ರಾಜ್ಯದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ; ತಂದೆಗೆ ಶುಭಾಶಯ ಕೋರಿದ ಪುತ್ರಿ ಐಶ್ವರ್ಯಾ! ಪೋಸ್ಟ್ ವೈರಲ್

ಈ ಹಿಂದೆ ಐಶ್ವರ್ಯಾ ಮಾತನಾಡಿದ್ದ ವಿಡಿಯೋವೊಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲಿ ನಮ್ಮ ಅಪ್ಪ ಯಾಕೆ ಸಿಎಂ ಆಗಬೇಕು ಎಂದು ಅವರು ವಿವರಿಸಿದ್ದಾರೆ.
Aishwarya DKS
ಡಿಕೆಶಿ ಪುತ್ರಿ ಐಶ್ವರ್ಯಾ
Updated on

ಬೆಂಗಳೂರು: ಡಿಕೆ ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಅವರ ಪುತ್ರಿ ಐಶ್ವರ್ಯ DKS ಹೆಗ್ಡೆ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಅಭಿನಂದನೆಗಳು ಅಪ್ಪ' ಎಂಬ ಸಂದೇಶದೊಂದಿಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದು, ಜನರು ಕೂಡಾ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ಹಿಂದೆ ಐಶ್ವರ್ಯಾ ಮಾತನಾಡಿದ್ದ ವಿಡಿಯೋವೊಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲಿ ನಮ್ಮ ಅಪ್ಪ ಯಾಕೆ ಸಿಎಂ ಆಗಬೇಕು ಎಂದು ಅವರು ವಿವರಿಸಿದ್ದಾರೆ.

ಇವತ್ತು ಜನ ಬಂಡೆ ಎಂದು ಕರೆಯಬಹುದು. ಆದರೆ, ಆ ಬಂಡೆ ರೂಪುಗೊಳ್ಳುವುದಕ್ಕೆ ಎಷ್ಟು ಸಮಯ ತೆಗೆದುಕೊಂಡಿದೆ ಅಂತಾ ನಾವು ಚಿಕ್ಕ ವಯಸ್ಸಿನಿಂದ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಅಪ್ಪ ಏನು ಮಾಡುತ್ತಾರೋ? ಏನೆಲ್ಲಾ ಬದಲಾವಣೆ ತರುತ್ತಾರೋ ಎಂದು ನಾವೆಲ್ಲಾ ಕುತೂಹಲದಿಂದ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Aishwarya DKS
ಗೆಲ್ಲುವವರೆಗೂ ಮನೆಗೆ ತೆರಳದೆ ಆಟವಾಡುತ್ತಿದ್ದ 'ಛಲದಂಕ ಮಲ್ಲ': ಡಿಕೆ ಶಿವಕುಮಾರ್ ಬಾಲ್ಯದ ಬಗ್ಗೆ ದೊಡ್ಡಾಲಹಳ್ಳಿ ಗ್ರಾಮಸ್ಥರ ವಿವರಣೆ
Aishwarya DKS
18ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಇಂದು ಪ್ರಮಾಣ ವಚನ: 15 ಸಚಿವರು ಸಂಪುಟ ಸೇರುವ ಸಾಧ್ಯತೆ; ಮೊದಲ ಪಟ್ಟಿಯಿಂದ ಹೆಬ್ಬಾಳ್ಕರ್ ಔಟ್?

ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ, ಮಗಳೇ ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶಗಳನ್ನು ಮಾತ್ರ ಕೊಡ್ತಾನೆ. ನಮ್ಮ ಅಪ್ಪ ದೊಡ್ಡ ಮಹತ್ವಾಕಾಂಕ್ಷೆಯ, ಧ್ಯೇಯ ಹೊಂದಿರುವ ವ್ಯಕ್ತಿ. ಜನಗಳಿಗಾಗಿ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತು. ಅವರ ಮುಂದಿನ ಹಾದಿ ಸುಗಮವಾಗಿರಲಿ. ಲವ್‌ ಯು ಅಪ್ಪ ಎಂದು ಅವರು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com