ಸಾಂಸ್ಕೃತಿಕ ಕಾರ್ಯಕ್ರಮ-ಧಾರ್ಮಿಕ ಮೆರವಣಿಗೆಗಳಲ್ಲಿ ಐಟಂ ಸಾಂಗ್, ಡಿಜೆಗಳಿಗೆ ನಿಷೇಧ ಹೇರಲು ಸರ್ಕಾರ ಚಿಂತನೆ: ಸಚಿವ ಶಿವರಾಜ್ ತಂಗಡಗಿ

ಈ ವಿಷಯವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಎತ್ತಿಕೊಂಡು, ಡಿಜೆಗಳಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು.
AI generated image
ಎಐ ಆಧಾರಿತ ಚಿತ್ರ
Updated on

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಮೆರವಣಿಗೆಗಳಲ್ಲಿ ಜೋರಾಗಿ ಸಂಗೀತ ಮತ್ತು “ಐಟಂ ಹಾಡುಗಳು” ಹಾಕುವ ಡಿಜೆಗಳನ್ನು ನಿಷೇಧಿಸುವ ಪರವಾಗಿ ಕರ್ನಾಟಕ ಸರ್ಕಾರ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಈ ವಿಷಯವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಎತ್ತಿಕೊಂಡು, ಡಿಜೆಗಳಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದರು. ಎಲ್ಲ ಜಯಂತಿಗಳಲ್ಲೂ ಡಿಜೆಗಳು ದೊಡ್ಡ ಸಮಸ್ಯೆಯಾಗಿವೆ. ಯಾವ ಜಯಂತಿಯಾದರೂ, ನಮ್ಮ ದೇವರುಗಳು ಡಿಜೆ ಮತ್ತು ಐಟಂ ಹಾಡಿಲ್ಲದೆ ಮುಂದೆ ಸಾಗುವುದೇ ಇಲ್ಲ. ಇದು ಲಜ್ಜಾಸ್ಪದ. ಡಿಜೆಗಳು ಮತ್ತು ಐಟಂ ಹಾಡುಗಳು ಸಂಸ್ಕೃತಿಗೆ ಯಾವುದೇ ಒಳಿತು ಮಾಡುವುದಿಲ್ಲ ಸಂತೋಷ್ ಲಾಡ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಗಿ, ಇದಕ್ಕೆ ಸಂಬಂಧಿಸಿದಂತೆ ನಾವು ಆದೇಶ ಹೊರಡಿಸುತ್ತೇವೆ. ಡಿಜೆಗಳಿಂದ ಬಹಳ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಹೇಳಿದರು.

AI generated image
ಬೆಳಗಾವಿ: ಸುವರ್ಣಸೌಧದಲ್ಲಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸ್ಥಾಪನೆಗೆ ನಿರ್ಧಾರ

ಡಿಜೆ ನಿಷೇಧಕ್ಕೆ ಬಿಜೆಪಿಯ ಸಹಕಾರವೂ ಅಗತ್ಯವೆಂದು ಅವರು ಹೇಳಿದರು. ಎಲ್ಲರೂ ಒಪ್ಪಿದರೆ, ನಾವು ಡಿಜೆಗಳನ್ನು ನಿಷೇಧಿಸಬಹುದು ಎಂದು ಹೇಳಿದರು.

ಶಿವಮೊಗ್ಗದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಿಲ್ಲ. ಅವರಿಗೆ ಡಿಜೆಗಳು ಬೇಡವಾಗಿರಬಹುದು, ಆದರೆ ನಮಗೆ ಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಜಾನ್‌ನ್ನೂ ನಿಷೇಧಿಸಬೇಕು. ಅದನ್ನು ನೀವು ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಸಭಾಧ್ಯಕ್ಷ ಯು.ಟಿ. ಖಾದರ್ ಮಧ್ಯಪ್ರವೇಶಿಸಿ, ಸುಪ್ರೀಂ ಕೋರ್ಟ್ ಶಬ್ದ ಮಟ್ಟಗಳಿಗೆ ಮಿತಿಯನ್ನು ನಿಗದಿಪಡಿಸಿದೆ ಎಂದು ಹೇಳಿದರು. ಎಲ್ಲ ಸರ್ಕಾರಗಳು ಅದನ್ನು ಪಾಲಿಸಬೇಕು ಎಂದು ಹೇಳಿದರು.

