ನಮ್ಮ ಶಾಸಕ ಭರತ್ ರೆಡ್ಡಿ ಸೇರಿ ಹಲವರು ದುಬೈನಲ್ಲಿ ಸಿಲುಕಿದ್ದಾರೆ, ರಕ್ಷಣೆಗೆ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಡಿ.ಕೆ ಶಿವಕುಮಾರ್ ಆಗ್ರಹ

ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಶಾಲೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, 80ಕ್ಕೂ ಹೆಚ್ಚು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಸರಿಯಲ್ಲ.
DCM DK Shivkumar
ಡಿಸಿಎಂ ಡಿಕೆ.ಶಿವಕುಮಾರ್
Updated on

ಬೆಂಗಳೂರು: ನಮ್ಮ ಶಾಸಕರಾದ ಎ ಸಿ ಶ್ರೀನಿವಾಸ್, ಭರತ್ ರೆಡ್ಡಿ ಹಾಗೂ ಅವರ ಕುಟುಂಬದವರು, ಜೊತೆಗೆ ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ದುಬೈನಲ್ಲಿ ಸಿಲುಕಿದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇನೆ. ಆದರೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಭಾನುವಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಮತ್ತು ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇನೆ. ಆದರೆ, ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ದೆಹಲಿ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಶಾಲೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, 80ಕ್ಕೂ ಹೆಚ್ಚು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಸರಿಯಲ್ಲ. ತಪ್ಪಿಲ್ಲದ ಶಾಲಾ ಮಕ್ಕಳ ಮೇಲೆ ದಾಳಿ ಮಾಡುವುದು ಖಂಡನೀಯ. ದುಬೈ ಸೇರಿದಂತೆ ಮಧ್ಯ ಪ್ರಾಚ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವುದು ಅಗತ್ಯ ಎಂದು ತಿಳಿಸಿದರು.

DCM DK Shivkumar
ಖಮೇನಿ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಖಂಡನೆ, ಟ್ರಂಪ್ ದ್ವಂದ ನೀತಿ ವಿರುದ್ಧ ಕಿಡಿ!

ಕೇಂದ್ರ ಸರ್ಕಾರವು ಕನ್ನಡಿಗರು, ಕೇರಳದವರು ಹಾಗೂ ಇತರ ರಾಜ್ಯಗಳ ಭಾರತೀಯರನ್ನು ತಕ್ಷಣ ಸುರಕ್ಷಿತವಾಗಿ ಕರೆತರಬೇಕು ಎಂದು ಆಗ್ರಹಿಸಿದ್ದಾರೆ.

ಮಧ್ಯ ಪ್ರಾಚ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಕನ್ನಡ ಸಂಘಟನೆಗಳು ಧೈರ್ಯ ತುಂಬಬೇಕು. “ಜಗತ್ತಿಗೆ ಶಾಂತಿ ಅಗತ್ಯ. ಯಾವುದೇ ಪ್ರಾಣಹಾನಿ ಆಗಬಾರದು ಎಂದು ಪ್ರಾರ್ಥಿಸುತ್ತೇನೆ. ವಿಶ್ವಮಾನವತೆಯ ಮೂಲಕವೇ ಶಾಂತಿ ಸಾಧ್ಯ. ಅಮೆರಿಕಾ ಯುದ್ಧವನ್ನು ನಿಲ್ಲಿಸಬೇಕು. ಇದು ಭಾರತದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com