Jds ತೊರೆದು BJP ಸೇರ್ಪಡೆಯಾಗಿದ್ದ ನಟಿ ಅಮೂಲ್ಯ ಪತಿ ಜಗದೀಶ್‌ ಗೆ ಮಹತ್ವದ ಹುದ್ದೆ!

ಕಳೆದ ಕೆಲ ವರ್ಷಗಳಿಂದ ನಟಿ ಅಮೂಲ್ಯ ಅವರ ಪತಿ ಜಗದೀಶ್‌ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದರು.
Amulya And jagadish
ಅಮೂಲ್ಯ ಮತ್ತು ಜಗದೀಶ್
Updated on

ಬೆಂಗಳೂರು: ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆಯ ಮೋರ್ಚಾಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ಪ್ರಮುಖವಾಗಿ, ನಟಿ ಅಮೂಲ್ಯ ಪತ್ನಿ ಜಗದೀಶ್‌ ಆರ್‌ ಚಂದ್ರ ಅವರಿಗೆ ಉತ್ತಮ ಸ್ಥಾನ ನೀಡಲಾಗಿದ್ದು, ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷರಾದ ಎಆರ್‌ ಸಪ್ತಗಿರಿ ಗೌಡ ಅವರು ಪ್ರಕಟಣೆ ನೀಡಿದ್ದಾರೆ. ಯುವ, ಎಸ್‌ಸಿ ಎಸ್‌ಟಿ, ಮಹಿಳಾ, ರೈತ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಯುವ ಮೋರ್ಚಾ- ಜಗದೀಶ್‌ ಆರ್‌ ಚಂದ್ರ

ಎಸ್‌ಸಿ ಮೋರ್ಚಾ - ಮುನಿಯಲ್ಲಪ್ಪ (ಅಣ್ಣಯ್ಯ)

ಎಸ್‌ಟಿ ಮೋರ್ಚಾ - ಗಿರೀಶ್‌ ಕುಮಾರ್ ಆರ್‌ಬಿ

ಮಹಿಳಾ ಮೋರ್ಚಾ - ನೀತಾ ಎಂಎನ್‌ ರೆಡ್ಡಿ

ರೈತ ಮೋರ್ಚಾ - ರುದ್ರಪ್ಪ ವೈ

ಹಿಂದುಳಿದ ವರ್ಗಗಳ ಮೋರ್ಚಾ - ಎಚ್‌ಆರ್‌ ಕೃಷ್ಣಪ್ಪ ಅವರನ್ನು ನೇಮಕ ಮಾಡಲಾಗಿದೆ.

ಕಳೆದ ಕೆಲ ವರ್ಷಗಳಿಂದ ನಟಿ ಅಮೂಲ್ಯ ಅವರ ಪತಿ ಜಗದೀಶ್‌ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸಭೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದರು. ಸದ್ಯ ಅವರಿಗೆ ಬೆಂಗಳೂರುನ ಕೇಂದ್ರ ಜಿಲ್ಲೆಯ ಯುವ ಮೋರ್ಚಾಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 2018ರಲ್ಲಿ ಬಿಜೆಪಿ ತೊರೆದು, ಜೆಡಿಎಸ್‌ ಪಕ್ಷಕ್ಕೆ ಬಂದಿದ್ದರು. ಆ ಬಳಿಕ ಮತ್ತೆ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಬಂದಿದ್ದರು. ಅವರು ವಿಧಾನಸಭೆ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಸಾಕಷ್ಟು ಬಾರಿ ಟಿಕೆಟ್‌ ಕೈತಪ್ಪಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com