

ದಾವಣಗೆರೆ: ಪ್ರೊ. ಭಗವಾನ್ ಮತ್ತೊಮ್ಮೆ ಭಗವಂತ ಶ್ರೀರಾಮನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ. ದಶರಾಥ ಪುತ್ರ ಕಾಮೇಷ್ಠಿ ಪೂಜೆ ಮಾಡುತ್ತಾನೆ. ಆ ಪೂಜೆಯಲ್ಲಿ ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕು. ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, ರಾಮಮಂದಿರ ಏಕೆ ಬೇಕು ಎನ್ನುವ ಪುಸ್ತಕದಲ್ಲಿ ನಾನು ಈ ಬಗ್ಗೆ ಬರೆದಿದ್ದೇನೆ. ವಾಲ್ಮೀಕಿ ರಾಮಾಯಣದಲ್ಲಿ ಇದರ ಬಗ್ಗೆ ಉಲ್ಲೇಖಿಸಿರೋದಾಗಿ ಹೇಳಿದ್ದಾರೆ. ಶೂದ್ರನಾದ ಶಂಭೂಕನನ್ನು ರಾಮ ಸಾಯಿಸಿದ್ದಾನೆ. ಇಂಥವರು ನಮಗೆ ಆದರ್ಶ ವ್ಯಕ್ತಿಯಾಗಬೇಕಾ? ಮೊದಲು ನಿಮ್ಮ ಮೇಲೆ ನೀವು ನಂಬಿಕೆ ಬೆಳಸಿಕೊಳ್ಳಿ.
ಶೂದ್ರರೆಲ್ಲರೂ ಬ್ರಾಹ್ಮಣರ ಗುಲಾಮರು ಎಂದು ಮನಸ್ಮೃತಿ ಹೇಳುತ್ತೆ. ಅಂಬೇಡ್ಕರ್ ಈ ಗುಲಾಮಗಿರಿಯಿಂದ ಜನತೆಗೆ ಮುಕ್ತಿ ಕೊಡಿಸಿದ್ದಾರೆ ಎಂದು ಭಗವಾನ್ ಹೇಳಿದರು. ಸ್ವಾಮಿ ವಿವೇಕಾನಂದರು ತಾವು ಬೌದ್ಧ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಬೌದ್ಧ ಧರ್ಮ ಅತ್ಯಂತ ಮಾನವೀಯವಾದ ಧರ್ಮ, ವೈಜ್ಞಾನಿಕ ಧರ್ಮವಾಗಿದೆ ಎಂದರು.
Advertisement