ಕೆಂಪೇಗೌಡ ಜಯಂತಿಯಂದು ರಾಜ್ಯದಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ: ಡಿಕೆ ಶಿವಕುಮಾರ್

ವಿಧಾನಸೌಧದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ಸಸಿ ನೆಟ್ಟ ನಂತರ ಮಾತನಾಡಿದ ಅವರು, ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ ಗಿಡಗಳನ್ನು ಬೆಳೆಸಬೇಕು.
DK Shivakumar and senior Congress leader Rahul Gandhi plant a sapling at Kempegowda International Airport
ವಿಮಾನ ನಿಲ್ದಾಣದಲ್ಲಿ ಗಿಡ ನೆಟ್ಟ ಸಿಎಂ ಡಿಕೆಶಿ ಮತ್ತು ರಾಹುಲ್ ಗಾಂಧಿ
Updated on

ಬೆಂಗಳೂರು: ಕೆಂಪೇಗೌಡ ಜಯಂತಿ ಅಂಗವಾಗಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ ಜೂನ್ 27 ರಂದು ಕೆಂಪೇಗೌಡ ದಿನಾಚರಣೆಯನ್ನು ಬಿಡಿಎ ವತಿಯಿಂದ ಆಚರಿಸುತ್ತಿದ್ದು, 15 ಲಕ್ಷ ಸಸಿ ನೆಡಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ವಿಶ್ವ ಪರಿಸರ ದಿನವನ್ನು, ಸಸಿ ನೆಡುವ ಅಭಿಯಾನ ಮತ್ತು ಪರಿಸರ ಜಾಗೃತಿ ಮತ್ತು ರಕ್ಷಣೆಗೆ ಕರೆ ನೀಡುವ ಮೂಲಕ ಆಚರಿಸಲಾಯಿತು. ವಿಧಾನಸೌಧದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ಸಸಿ ನೆಟ್ಟ ನಂತರ ಮಾತನಾಡಿದ ಅವರು, ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ ಗಿಡಗಳನ್ನು ಬೆಳೆಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ವಿಶ್ವ ಪರಿಸರದ ದಿನದ ಅಂಗವಾಗಿ ಇಂದು ವಿಮಾನ ನಿಲ್ದಾಣದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೊಂದಿಗೆ ಕೂಡಾ ಸಸಿ ನೆಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಹೈಕೋರ್ಟ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಪಶುವೈದ್ಯಕೀಯ ಮಂಡಳಿಯು ರಾಜ್ಯಾದ್ಯಂತ ಐದು ಕೋಟಿ ಸಸಿಗಳನ್ನು ನೆಡುವ ಮತ್ತು ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿರುವ ದೊಡ್ಡ ಪ್ರಮಾಣದ ಪರಿಸರ ಯೋಜನೆ ಪ್ರಾರಂಭಿಸಿದೆ.

DK Shivakumar and senior Congress leader Rahul Gandhi plant a sapling at Kempegowda International Airport
ಕರ್ಮ ಕರ್ಗ್ಯು ಮಠ: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮದ ಜೊತೆಗೆ ಪರಿಸರ ಸಂರಕ್ಷಣೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com