Israel-Iran War effect: ಅಡುಗೆ ಎಣ್ಣೆ ಬೆಲೆ ಗಗನಕ್ಕೆ, ಗ್ರಾಹಕರಿಗೆ ಬರೆ

ಕಳೆದ ಒಂದು ವಾರದಿಂದ ಸದ್ದಿಲ್ಲದೆ ಅಡುಗೆ ಎಣ್ಣೆಯ ಬೆಲೆ ದಿಡೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
File photo
ಅಡುಗೆ ಎಣ್ಣೆ (ಪ್ರಾತಿನಿಧಿಕ ಚಿತ್ರ)
Updated on

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಸಂಘರ್ಷದ ಪರಿಣಾಮ ಇದೀಗ ಸಾಮಾನ್ಯ ಜನರ ಅಡುಗೆ ಮನೆಗಳವರೆಗೂ ತಲುಪಿದೆ.

ಕಳೆದ ಒಂದು ವಾರದಿಂದ ಸದ್ದಿಲ್ಲದೆ ಅಡುಗೆ ಎಣ್ಣೆಯ ಬೆಲೆ ದಿಡೀರ್ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಎಲ್‌ಪಿಜಿ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಏರಿಕೆಯಾಗುವ ಆತಂಕವೂ ಹೆಚ್ಚಗುತ್ತಿದೆ.

ಈ ಹಿಂದೆ 750 ಮಿ.ಲೀ. ರುಚಿ ಗೋಲ್ಡ್ ಎಣ್ಣೆ ಪ್ಯಾಕೆಟ್ ರೂ.108ಕ್ಕೆ ಇತ್ತು, ಇದೀಗ ದರ ಸುಮಾರು ರೂ.120ಕ್ಕೆ ಏರಿಕೆಯಾಗಿದೆ. ಮುಂದಿನ ಒಂದು ತಿಂಗಳಲ್ಲಿ ಇದರ ಬೆಲೆ ರೂ.140–150ರವರೆಗೆ ಏರಿಕೆಯಾಗಬಹುದು ಎಂದು ಅಂಗಡಿ ಮಾಲೀಕರು ಅಂದಾಜಿಸಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧದ ಸಮಯದಲ್ಲೂ ಅಡುಗೆ ಎಣ್ಣೆ ದರ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಕೆಲ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಸಂಗ್ರಹಿಸಲು ಮುಂದಾಗಿದ್ದಾರೆ.

File photo
ಇರಾನ್ ಯುದ್ಧ: ಚಿನ್ನದ ಮಾರುಕಟ್ಟೆ ಮೌಲ್ಯ ಭರ್ಜರಿ ಏರಿಕೆ; ಭಾರತ, ಯುಕೆ ಒಟ್ಟು ಜಿಡಿಪಿಯನ್ನೂ ಮೀರಿಸುವ ದೊಡ್ಡ ಆರ್ಥಿಕತೆ!

ಉತ್ತರ ಕರ್ನಾಟಕದ ಸಣ್ಣ ಹೋಟೆಲ್‌ಗಳಲ್ಲಿ ಪೂರಿ, ವಡೆ, ಬಜ್ಜಿ ಮೊದಲಾದ ತಿಂಡಿಗಳ ತಯಾರಿಕೆಗೆ ಅಡುಗೆ ಎಣ್ಣೆ ಅತ್ಯಗತ್ಯವಾಗಿರುವುದರಿಂದ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.

ರೋಣ ಪಟ್ಟಣದ ಹೋಟೆಲ್ ಮಾಲೀಕ ವೀರೇಶ್ ಪಟ್ಟಾರ ಅವರು ಮಾತನಾಡಿ, “ಮುಂದೆ ಬೆಲೆ ಇನ್ನಷ್ಟು ಏರಬಹುದು ಎಂಬ ಕಾರಣಕ್ಕೆ ವ್ಯಾಪಾರಿಗಳು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಖರೀದಿಸುತ್ತಿದ್ದಾರೆ. ಉಕ್ರೇನ್ ಯುದ್ಧದ ಸಮಯದ ಅನುಭವದಿಂದ ನಾವು ಕೂಡ ಎಣ್ಣೆ ಸಂಗ್ರಹಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com