ್: ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ದೋಣಿ ಪಲ್ಟಿ; ಕೂದಲೆಳೆ ಅಂತರದಲ್ಲಿ 6 ಮೀನುಗಾರರ ರಕ್ಷಣೆ; Video

ಈ ದೋಣಿ ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟಿತ್ತು ಎನ್ನಲಾಗಿದೆ. ದೋಣಿಯಲ್ಲಿ ಆಂಧ್ರಪ್ರದೇಶ ಮೂಲದ ಆರು ಮೀನುಗಾರರಿದ್ದರು.
Narrow escape for 6 fishermen as fishing boat capsizes near Surathkal
6 ಮೀನುಗಾರರ ರಕ್ಷಣೆ
Updated on

ಮಂಗಳೂರು: ಮಂಗಳೂರಿನ ಹೊರವಲಯದ ಸುರತ್ಕಲ್‌ನ NITK ಬೀಚ್ ಬಳಿ ಶುಕ್ರವಾರ ಸಮುದ್ರದ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ದೋಣಿ ಪಲ್ಟಿಯಾಗಿದ್ದು, ಕೂದಲೆಳೆ ಅಂತರದಲ್ಲಿ ದೋಣಿಯಲ್ಲಿದ್ದ 6 ಮೀನುಗಾರರನ್ನು ರಕ್ಷಿಸಲಾಗಿದೆ.

ಈ ದೋಣಿ ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟಿತ್ತು ಎನ್ನಲಾಗಿದೆ. ದೋಣಿಯಲ್ಲಿ ಆಂಧ್ರಪ್ರದೇಶ ಮೂಲದ ಆರು ಮೀನುಗಾರರಿದ್ದರು. ಮೀನುಗಾರಿಕೆ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ದೋಣಿ ಪಲ್ಟಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, NITK ಬೀಚ್ ತಲುಪಿದಾಗ ಬಿರುಗಾಳಿಯಿಂದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ.

ದೊಡ್ಡ ಅಲೆಯ ಹೊಡೆತಕ್ಕೆ ದೋಣಿ ಉರುಳಿಬಿದ್ದಿದ್ದು, ತಕ್ಷಣ ಸ್ಥಳೀಯ ಮೀನುಗಾರರು ನೆರವಿಗೆ ಧಾವಿಸಿ ನೀರಿನಲ್ಲಿ ಮುಳುಗುತ್ತಿದ್ದ 6 ಮೀನುಗಾರರನ್ನು ರಕ್ಷಿಸಿರುವುದಾಗಿ ಮೀನುಗಾರರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಮೀನುಗಾರರಿಗೆ ಗಂಭೀರ ಗಾಯಗಳಾಗಿಲ್ಲ.

ರಕ್ಷಿಸಲ್ಪಟ್ಟ ಆರು ಮೀನುಗಾರರು
ರಕ್ಷಿಸಲ್ಪಟ್ಟ ಆರು ಮೀನುಗಾರರು
Narrow escape for 6 fishermen as fishing boat capsizes near Surathkal
ಮಂಗಳೂರು: ಸಮುದ್ರದಲ್ಲಿ ಬಿರುಗಾಳಿಗೆ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದ ದೋಣಿಯಿಂದ 6 ಮೀನುಗಾರರ ರಕ್ಷಣೆ! Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com