ಬಿಜೆಪಿ-ದಳಕ್ಕೆ ತಕ್ಕ ಉತ್ತರ: ವಿಪಕ್ಷಗಳು ಕುಚೋಧ್ಯ ಬಿಟ್ಟು ಜನರ ನೋವು ನಲಿವುಗಳಿಗೆ ಸ್ಪಂದಿಸಲಿ; ಬಿ.ಕೆ.ಹರಿಪ್ರಸಾದ್

ಬೇರೆ ಪಕ್ಷದ ಯಾರಿಗೂ ನಾವು ಬೆಂಬಲಿಸಿ ಎಂದು ಕೇಳಿರಲಿಲ್ಲ‌ ಆತ್ಮಸಾಕ್ಷಿಯ ಮತ ನೀಡಿ ಎಂದು ಅವರ ಪಕ್ಷದವರೇ ಹೇಳಿದ್ದರು. ಅವರೇ ಆತ್ಮಸಾಕ್ಷಿಯ ಮತಗಳನ್ನು ನೀಡಿದ್ದಾರೆ.
B.K hariprasad
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್
Updated on

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಹಾಗೂ ಜನತಾದಳದವರು ಟೀಕೆ ಮಾಡುತ್ತಿದ್ದರು. ಈಗ ಅವರಿಗೆ ತಕ್ಕ ಉತ್ತರ ಸಿಕ್ಕಿದೆ. ಜನತೆಯ ವಿಶ್ವಾಸ ಕಾಂಗ್ರೆಸ್ ಪಕ್ಷದ ಜೊತೆಗಿದೆ" ಎಂದು ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಅವರು ಹೇಳಿದರು.

ಬಿಜೆಪಿ ತನ್ನ ಕುಚೋಧ್ಯಗಳನ್ನು ಬಿಟ್ಟು ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಬೇರೆ ಪಕ್ಷದ ಯಾರಿಗೂ ನಾವು ಬೆಂಬಲಿಸಿ ಎಂದು ಕೇಳಿರಲಿಲ್ಲ‌ ಆತ್ಮಸಾಕ್ಷಿಯ ಮತ ನೀಡಿ ಎಂದು ಅವರ ಪಕ್ಷದವರೇ ಹೇಳಿದ್ದರು. ಅವರೇ ಆತ್ಮಸಾಕ್ಷಿಯ ಮತಗಳನ್ನು ನೀಡಿದ್ದಾರೆ. ಮತ ನೀಡಿದ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ" ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾಗಾಂಧಿ ಅವರು, ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಜನಪರವಾಗಿ ಮುನ್ನಡೆಯುತ್ತಿದೆ" ಎಂದರು.

ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಜನಪರ ಕೆಲಸಗಳಿಗೆ ಶಾಸಕರು ನೀಡಿರುವ ಬೆಂಬಲ ಈ ಪರಿಷತ್ ಚುನಾವಣೆ ಪಲಿತಾಂಶ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಗ್ಯಾರಂಟಿ ವಿರೋಧಿ ನಿಲುವನ್ನು ಅವರ ಪಕ್ಷದ ಶಾಸಕರೇ ವಿರೋಧಿಸಿ ಸಂದೇಶ ನೀಡಿದ್ದಾರೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲಾ ಅವರು ಹೇಳಿದರು.

B.K hariprasad
ವಿಶ್ವದ ಅತಿದೊಡ್ಡ NGO ಎಂದು ಹೇಳಿಕೊಳ್ಳುವ RSS ವಿವರ ನೀಡಲು ನಿಮಗೇನು ಸಮಸ್ಯೆ: ಬಿ.ಕೆ ಹರಿಪ್ರಸಾದ್; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com