ಮಾಜಿ ಎಂಎಲ್‌ಸಿ ದಯಾನಂದ ರೆಡ್ಡಿ ಕಿಡ್ನ್ಯಾಪ್‌ ಕೇಸ್: 3 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಅರೆಸ್ಟ್

ಕೇರಳ ಮೂಲದ ಪ್ರವೀಣ್, ರೋಮಿಯೋ ಮಾರ್ಟಿನ್, ಅಶಿಕ್ ಮತ್ತು ಆದರ್ಶ್ ಬಂಧಿತ ಆರೋಪಿಗಳು. ಅಪಹರಣ ಪ್ರಕರಣ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
Ex-MLC Dayananda Reddy
ದಯಾನಂದ ರೆಡ್ಡಿ
Updated on

ಆನೇಕಲ್: ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರನ್ನು ಅಪಹರಿಸಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಪ್ರವೀಣ್, ರೋಮಿಯೋ ಮಾರ್ಟಿನ್, ಅಶಿಕ್ ಮತ್ತು ಆದರ್ಶ್ ಬಂಧಿತ ಆರೋಪಿಗಳು. ಅಪಹರಣ ಪ್ರಕರಣ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸೂರ್ಯನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಪೊಲೀಸರು ನಾಲ್ವರನ್ನು ಆರೋಪಿಗಳನ್ನು ಬಂಧಿಸಿ, ಕಿಡ್ನಾಪ್‌ಗೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಯಾನಂದ ರೆಡ್ಡಿ ಅವರು ಗೋಲ್ಡ್ ಕಾಯಿನ್ ಕ್ಲಬ್​ನಿಂದ ಹೊರಟಿದ್ದರು. ಈ ವೇಳೆ ಬೈಕ್​ನಲ್ಲಿ ಬಂದು ದಯಾನಂದ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿದ್ದಾರೆ.ಡೋರ್​ ಲಾಕ್ ಓಪನ್ ಮಾಡುತ್ತಿದ್ದಂತೆ

ಕಾರಿಗೆ ನುಗ್ಗಿರುವ ಓರ್ವ ಗನ್ ತೋರಿಸಿ ತಾನು ಹೇಳಿದ ಕಡೆ ಕಾರು ಚಲಾಯಿಸಲು ಸೂಚನೆ ನೀಡಿದ್ದ. ಬಳಿಕ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಇವರನ್ನು ಹಿಂಬಾಲಿಸಿದ್ದರು. ಅತ್ತಿಬೆಲೆಯ ಕೆಹೆಚ್​ಬಿ ಬಡಾವಣೆ ಬಳಿ ಮಾಜಿ ಎಂಎಲ್ ಸಿಯನ್ನು ಕರೆದೊಯ್ದು ಕೊಲೆ ಬೆದರಿಕೆ ಹಾಕಲಾಗಿದ್ದು, ನಿನ್ನ ಹತ್ಯೆಗೆ 10 ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂದು ದಯಾನಂದರೆಡ್ಡಿ ಕುತ್ತಿಗೆಗೆ ಗನ್ ಇಟ್ಟು ದುಷ್ಕರ್ಮಿಗಳು ಹೆದರಿಸಿದ್ದರು

Ex-MLC Dayananda Reddy
ಸಿನಿಮೀಯ ಶೈಲಿಯಲ್ಲಿ ಮಾಜಿ MLC ಕಿಡ್ನ್ಯಾಪ್: 3 ಕೋಟಿ ರೂ ಗೆ ಡಿಮ್ಯಾಂಡ್; ದುಷ್ಟರಿಂದ ದಯಾನಂದ ರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com