ಪಾರದರ್ಶಕ, ಪುರಾವೆ ಆಧಾರಿತ ಮತದಾರರ ಪಟ್ಟಿಗಳ ಪರಿಷ್ಕರಣೆಗೆ ರಾಜ್ಯ ಸಚಿವ ಸಂಪುಟ ಬೆಂಬಲ! ಕಳವಳವೇನು?

​ಕರ್ನಾಟಕದಲ್ಲಿ ಎಸ್‌ಐಆರ್ ಅನುಷ್ಠಾನಗೊಳಿಸುವ ಮೊದಲು, ಭಾರತೀಯ ಚುನಾವಣಾ ಆಯೋಗವು (ECI) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಸಂಪುಟವು ನಿರ್ಣಯಿಸಿದೆ.
cm dk Shivakumar
ಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ಮತದಾರರ ಪಟ್ಟಿಗಳ ಪಾರದರ್ಶಕ ಮತ್ತು ಪುರಾವೆ ಆಧಾರಿತ ಪರಿಷ್ಕರಣೆಯನ್ನು ಕರ್ನಾಟಕ ಸಚಿವ ಸಂಪುಟ ಬೆಂಬಲಿಸಿದೆ. ಆದರೆ ಪ್ರಸ್ತುತ ಎಸ್‌ಐಆರ್ (SIR)ಚೌಕಟ್ಟಿನಲ್ಲಿರುವ ಅಪಾರದರ್ಶಕತೆ, ಅನಿಯಂತ್ರಿತತೆ ಮತ್ತು ಸಂಭಾವ್ಯ ಮತದಾನದ ಹಕ್ಕು ವಂಚನೆಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ.

​ಕರ್ನಾಟಕದಲ್ಲಿ ಎಸ್‌ಐಆರ್ ಅನುಷ್ಠಾನಗೊಳಿಸುವ ಮೊದಲು, ಭಾರತೀಯ ಚುನಾವಣಾ ಆಯೋಗವು (ECI) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಸಂಪುಟವು ನಿರ್ಣಯಿಸಿದೆ.

ಸ್ವತಂತ್ರ ಪರಿಶೀಲನೆ: ಎಸ್‌ಐಆರ್ ಪ್ರಕ್ರಿಯೆಯ ಕಾನೂನು ಆಧಾರ, ಹೆಸರು ತೆಗೆದುಹಾಕುವ ಮಾನದಂಡಗಳು, ಉಸ್ತುವಾರಿ ರಚನೆ, ಸಾಫ್ಟ್‌ವೇರ್ ವ್ಯವಸ್ಥೆಗಳು ಮತ್ತು ಸುರಕ್ಷತಾ ಕ್ರಮಗಳು ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಸ್ವತಂತ್ರ ಪರಿಶೀಲನೆಯನ್ನು ನಡೆಸಬೇಕು.

​ಸಮಯ ಮಿತಿ ವಿಸ್ತರಣೆ: ಬಿಎಲ್‌ಒ (BLO) ಗಳು ಮತ್ತು ಆಡಳಿತ ಯಾಂತ್ರಿಕತೆಯ ಮೇಲಿನ ಅನಗತ್ಯ ಒತ್ತಡವನ್ನು ತಪ್ಪಿಸಲು, ಎನ್ಯೂಮರೇಶನ್ (ಗಣತಿ) ನಮೂನೆಗಳನ್ನು ಸಲ್ಲಿಸುವ ಕಾಲಾವಧಿಯನ್ನು ಕನಿಷ್ಠ ಮೂರು ತಿಂಗಳವರೆಗೆ ವಿಸ್ತರಿಸಬೇಕು.

