ಭವಿಷ್ಯದ ಸವಾಲುಗಳ ಬಗ್ಗೆ ಜಾಗರೂಕರಾಗಿದ್ದು, 'ಆರ್ಥಿಕ ಸಮತೋಲನ' ಕಾಯ್ದುಕೊಳ್ಳಲಾಗಿದೆ: ಸಚಿವ ಕೃಷ್ಣ ಬೈರೇಗೌಡ

ಸರ್ಕಾರದ ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಬಿಜೆಪಿಯ ವಾರ್ನಿಂಗ್ ಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಬ್ಸಿಡಿ ಅಥವಾ ಗ್ಯಾರಂಟಿ ಯೋಜನೆಗಳ ಮೇಲೆ ಸರ್ಕಾರದ ವೆಚ್ಚವನ್ನು ಸಮರ್ಥಿಸಿಕೊಂಡರು.
Minister Krishna Byre Gowda
ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ಸಮತೋಲನ ಕಾಯ್ದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಸರ್ಕಾರ ಸೋಮವಾರ ವಿಧಾನಸಭೆಗೆ ತಿಳಿಸಿದೆ.

ತೀವ್ರ ಆರ್ಥಿಕ ಆರ್ಥಿಕ ಮುಗ್ಗಟ್ಟಿನ ನಡುವೆ ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳಿಗೆ ವೇತನವನ್ನು ಮುಂದೂಡಿರುವ ಹಿಮಾಚಲ ಪ್ರದೇಶದಂತಹತ ಬಿಕ್ಕಟ್ಟಿನ ಎಚ್ಚರಿಕೆಯನ್ನು ಬಿಜೆಪಿ ಪ್ರಸ್ತಾಪಿಸಿದ ನಂತರ ಸರ್ಕಾರ ಈ ಹೇಳಿಕೆ ನೀಡಿದೆ.

ಸರ್ಕಾರದ ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಬಿಜೆಪಿಯ ವಾರ್ನಿಂಗ್ ಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಬ್ಸಿಡಿ ಅಥವಾ ಗ್ಯಾರಂಟಿ ಯೋಜನೆಗಳ ಮೇಲೆ ಸರ್ಕಾರದ ವೆಚ್ಚವನ್ನು ಸಮರ್ಥಿಸಿಕೊಂಡರು.

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಮಹಾರಾಷ್ಟ್ರ ಮತ್ತು ಗುಜರಾತ್ ಅನ್ನು ಹಿಂದಿಕ್ಕಿ ಶೇ.11 ರಷ್ಟಿರುವ ದೇಶದಲ್ಲೇ ಅತ್ಯಧಿಕ ಬೆಳವಣಿಗೆಯನ್ನು ಹೊಂದಿದೆ. ಅಲ್ಲದೆ ಕರ್ನಾಟಕ ಭಾರತದ ಅತಿ ಹೆಚ್ಚು ತಲಾ ಆದಾಯವನ್ನು (PCI) ಹೊಂದಿರುವ ರಾಜ್ಯವಾಗಿದೆ. ಪ್ರತಿಯೊಬ್ಬರಿಗೂ ಆದಾಯವಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಜಾಗತಿಕವಾಗಿ, PCI ಆರ್ಥಿಕತೆಯ ಸೂಚಕವಾಗಿದೆ. ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯಿಂದಾಗಿ ಎಲ್ಲಾ ರಾಜ್ಯಗಳ ಆದಾಯವು ಕುಂಠಿತವಾಗಿದ್ದರೂ ಕರ್ನಾಟಕದ ಆರ್ಥಿಕತೆಯು ಇತರ ರಾಜ್ಯಗಳಿಗಿಂತ ಉತ್ತಮವಾಗಿದೆ. ನಾವು ಭವಿಷ್ಯದ ಸವಾಲುಗಳ ಬಗ್ಗೆ ಜಾಗರೂಕರಾಗಿದ್ದು, ಆರ್ಥಿಕ ಸಮತೋಲನವನ್ನು ಕಾಯ್ದುಕೊಂಡಿದ್ದೇವೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಶೇ.14 ರಷ್ಟು ಹಣ ಸಬ್ಸಿಡಿ ಯೋಜನೆಗಳಿಗೆ ಹೋಗುತ್ತಿದೆ. ಪಕ್ಷ ಭೇದವಿಲ್ಲದೆ ಎಲ್ಲರೂ ಈ ಬಗ್ಗೆ ಯೋಚಿಸಬೇಕು ಎಂದು ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿದ ಶಾಸಕ ಸುರೇಶ್ ಕುಮಾರ್, ಕಾಂಗ್ರೆಸ್ ಆಡಳಿತದಲ್ಲಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳಿಗೆ ವೇತನದ ಒಂದು ಭಾಗವನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಘೋಷಿಸಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

Minister Krishna Byre Gowda
KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಸಚಿವ ಕೃಷ್ಣ ಬೈರೇಗೌಡ

ಬಳಿಕ ಸರ್ಕಾರದ ಸಬ್ಸಿಡಿ ಮತ್ತು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಕೃಷ್ಣ ಬೈರೇಗೌಡ, ಅರ್ಥಶಾಸ್ತ್ರದಲ್ಲಿ ಪೂರೈಕೆ- ಬೇಡಿಕೆ ಎಂಬ ಎರಡು ವಿಧಾನಗಳಿವೆ. ಪೂರೈಕೆ ವಿಧಾನದಲ್ಲಿ ತೆರಿಗೆ ರಿಯಾಯಿತಿಗಳನ್ನು ಒದಗಿಸಲಾಗಿದೆ. ಬೇಡಿಕೆಯ ವಿಧಾನದಲ್ಲಿ ಸಾರ್ವತ್ರಿಕ ಮೂಲ ಆದಾಯವನ್ನು ಗ್ರಾಹಕರ ಕೈಯಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹಾಕುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ನೀಡಲಾಗುತ್ತದೆ. ಒಬ್ಬ ವ್ಯಕ್ತಿಗೆ ನೀಡಿದ ಪ್ರತಿ ರೂಪಾಯಿಯನ್ನು ಕನಿಷ್ಠ ಐದು ಬಾರಿ ಬಳಸಲಾಗುತ್ತದೆ. ಇದು ಆರ್ಥಿಕ ಚಟುವಟಿಕೆಯಲ್ಲಿ ಬೆಳವಣಿಗೆಗೆ ಕಾರಣವಾಗುತ್ತದೆ, ಹೆಚ್ಚಿದ ಬೇಡಿಕೆಯೂ ಸ್ವಯಂಚಾಲಿತವಾಗಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com