Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

ಮಂಡ್ಯದ ಶಿವಾರ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, . ಮುಖ್ಯಮಂತ್ರಿ ಬರಲಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನಾದರೂ ಕಳುಹಿಸಲಿ ಎಂದು ತಿಳಿಸಿದರು.
HD Kumaraswamy and cm dk shivakumar
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಿಎಂ ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
Updated on

ಮಂಡ್ಯ: ಬಿಡದಿ ಟೌನ್ ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆ 4 ಗಂಟೆಯವರೆಗೂ ಕಾಯುತ್ತೇನೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ಶಿವಾರ ಗುಡ್ಡ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, . ಮುಖ್ಯಮಂತ್ರಿ ಬರಲಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನಾದರೂ ಕಳುಹಿಸಲಿ ಎಂದು ತಿಳಿಸಿದರು.

ಬಿಡದಿ ಟೌನ್ ಶಿಪ್ ಯೋಜನೆಯನ್ನು ಶೇ.80 ರಷ್ಟು ರೈತರು ವಿರೋಧಿಸುತ್ತಿದ್ದಾರೆ. ಪುಢಾರಿಗಳನ್ನು ಕರೆತಂದು ರೈತರಿಗೆ ದುಡ್ಡು ಕೊಡಲು ಕಾಂಗ್ರೆಸ್ ಹೊರಟಿದೆ. ಜನವಿರೋಧಿ ಸರ್ಕಾರಗಳು ಧೂಳಿಪಟವಾಗುತ್ತವೆ ಎಂದರು.

HD Kumaraswamy and cm dk shivakumar
ಬಿಡದಿ ಟೌನ್ ಶಿಪ್ ವಿವಾದ: ರಾಜಕೀಯ ಮಾಡುವ ಬದಲು ರಚನಾತ್ಮಕ ಸಲಹೆ ನೀಡಿ; HDKಗೆ ಪರಮೇಶ್ವರ್ ಕಿವಿಮಾತು

ಮಾತೆತ್ತಿದ್ದರೆ ನಾನು ಏನು ಹರಿದೆ ಅಂತಾರೇ? ಇವರೆಲ್ಲಾ ಇಷ್ಟು ವರ್ಷ ಹರಿದಿದ್ದೇನು? ಎಂದು ಪ್ರಶ್ನಿಸಿದ ಅವರು, ಬೆಂಗಳೂರಿನಲ್ಲಿ ಗುಂಡಿ ಮುಚ್ಚೋರಿಲ್ಲ. ಟಾರ್ ಹಾಕೋರಿಲ್ಲ. ಇವರ ಸ್ವೇಚ್ಛಾಚಾರದ ಆಡಳಿತದಿಂದ ಬೆಂಗಳೂರಿನ ಜನ ಬೇಸತ್ತಿದ್ದಾರೆ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com