​ವಿವರವಾದ ಕೈಪಿಡಿ ಪ್ರಕಟಣೆ: ಲಾಜಿಕಲ್ ಡಿಸ್ಕ್ರಿಪನ್ಸೀಸ್" (ತಾರ್ಕಿಕ ವ್ಯತ್ಯಾಸಗಳು), ಆಲ್ಗಾರಿದಮ್‌ಗಳು/ಸಾಫ್ಟ್‌ವೇರ್ ಲಾಜಿಕ್, ಎಸ್‌ಒಪಿ (SOP) ಗಳು, ಜವಾಬ್ದಾರಿಯುತ ಅಧಿಕಾರಿಗಳು ಮತ್ತು ಅಗತ್ಯ ದಾಖಲೆಗಳು ಸೇರಿದಂತೆ ಎಲ್ಲಾ ವ್ಯತ್ಯಾಸಗಳ ಮಾನದಂಡಗಳನ್ನು ವಿವರಿಸುವ ವಿವರವಾದ ಕೈಪಿಡಿಯನ್ನು ಪ್ರಕಟಿಸಬೇಕು.

ಕ್ಷೇತ್ರ ಪರಿಶೀಲನೆ ಮತ್ತು ದೋಷಗಳ ತಿದ್ದುಪಡಿ: ಬಿಎಲ್‌ಒ ಅವರಿಂದ ಪೂರ್ವ ಕ್ಷೇತ್ರ ಪರಿಶೀಲನೆ ನಡೆಸದೆ ಯಾವುದೇ ಮತದಾರರ ಅರ್ಹತೆಯನ್ನು ಪ್ರಶ್ನಿಸಬಾರದು ಅಥವಾ ನೋಟಿಸ್ ನೀಡಬಾರದು. ಅಲ್ಲದೆ, ಸಣ್ಣಪುಟ್ಟ ಕಾಗುಣಿತ, ಲಿಪ್ಯಂತರ ಅಥವಾ ಕ್ಲಾರಿಕಲ್ ದೋಷಗಳನ್ನು ಆಕ್ಷೇಪಣೆಗೆ ಆಧಾರವಾಗಿ ಪರಿಗಣಿಸಬಾರದು.

​ಮತದಾರರ ಹಕ್ಕು ರಕ್ಷಣೆ: ಯಾವುದೇ ಹಾಲಿ ಮತದಾರರನ್ನು ಮುನ್ಸೂಚನೆ ಇಲ್ಲದೆ, ನಿಷ್ಪಕ್ಷಪಾತ ಅಧಿಕಾರಿಯ ಮುಂದೆ ವಿಚಾರಣೆಗೆ ಅವಕಾಶ ನೀಡದೆ ಮತ್ತು ಲಿಖಿತ ಆದೇಶವಿಲ್ಲದೆ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು.

​ದಾಖಲೆಗಳ ಸ್ಪಷ್ಟತೆ ಮತ್ತು ಕುಟುಂಬ ಐಡಿ: ಅಂಗೀಕಾರಾರ್ಹ ದಾಖಲೆಗಳ ಸಂಪೂರ್ಣ ಪಟ್ಟಿಯನ್ನು ಸ್ಪಷ್ಟಪಡಿಸಬೇಕು;

ವೋಟರ್ ಐಡಿ [Aadhaar Redacted] ಹೊರಗಿಟ್ಟಿರುವುದನ್ನು ಮರುಪರಿಶೀಲಿಸಬೇಕು. ಪ್ರಸ್ತುತವಿರುವ ಕರ್ನಾಟಕದ 'ಕುಟುಂಬ ಐಡಿ' (Kutumba ID) ಯನ್ನು ಅನ್ವಯವಾಗುವ ಕಡೆಗಳಲ್ಲಿ ಮಾನ್ಯ ಮಾಡಬೇಕು ಮತ್ತು ಸಾಬೀತುಪಡಿಸುವ ಹೊರೆಯನ್ನು ಸಾಮಾನ್ಯ ನಾಗರಿಕರ ಮೇಲೆ ಅನಗತ್ಯವಾಗಿ ಹೇರಬಾರದು.

