ಧರ್ಮಸ್ಥಳ: ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ಪ್ರಕರಣ; ಮೂವರ DNA ಹೊಂದಾಣಿಕೆ ದೃಢ- FSL ವರದಿ

ಪತ್ತೆಯಾದ ಮಾನವ ಅವಶೇಷಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣಗಳನ್ನು (UDR) ದಾಖಲಿಸಲಾಯಿತು.
Ayyappa, Adishesha Narayana, Krishnappa
ಅಯ್ಯಪ್ಪ, ಆದಿಶೇಷ ಮತ್ತು ಕೃಷ್ಣಪ್ಪ
Updated on

ಮಂಗಳೂರು: ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಮೀಸಲು ಅರಣ್ಯ ಪ್ರದೇಶದಲ್ಲಿ ಎಸ್ ಐಟಿ ಅಧಿಕಾರಿಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಮೂರು ಅಸ್ಥಿಪಂಜರಗಳ ಡಿಎನ್ಎ ಹೊಂದಾಣಿಕೆಯಾಗಿದೆ ಎಂದು ಎಫ್ ಎಸ್ ಎಲ್ ದೃಢಪಡಿಸಿದೆ. ಡಿಎನ್ ಎ ಮೂಲಕ ಪತ್ತೆಯಾದವರನ್ನು ಕೊಡಗು ಜಿಲ್ಲೆಯ ಯುಬಿ ಅಯ್ಯಪ್ಪ, ತುಮಕೂರಿನ ಆದಿಶೇಷ ನಾರಾಯಣ ಮತ್ತು ಕೋಲಾರದ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.

ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದವರ ಹಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೊಂಡಿದ್ದ ಮಾಜಿ ನೈರ್ಮಲ್ಯ ಕಾರ್ಮಿಕ ಹಾಗೂ ಈ ಪ್ರಕರಣದ ದೂರುದಾರರಾದ ಚಿನ್ನಯ್ಯ ಅವರು, ಈ ಹಿಂದೆ ಬಂಗ್ಲೆಗುಡ್ಡೆ ಪ್ರದೇಶದಿಂದ ಮಾನವ ತಲೆಬುರುಡೆಯೊಂದನ್ನು ತಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಆ ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ SIT (ವಿಶೇಷ ತನಿಖಾ ತಂಡ) 7 ಮಾನವ ತಲೆಬುರುಡೆಗಳು ಮತ್ತು ಇತರ ಅವಶೇಷಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿತು.

ಪತ್ತೆಯಾದ ಮಾನವ ಅವಶೇಷಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣಗಳನ್ನು (UDR) ದಾಖಲಿಸಲಾಯಿತು. ನಂತರ, ಹೆಚ್ಚಿನ ವಿಶ್ಲೇಷಣೆಗಾಗಿ ಈ ಅವಶೇಷಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಯಿತು. ವಿಧಿವಿಜ್ಞಾನ ತಜ್ಞರ ಪ್ರಕಾರ, ಪತ್ತೆಯಾದ ಎಲ್ಲಾ ಅವಶೇಷಗಳು ಪುರುಷರಿಗೆ ಸೇರಿದವಾಗಿವೆ.

ಅಂದಿನಿಂದ, ಕರ್ನಾಟಕ, ನೆರೆಯ ಕೇರಳ, ತೆಲಂಗಾಣ ಮತ್ತು ಇತರ ದಕ್ಷಿಣ ರಾಜ್ಯಗಳ 'ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ'ದಲ್ಲಿ (State Crime Record Bureau) ದಾಖಲಾಗಿರುವ ನಾಪತ್ತೆ ಪ್ರಕರಣಗಳ ವಿವರಗಳನ್ನು, ವಿಶೇಷವಾಗಿ ಧರ್ಮಸ್ಥಳದಲ್ಲಿ ನಾಪತ್ತೆಯಾದವರ ಮಾಹಿತಿಯನ್ನು SIT ಸಂಗ್ರಹಿಸುತ್ತಿದೆ. ಪತ್ತೆಯಾದ ಅವಶೇಷಗಳ ಕುರಿತು ವಿಧಿವಿಜ್ಞಾನ ವೈದ್ಯರು ನೀಡಿರುವ ಮಾಹಿತಿಯ ಆಧಾರದ ಮೇಲೆ, SIT ಈಗ ಅವುಗಳನ್ನು ನಾಪತ್ತೆ ಪ್ರಕರಣಗಳೊಂದಿಗೆ ಹೋಲಿಸಿ ಪರಿಶೀಲಿಸುತ್ತಿದೆ.

