ಮನುವಾದಿ ವಿಜಯ್‌ ಪೆರಿಯಾರ್ ವಿಚಾರ ಅಧ್ಯಯನ ಮಾಡಲಿ: ನಟ ಚೇತನ್ ಅಹಿಂಸಾ

'‘ದೇವರನ್ನು ಪ್ರಶ್ನಿಸಲು ಆಳವಾದ ಚಿಂತನೆ ಮತ್ತು ಅರಿವು ಬೇಕು; ದೇವರನ್ನು ನಂಬಲು ಒಬ್ಬ ಮೂರ್ಖರಾದರೆ ಸಾಕು’ ಎಂದು ಪೆರಿಯಾರ್‌ ಹೇಳುತ್ತಾರೆ.
Chetan Ahimsa
ಚೇತನ್ ಅಹಿಂಸಾ
Updated on

ಬೆಂಗಳೂರು: ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ’ ಎಂಬ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟ ಚೇತನ್‌ ಅಹಿಂಸಾ, ಮೊದಲು ಪೆರಿಯಾರ್ ವಿಚಾರಗಳನ್ನು ಅಧ್ಯಯನ ಮಾಡಿ ಎಂದು ಹೇಳಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ, ದೇವರನ್ನು ನಂಬುತ್ತೇನೆ ಎಂದು ನೀವು(ವಿಜಯ್) ಹೇಳುತ್ತೀರಿ. ಹಾಗಾದರೆ, ಚುನಾವಣಾ ಪ್ರಚಾರದಲ್ಲಿ ಪೆರಿಯಾರ್ ಅವರ ಚಿತ್ರ ಬಳಸಿರುವ ನೀವು, ಪೆರಿಯಾರ್ ಅವರ ಯಾವ ವಿಚಾರಗಳನ್ನು ಒಪ್ಪುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.

'‘ದೇವರನ್ನು ಪ್ರಶ್ನಿಸಲು ಆಳವಾದ ಚಿಂತನೆ ಮತ್ತು ಅರಿವು ಬೇಕು; ದೇವರನ್ನು ನಂಬಲು ಒಬ್ಬ ಮೂರ್ಖರಾದರೆ ಸಾಕು’ ಎಂದು ಪೆರಿಯಾರ್‌ ಹೇಳುತ್ತಾರೆ. ಮನುವಾದಿ ಮನೋಭಾವ ಹೊಂದಿರುವ ವಿಜಯ್ ಅವರು ಪೆರಿಯಾರ್ ಅವರ ವಿಚಾರಗಳನ್ನು ಅಧ್ಯಯನ ಮಾಡಬೇಕು. ಕೇವಲ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳುವುದಲ್ಲ’ ಎಂದು ಟೀಕಿಸಿದ್ದಾರೆ.

ಸೋಮವಾರ ಸದನದಲ್ಲಿ ಮಾತನಾಡಿದ್ದ ವಿಜಯ್‌ ಅವರು, ‘ಪೆರಿಯಾರ್‌ ಅವರ ಸಿದ್ದಾಂತವನ್ನು ನಮ್ಮ ಪಕ್ಷ ಅಳವಡಿಸಿಕೊಂಡಿದ್ದರೂ, ದೇವರಲ್ಲಿ ನಂಬಿಕೆ ಇಲ್ಲ ಎಂಬ ಅವರ ತತ್ವವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮಗೆ ದೇವರಲ್ಲಿ ನಂಬಿಕೆಯಿದೆ. ನಾವು ಯಾವ ಸಿದ್ಧಾಂತದ ವಿರೋಧಿಗಳಲ್ಲ’ ಎಂದು ಹೇಳಿದ್ದರು.

Chetan Ahimsa
2028ಕ್ಕೆ ಹೊಸಪಕ್ಷ ಕಟ್ಟಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ: ನಟ ಚೇತನ್ ಅಹಿಂಸಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com