ಹಿರಿಯ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಡಿಜೆ ನಿಷೇಧದ ಯೋಜನೆಯನ್ನು ಬೆಂಬಲಿಸಿದರು. ಹೃದಯದಲ್ಲಿ ಪೇಸ್‌ಮೇಕರ್ ಹೊಂದಿರುವವರು ಡಿಜೆಗಳ ಶಬ್ದದಿಂದ ತೊಂದರೆ ಅನುಭವಿಸುತ್ತಿರುವುದನ್ನು ನಾನು ನೋಡಿದ್ದೇನೆ. ಮಕ್ಕಳೂ ಕಿವಿಗಳನ್ನು ಮುಚ್ಚಿಕೊಳ್ಳುತ್ತಿರುವುದನ್ನು ನೋಡಿದ್ದೇನೆ. ಪೊಲೀಸರೂ ಸಹ ಅಸಹಾಯಕರಾಗಿದ್ದಾರೆ. ಡಿಜೆಗಳಿಂದ ಉಂಟಾಗುವ ಶಬ್ದ ಮಾಲಿನ್ಯವನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಡಿಜೆಗಳ ಬಗ್ಗೆ ನಡೆದ ಈ ಚರ್ಚೆ, ಸಹ್ಯಾದ್ರಿ ಉತ್ಸವ ಅಥವಾ ಮಲ್ನಾಡ್ ಉತ್ಸವವನ್ನು ನಿಯಮಿತವಾಗಿ ನಡೆಸಲು ಸರ್ಕಾರದಿಂದ ಅನುದಾನ ಕೇಳಿದ ಚನ್ನಬಸಪ್ಪ ಅವರ ಮನವಿಯಿಂದ ಪ್ರಾರಂಭವಾಯಿತು.

ಬಿಜೆಪಿಯ ಜನಾರ್ಧನ ರೆಡ್ಡಿ ಅವರು ಕೂಡ ಕೊಪ್ಪಳದಲ್ಲಿ ಅನೆಗುಂಡಿ ಉತ್ಸವವನ್ನು ಮರುಪ್ರಾರಂಭಿಸಲು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿ ಜಿಲ್ಲೆಗೆ ತಮ್ಮದೇ ಉತ್ಸವ ಬೇಕೆಂಬ ಬೇಡಿಕೆ ಹೆಚ್ಚುತ್ತಿರುವುದನ್ನೂ ಸಚಿವ ತಂಗಡಗಿ ಉಲ್ಲೇಖಿಸಿದರು. ಇದು ನಮಗೆ ದೊಡ್ಡ ಸಮಸ್ಯೆಯಾಗಿದೆ. ಒಂದು ಉತ್ಸವ ಸ್ಥಳದ ಇತಿಹಾಸಕ್ಕೆ ಸಂಬಂಧಿಸಿದ್ದಾಗಿರಬೇಕು. ದಸರಾ ಮೊದಲು ಮೈಸೂರು, ಮಡಿಕೇರಿ ಮತ್ತು ಚಾಮರಾಜನಗರಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಶಿವಮೊಗ್ಗ ಸೇರಿಸಲಾಯಿತು ಎಂದು ಹೇಳಿದರು.

ಪ್ರತಿಯೊಂದು ಜಿಲ್ಲೆಗೂ ತಮ್ಮದೇ ಉತ್ಸವ ಇರಬೇಕು ಎಂದು ಸ್ಪೀಕರ್ ಯು ಟಿ ಖಾದರ್ ಅಭಿಪ್ರಾಯಪಟ್ಟರು. ಇದು ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸುತ್ತದೆ. ಇಲ್ಲದಿದ್ದರೆ ನಮ್ಮ ಮಕ್ಕಳು ಅದನ್ನೆಲ್ಲ ಮರೆತುಬಿಡುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com