ಬೆಳಗಾವಿ: 15 ದಿನಗಳ ಹೆಣ್ಣು ಮಗುವಿಗೆ ವಿಷ ನೀಡಿ ಕೊಂದ ಅಪ್ಪ!

ಮಗು ಆರೋಗ್ಯವಾಗಿದ್ದರೂ ದಿಢೀರ್ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ಭೀಮರಾಯ ಸಣ್ಣ ಮಾತ್ರೆ ತಂದು ಮಗುವಿಗೆ ಏನೋ ಕುಡಿಸಿದ್ದಾನೆ ಎಂಬ ಆರೋಪವನ್ನು ಪತ್ನಿ ಶೀಲಾ ಹಾಗೂ ಆಕೆಯ ಕುಟುಂಬಸ್ಥರು ಮಾಡಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಜಿಲ್ಲೆಯ ಉಕ್ಕಡ ಗ್ರಾಮದಲ್ಲಿ 15 ದಿನಗಳ ಶಿಶುವಿಗೆ ತಂದೆ ವಿಷ ನೀಡಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ತಾಯಿ ತನ್ನ ಪತಿ ಭೀಮರಾಯ ತಮ್ಮ ನವಜಾತ ಶಿಶುವಿಗೆ ವಿಷ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಶಿಶು ಕೇವಲ ಎರಡು ವಾರಗಳ ಹಿಂದೆ ಜನಿಸಿತ್ತು.

ಹೆರಿಗೆ ಹಿನ್ನೆಲೆ ತಾಯಿ ಶೀಲಾ ತವರು ಮನೆಯಲ್ಲಿ ವಾಸವಾಗಿದ್ದರು. ಮಾ.17ರಂದು ಮಧ್ಯಾಹ್ನ ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲು ಬಂದ ತಂದೆ ಭೀಮರಾಯ ಕೆಲಕಾಲ ಅವರೊಂದಿಗೆ ಕಾಲ ಕಳೆದ ಬಳಿಕ ತನ್ನ ಊರಿಗೆ ಮರಳಿದ್ದಾನೆ. ಆದರೆ ಆತ ಹೋದ ಕೆಲವೇ ಹೊತ್ತಿನಲ್ಲಿ ಮಗು ಏಕಾಏಕಿ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

ಮಗು ಆರೋಗ್ಯವಾಗಿದ್ದರೂ ದಿಢೀರ್ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ಭೀಮರಾಯ ಸಣ್ಣ ಮಾತ್ರೆ ತಂದು ಮಗುವಿಗೆ ಏನೋ ಕುಡಿಸಿದ್ದಾನೆ ಎಂಬ ಆರೋಪವನ್ನು ಪತ್ನಿ ಶೀಲಾ ಹಾಗೂ ಆಕೆಯ ಕುಟುಂಬಸ್ಥರು ಮಾಡಿದ್ದಾರೆ.

ಘಟನೆಯ ನಂತರ ಭೀಮರಾಯ ನಾಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮೃತ ಮಗುವಿನ ಶವವನ್ನು ಬಿಮ್ಸ್‌ ಆಸ್ಪತ್ರೆ ಮುಂದೆ ಇಟ್ಟು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Representational image
ಚಾಮರಾಜನಗರ: ವಿದ್ಯುತ್ ತಂತಿ ತಗುಲಿ ಹುಲಿ ಸಾವು

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಡಿಸಿಪಿ ನಾರಾಯಣ್‌ ಬರಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ವರದಿ ಬಳಿಕ ನಿಜಾಂಶ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com