ಯಾದಗಿರಿಯಲ್ಲಿ ‘ಬಸವ ಶರಣರ ಹಿಂದೂ ಸಮಾವೇಶ’ಕ್ಕೆ ಲಿಂಗಾಯತ ಸಂಘಟನೆಗಳ ವಿರೋಧ

ಬಸವಣ್ಣನವರ ಸಮಾನತೆ, ಮಾನವೀಯತೆ ಮತ್ತು ಶೋಷಣಾ ವಿರೋಧಿ ಚಿಂತನೆಗಳನ್ನು ಹಿಂದುತ್ವದ ಚೌಕಟ್ಟಿನೊಳಗೆ ಕಟ್ಟಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
Basavanna
ಬಸವಣ್ಣ
Updated on

ಬೆಂಗಳೂರು: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಮೇ 19 ರಂದು ನಡೆಯಲಿರುವ 'ಬಸವ ಶರಣ ಹಿಂದೂ ಸಮಾವೇಶ' ಕಾರ್ಯಕ್ರಮಕ್ಕೆ ಪ್ರಮುಖ ಲಿಂಗಾಯತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಬಸವಣ್ಣ ಮತ್ತು ಶರಣರ ಮೂಲ ತತ್ವಕ್ಕೆ ವಿರುದ್ಧವಾಗಿದೆ ಜಾಗತಿಕ ಲಿಂಗಾಯತ ಮಹಾಸಭಾ ಆರೋಪಿಸಿದೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಆರ್.ಜಿ.ಶಟಗಾರ ಬಸವಣ್ಣನವರ ಸಮಾನತೆ, ಮಾನವೀಯತೆ ಮತ್ತು ಶೋಷಣಾ ವಿರೋಧಿ ಚಿಂತನೆಗಳನ್ನು ಹಿಂದುತ್ವದ ಚೌಕಟ್ಟಿನೊಳಗೆ ಕಟ್ಟಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಶರಣರ ಚಳವಳಿ ಎಂದಿಗೂ ಜಾತಿ, ವರ್ಣ ಹಾಗೂ ಬ್ರಾಹ್ಮಣ್ಯ ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಸಂಕೇತವಾಗಿತ್ತು. ಈಗ ಅದೇ ಶರಣರ ಹೆಸರಿನಲ್ಲಿ ‘ಹಿಂದೂ ಸಮಾವೇಶ’ ಆಯೋಜಿಸುವುದು ಬಸವ ತತ್ವಗಳ ಅಪಹರಣಕ್ಕೆ ಮಾಡಿದ ಯತ್ನ ಎಂದು ಅವರು ಕಿಡಿಕಾರಿದರು.

ಮಹಾರಾಷ್ಟ್ರದ ಕಾಡಸಿದ್ದೇಶ್ವರ ಮಠದ ಕನ್ನೇರಿ ಸ್ವಾಮೀಜಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೂ ತೀವ್ರ ವಿರೋಧ ವ್ಯಕ್ತಪಡಿಸಿದ ಶಟಗಾರ, ಬಸವಾದಿ ಚಿಂತನೆಗಳನ್ನು ಮಸುಕುಗೊಳಿಸಿ, ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಾವೇಶವನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

Basavanna
ಲೆಕ್ಕಾ ಕೊಡಿ.. ಹೈ ಡ್ರಾಮಾ: ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಛಾಟನೆ

ಒಂದು ವೇಳೆ ಸಮಾವೇಶಕ್ಕೆ ಅನುಮತಿ ನೀಡಿದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಸೌಹಾರ್ದ ಕರ್ನಾಟಕವು ಸರ್ಕಾರದ ಮಧ್ಯಪ್ರವೇಶವನ್ನು ಒತ್ತಾಯಿಸಿ ಯಾದಗಿರಿ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದೆ.

"ಶರಣರ ಹೆಸರಿನಲ್ಲಿ 'ಹಿಂದೂ ಸಮಾವೇಶ' ಆಯೋಜಿಸುವುದು ಅವರ ಪರಂಪರೆಯನ್ನು ಅಗೌರವಿಸುತ್ತದೆ ಮತ್ತು ಅವರ ಸಮಾನತೆ ಮತ್ತು ಪ್ರಗತಿಪರ ಆದರ್ಶಗಳನ್ನು ವಿರೂಪಗೊಳಿಸುವ ಅಪಾಯವಿದೆ ಎಂದು ನಾವು ಹೇಳಿದ್ದೇವೆ.

ಅಂತಹ ಸಮಾವೇಶಕ್ಕೆ ಬಸವ ಶರಣರ ಹೆಸರನ್ನು ಬಳಸುವುದು ಅವರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಶರಣರ ಚಿಂತನೆಯ ತಪ್ಪಾದ ಪ್ರಾತಿನಿಧ್ಯಕ್ಕೆ ಕಾರಣವಾಗಬಹುದು ಎಂದು ನಾವು ಮನವಿ ಪತ್ರದಲ್ಲಿ ಉಲ್ಲೇಖಿಸದ್ದೇವೆ ಎಂದು ತಿಳಿಸಿದ್ದಾರೆ.

ಬಸವಣ್ಣನವರ ಬೋಧನೆಗಳನ್ನು ನಿರ್ದಿಷ್ಟ ರಾಜಕೀಯ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿರುವಂತೆ ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ ಮತ್ತು ಅವರು ಕೋಮು ಸಾಮರಸ್ಯವನ್ನು ಕಾಪಾಡಲು ಮತ್ತು ಈ ಪ್ರದೇಶದಲ್ಲಿ ಅಶಾಂತಿಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com