​ನಮೂನೆಗಳ ಪ್ರಕ್ರಿಯೆ: ಮಾನ್ಯವಾದ ಫಾರಂ-6 (Form-6) ಅರ್ಜಿಗಳನ್ನು ಫಾರಂ-7 (Form-7) ಆಕ್ಷೇಪಣೆಗಳೊಂದಿಗೆ ಪ್ರಕ್ರಿಯೆಗೊಳಿಸಬೇಕು ಮತ್ತು ಸಾಮೂಹಿಕವಾಗಿ ಹೆಸರುಗಳನ್ನು ತೆಗೆದುಹಾಕಲು ಕಾರಣವಾಗುವ ಸಾರಾಸಗಟು ಆಕ್ಷೇಪಣೆಗಳನ್ನು ತಡೆಯಬೇಕು.

​ದೈನಂದಿನ ದತ್ತಾಂಶ ಪ್ರಕಟಣೆ: ನೋಟಿಸ್‌ಗಳು, ಸೇರ್ಪಡೆಗಳು, ತೆಗೆದುಹಾಕುವಿಕೆಗಳು ಮತ್ತು ಆದೇಶಗಳಿಗೆ ಸಂಬಂಧಿಸಿದ ಯಂತ್ರ-ಓದಬಲ್ಲ (machine-readable) ದೈನಂದಿನ ದತ್ತಾಂಶವನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು.

​ಪಾರದರ್ಶಕ ಸಾಫ್ಟ್‌ವೇರ್ ಬಳಕೆಗೆ ಒತ್ತಾಯ: ಯಾವುದೇ ಅಪಾರದರ್ಶಕ ಎಐ (AI) ಪರಿಕರಗಳನ್ನು ಬಳಸಬಾರದು. ದತ್ತಾಂಶ ನಮೂದು, ಡಿಜಿಟಲೀಕರಣ, ಮ್ಯಾಪಿಂಗ್ ಮತ್ತು ಪರಿಶೀಲನೆಗಾಗಿ ಬಳಸುವ ಎಲ್ಲಾ ಸಾಫ್ಟ್‌ವೇರ್‌ಗಳನ್ನು ಬಹಿರಂಗಪಡಿಸಬೇಕು ಮತ್ತು ಅವುಗಳನ್ನು ಸ್ವತಂತ್ರವಾಗಿ ಪರೀಕ್ಷಿಸಬೇಕು.

​ಅಧಿಕಾರಿಗಳ ಪಾತ್ರದ ಸ್ಪಷ್ಟತೆ: ಇಆರ್‌ಒ (ERO) ಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಅವಕಾಶ ನೀಡುವ ಜೊತೆಗೆ, ವಿಶೇಷ ರೋಲ್ ವೀಕ್ಷಕರು ಮತ್ತು ಮೈಕ್ರೋ-ವೀಕ್ಷಕರ ಪಾತ್ರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು.

cm dk Shivakumar
ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ: ಚುನಾವಣೆ ಆಯೋಗಕ್ಕೆ ಡಿ.ಕೆ ಶಿವಕುಮಾರ್ ಮನವಿ

​ವಿಶೇಷ ಸುರಕ್ಷತಾ ಕ್ರಮಗಳು: ಮಹಿಳೆಯರು, ವಲಸೆ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳು, ವಿಧವೆಯರು, ವಿಕಲಚೇತನರು, ಅನಾಥರು ಮತ್ತು ತೃತೀಯ ಲಿಂಗಿಗಳಿಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು. ಕರ್ನಾಟಕವು ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಬೆಂಬಲಿಸುತ್ತದೆಯೇ ಹೊರತು, ಮತದಾರರ ಪಟ್ಟಿಗಳ ಧ್ವಂಸವನ್ನಲ್ಲ" ಎಂದು ಸಚಿವ ಸಂಪುಟವು ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗವು (ECI) ಇನ್ನೂ ಇದಕ್ಕೆ ಪ್ರತಿಕ್ರಿಯಿಸಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com