GBA ಹವಾಮಾನ ಡ್ರೈವ್, 1 KM ನಡಿಗೆ ಅಭಿಯಾನ: ಏಳಿ-ಎದ್ದೇಳಿ, ಜಡತ್ವ ಬಿಟ್ಟು ನಡೆಯಿರಿ; ಮಾಲಿನ್ಯ ರಹಿತ ಬೆಂಗಳೂರಿಗೆ ಕೊಡುಗೆ ನೀಡಿ!

ಜನರು ಮೋಟಾರು ಸಾರಿಗೆಯನ್ನು ಆಯ್ಕೆ ಮಾಡುವ ಬದಲು ಒಂದು ಕಿಲೋಮೀಟರ್‌ಗಿಂತ ಕಡಿಮೆ ಪ್ರಯಾಣಕ್ಕಾಗಿ ನಡೆಯಬೇಕೆಂದು ಒತ್ತಾಯಿಸಿದೆ.
GBA
ಜಿಬಿಎ
Updated on

ಬೆಂಗಳೂರು: ವಾಹನ ದಟ್ಟಣೆ, ವಾಯು ಮಾಲಿನ್ಯ ಮತ್ತು ಜಡ ಜೀವನಶೈಲಿಯಿಂದ ಜನರನ್ನು ಹೊರ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಹವಾಮಾನ ಕ್ರಿಯಾ ಕೋಶವು #1KmChallenge ಅನ್ನು ಪ್ರಾರಂಭಿಸಿದೆ.

ಜನರು ಮೋಟಾರು ಸಾರಿಗೆಯನ್ನು ಆಯ್ಕೆ ಮಾಡುವ ಬದಲು ಒಂದು ಕಿಲೋಮೀಟರ್‌ಗಿಂತ ಕಡಿಮೆ ಪ್ರಯಾಣಕ್ಕಾಗಿ ನಡೆಯಬೇಕೆಂದು ಒತ್ತಾಯಿಸಿದೆ.

ಅಭಿಯಾನದ ಪ್ರಕಾರ, 10 ನಿಮಿಷಗಳ ನಡಿಗೆಯು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ದೈಹಿಕ ಆರೋಗ್ಯವನ್ನು ಸುಧಾರಿಸಲು, ನಗರದ ರಸ್ತೆಗಳಲ್ಲಿ ಸಂಚಾರವನ್ನು ಸುಲಭಗೊಳಿಸಲು ಮತ್ತು ಬೆಂಗಳೂರಿಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ.

ಜೂನ್‌ನಲ್ಲಿ ಒಂದು ತಿಂಗಳ ಕಾಲ ನಡೆವ ಅಭಿಯಾನದಲ್ಲಿ ಬೆಂಗಳೂರಿಗರು ಭಾಗವಹಿಸಿ ಸ್ನೇಹಿತರು ಮತ್ತು ಕುಟುಂಬಸ್ಥರು ಸಣ್ಣ ಪ್ರಯಾಣಕ್ಕೆ ವಾಹನಗಳ ಬದಲು ನಡೆದು ಸ್ಥಳ ತಲುಪುವಂತೆ ಸವಾಲು ಹಾಕಲು ಪ್ರೋತ್ಸಾಹಿಸುತ್ತದೆ. ಈ ಅಭಿಯಾನವು ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

GBA
ಹಿಮಾಲಯದಲ್ಲಿ ಕರಗುತ್ತಿರುವ ಮಂಜುಗಡ್ಡೆ, ನೀರಿನ ಮಟ್ಟ ಇಳಿಕೆ ಆತಂಕಕಾರಿ: ತಜ್ಞರ ಗಂಭೀರ ಕಳವಳ

ಅತಿಕ್ರಮಣಗೊಂಡ ರಸ್ತೆಗಳು, ಅಸ್ತಿತ್ವದಲ್ಲಿಲ್ಲದ ಪಾದಚಾರಿ ಮಾರ್ಗಗಳು, ಕಸ ಸುರಿಯುವುದು, ತೆರೆದ ಚರಂಡಿಗಳು ಮತ್ತು ಅಸುರಕ್ಷಿತ ರಸ್ತೆ ಗಳನ್ನು ಸರಿಪಡಿಸಿ ಪಾದಚಾರಿಗಳನ್ನು ಕ್ಯಾರೇಜ್‌ವೇಗೆ ಬದಲಾಯಿಸುತ್ತವೆ ಎಂದು ಉಲ್ಲೇಖಿಸಿರುವ ಜಿಬಿಎ ಅಧಿಕಾರಿಗಳು ಅನೇಕ ಪ್ರದೇಶಗಳಲ್ಲಿ ನಡೆದಿರುವ ಪ್ರಾಯೋಗಿಕ ಅಭಿಯಾನವನ್ನು ಉಲ್ಲೇಖಿಸಿದ್ದಾರೆ.

ನಾಗರಿಕರಿಗೆ ನಡಿಗೆಯನ್ನು ಉತ್ತೇಜಿಸುವ ಮೊದಲು ಅಗಲವಾದ, ಸೂಕ್ತ ಮತ್ತು ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ ಮತ್ತು ನಿರ್ವಹಣೆಗೆ ಆದ್ಯತೆ ನೀಡಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com