ಬೆಂಗಳೂರು: ವಿಧಾನಸೌಧ ಮುಂದೆಯೇ ನೇಪಾಳಿ ಯುವಕರ ಹೊಡೆದಾಟ; ಫೋಟೋ ತೆಗೆಯುವ ವಿಚಾರಕ್ಕೆ ಕಿರಿಕ್ಕು-Viral Video

ಜೂನ್ 28ರ ಸಂಜೆ ನಡೆದ ಈ ಘಟನೆ ವಿಧಾನಸೌಧದ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ನಡೆದಿದ್ದು, ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Fight of Nepali youths in front of Vidhana Soudha
ವಿಧಾನ ಸೌಧ ಮುಂದೆ ನೇಪಾಳಿ ಯುವಕರ ಹೊಡೆದಾಟ
Updated on

ಬೆಂಗಳೂರು: ವಿಧಾನಸೌಧ ಮುಂದೆ ಫೋಟೋ ತೆಗೆಯುವ ವೇಳೆ ಅಡ್ಡ ಬಂದರು ಎಂದು ಸಿಟ್ಟಿನಿಂದ ಬೈದಾಗ ಮಾತಿನ ಚಕಮಕಿ ನಡೆದು, ಅದು ಎರಡು ಗುಂಪಿನ ನೇಪಾಳಿ ಯುವಕರ ನಡುವೆ ಹಲ್ಲೆ-ಹೊಡೆದಾಟಕ್ಕೆ ತಿರುಗಿದ ಘಟನೆ ನಡೆದಿದ್ದು ಇಂದು ಬೆಳಕಿಗೆ ಬಂದಿದೆ.

ಜೂನ್ 28ರ ಸಂಜೆ ನಡೆದ ಈ ಘಟನೆ ವಿಧಾನಸೌಧದ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ನಡೆದಿದ್ದು, ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಗಲಾಟೆಯಲ್ಲಿ ಭಾಗಿಯಾಗಿದ್ದವರನ್ನು ವಶಕ್ಕೆ ಪಡೆದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com