ಪತ್ತೆಯಾದ ಏಳು ಮಂದಿಯ ಅವಶೇಷಗಳ ಪೈಕಿ, ಕಾಣೆಯಾಗಿದ್ದ ಮೂವರ ಡಿಎನ್‌ಎ (DNA) ಹೊಂದಾಣಿಕೆಯನ್ನು ಎಸ್‌ಐಟಿ (SIT) ಇದೀಗ ಖಚಿತಪಡಿಸಿದೆ. ಇವರಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ 70 ವರ್ಷದ ಯು.ಬಿ. ಅಯ್ಯಪ್ಪ (ಇವರ ಗುರುತಿನ ಚೀಟಿ ಅಸ್ಥಿಪಂಜರಗಳೊಂದಿಗೆ ಸ್ಥಳದಲ್ಲಿ ಪತ್ತೆಯಾಗಿತ್ತು ಮತ್ತು ಇವರು ಏಳು ವರ್ಷಗಳ ಹಿಂದೆ ಕಾಣೆಯಾಗಿದ್ದರು ಎಂದು ವರದಿಯಾಗಿತ್ತು) ತುಮಕೂರು ಜಿಲ್ಲೆಯ ಗುಬ್ಬಿಯ 27 ವರ್ಷದ ಆದಿಶೇಷ ನಾರಾಯಣ (ಇವರು 2013ರಲ್ಲಿ ಕಾಣೆಯಾಗಿದ್ದರು ಮತ್ತು ಇವರ ಚಾಲನಾ ಪರವಾನಗಿಯನ್ನು ಎಸ್‌ಐಟಿ ತಂಡವು ಬಂಗ್ಲೆಗುಡ್ಡೆಯಿಂದ ವಶಪಡಿಸಿಕೊಂಡಿತ್ತು) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ 85 ವರ್ಷದ ಕೃಷ್ಣಪ್ಪ ಸೇರಿದ್ದಾರೆ.

Ayyappa, Adishesha Narayana, Krishnappa
ಧರ್ಮಸ್ಥಳ ಬುರಡೆ ಪ್ರಕರಣ: ಕೊನೆಗೂ ಬೆಳ್ತಂಗಡಿ ನ್ಯಾಯಾಲಯಕ್ಕೆ 7000 ಪುಟಗಳ ಅಂತಿಮ ವರದಿ ಸಲ್ಲಿಸಿದ SIT

ಅವರ ಸಾವಿಗೆ ನಿಖರವಾದ ಕಾರಣ ಖಚಿತಪಡಿಸಿಕೊಳ್ಳಲು ಬೇರೆ ಯಾವುದೇ ಮಾರ್ಗವಿಲ್ಲದಿದ್ದರೆ, ಈ ಮೂರು ಪ್ರಕರಣಗಳನ್ನು ಅಸಹಜ ಸಾವು ಅಥವಾ ಆತ್ಮಹತ್ಯೆ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ. "ಇನ್ನೂ ಮೂರು ತಲೆಬುರುಡೆಗಳು ಮತ್ತು ಇತರ ಅಸ್ಥಿಪಂಜರದ ಅವಶೇಷಗಳ ಡಿಎನ್‌ಎ ಹೊಂದಾಣಿಕೆಯ ಪ್ರಕ್ರಿಯೆ ನಡೆಯುತ್ತಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com