ಚಪ್ಪಲಿ ಬಿಡಲ್ಲ: ಪಾದರಕ್ಷೆ ಧರಿಸಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಬಾನು ಮುಷ್ತಾಕ್ ಪುಷ್ಪ ನಮನ‌!

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಭಾನು ಮುಷ್ತಾಕ್‌ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು.
Banu Mushtaq (File image)
ಬಾನು ಮುಷ್ತಾಕ್ (ಸಂಗ್ರಹ ಚಿತ್ರ)
Updated on

ಮಂಡ್ಯ: ಕಾರ್ಯಕ್ರಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಸಾಹಿತಿ ಬಾನು ಮುಷ್ತಾಕ್‌ ಪುಷ್ಪ ನಮನ ಸಲ್ಲಿಸಿದ್ದು ವಿವಾದಕ್ಕೆ ತಿರುಗಿದೆ. ಚಪ್ಪಲಿ ಧರಿಸಿಕೊಂಡೇ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲು ಬಾನು ಮುಷ್ತಾಕ್‌ ಮುಂದಾದಾಗ ಸಂಘಟಕರು ಚಪ್ಪಲಿ ಬಿಟ್ಟು ಬರುವಂತೆ ಮನವಿ ಮಾಡಿದರು.

ಅದಕ್ಕೆ ಬಾನು ಮುಷ್ತಾಕ್‌ ಒಪ್ಪಲಿಲ್ಲ. ಆದರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಪ್ಪಲಿ ಹೊಲೆಯುವುದು ನಮ್ಮ ವೃತ್ತಿ. ಚಪ್ಪಲಿ ನಮ್ಮ ಮನೆ ದೇವರು ಎಂದು ಸರ್ಮಥಿಸಿಕೊಂಡಿದ್ದಾರೆ. ಅದು ನಮ್ಮ ಅಸ್ಮಿತೆಯ ಸಂಕೇತ. ನಾವು ಚಪ್ಪಲಿ ಹೊಲಿಯುವವರು. ನಮಗೆ ಅದರ ಬಗ್ಗೆ ಅಪಾರ ಗೌರವವಿದೆ ಎಂದು ಸಮರ್ಥನೆ ನೀಡಿದರು.

Banu Mushtaq (File image)
ಧನ್ಯವಾದದೊಂದಿಗೆ ಹೀಗೊಂದು ಲಹರಿ: Dear ಉರಿಯಮ್ಮ/ಉರಿಯಪ್ಪನವರೇ...; ಭಾನು ಮುಷ್ತಾಕ್ ಹೀಗೆ ಬರೆದಿದ್ದು ಯಾರಿಗೆ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com