Mr. ಪ್ರಿಯಾಂಕ್ ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ?

ನಿಮ್ಮ ವಾಹನದ ಮೇಲೆ ಒಟ್ಟು 2,500 ರೂ. ಮೊತ್ತದ 4 ಚಲನ್‌ಗಳು ಬಾಕಿ ಉಳಿದಿರುವುದರಿಂದ, ಈಗ ಶೇ. 50 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಬಾಕಿಗಳನ್ನು ಆದಷ್ಟು ಬೇಗ ಪಾವತಿಸುವಂತೆ ನಾವು ಬಲವಾಗಿ ಸೂಚಿಸುತ್ತೇವೆ.
ಪ್ರಿಯಾಂಕ್ ಖರ್ಗೆ ಹಾಗೂ ಚಲನ್
ಪ್ರಿಯಾಂಕ್ ಖರ್ಗೆ ಹಾಗೂ ಚಲನ್
Updated on

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, Mr. ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.

ಪ್ರಿಯಾಂಕ್ ಖರ್ಗೆ ಅವರ ಕಾರು ಸಂಚಾರಿ ನಿಯಮ ಉಲ್ಲಂಘಿಸಿರುವ ಚಲನ್ ಅನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಕರ್ನಾಟಕ, ಪ್ರಿಯಾಂಕ್ ಖರ್ಗೆ ಅವರೇ ಸಂಚಾರ ನಿಯಮಗಳು ರಸ್ತೆಯಲ್ಲಿರುವ ಪ್ರತಿಯೊಬ್ಬರಿಗೂ ನಿಜವಾಗಿಯೂ ಜೀವನಾಡಿಳಾಗಿವೆ ಎಂಬ ನಿಮ್ಮ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ.

ಆದರೆ... ಸೀಟ್‌ಬೆಲ್ಟ್‌ ಮತ್ತು ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ, ಖರ್ಗೆ ಅವರೇ? ನಿಮ್ಮ ವಾಹನ, KA42 GA 0099, ಅತೀ ವೇಗವಾಗಿ ಚಲಿಸುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದೆ! ಎಂದು ಬಿಜೆಪಿ ತಿರುಗೇಟು ನೀಡಿದೆ.

ಪ್ರಿಯಾಂಕ್ ಖರ್ಗೆ ಹಾಗೂ ಚಲನ್
ಖರ್ಗೆ ಕುಟುಂಬದಿಂದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಲೂಟಿ: BJP ಗಂಭೀರ ಆರೋಪ

ನಿಮ್ಮ ವಾಹನದ ಮೇಲೆ ಒಟ್ಟು 2,500 ರೂ. ಮೊತ್ತದ 4 ಚಲನ್‌ಗಳು ಬಾಕಿ ಉಳಿದಿರುವುದರಿಂದ, ಈಗ ಶೇ. 50 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಬಾಕಿಗಳನ್ನು ಆದಷ್ಟು ಬೇಗ ಪಾವತಿಸುವಂತೆ ನಾವು ಬಲವಾಗಿ ಸೂಚಿಸುತ್ತೇವೆ ಎಂದು ಬಿಜೆಪಿ ಪೋಸ್ಟ್ ಮಾಡಿದೆ.

ಇತ್ತೀಚಿಗೆ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ, ಸಂಚಾರ ನಿಯಮಗಳು ಕೇವಲ ರಸ್ತೆಯ ಮೇಲೆ ಇರುವ ಗೆರೆಗಳು ಮಾತ್ರವಲ್ಲ; ಅವು ಪ್ರತಿಯೊಬ್ಬರೂ ನಿಮ್ಮೊಂದಿಗೆ ಹಂಚಿಕೊಳ್ಳುವ ಜೀವನಾಡಿ. ಒಂದು ಕ್ಷಣದ ನಿರ್ಲಕ್ಷ್ಯವು ವರ್ಷಗಳ ಕನಸುಗಳನ್ನು ನುಚ್ಚುನೂರಾಗಿಸಬಹುದು. ನಿಮ್ಮದಷ್ಟೇ ಅಲ್ಲ, ಬೇರೆಯವರದ್ದೂ ಕೂಡ. ಹಳೆಯ ಪ್ರಮಾದಗಳನ್ನು ಸರಿಪಡಿಸಿಕೊಳ್ಳಲು ಇದು ನಿಮಗೆ ಮತ್ತೊಂದು ಅವಕಾಶ. ಬಾಕಿ ಇರುವ ಎಲ್ಲಾ ಚಲನ್‌ಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಿ, 100% ಜವಾಬ್ದಾರಿಯುತ ಚಾಲನೆಗೆ ಬದ್ಧರಾಗಿ ಎಂದು ಪೋಸ್ಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com