ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದೇಶಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಇಂದು ಆರ್‌ಪಿಎಫ್ ಸಿಬ್ಬಂದಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ.
Four Bangladeshi infiltrators arrested in Hubballi
ಸಾಂದರ್ಭಿಕ ಚಿತ್ರ
Updated on

ಹುಬ್ಬಳ್ಳಿ: ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು ಹುಬ್ಬಳ್ಳಿ ರೈಲ್ವೆ ರಕ್ಷಣಾ ಪಡೆ(RPF) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಇಂದು ಆರ್‌ಪಿಎಫ್ ಸಿಬ್ಬಂದಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರ ಬಳಿ ಯಾವುದೇ ಗುರುತಿನ ದಾಖಲೆಗಳಿರಲಿಲ್ಲ.

ದಾಖಲೆಗಳಿಲ್ಲದಿದ್ದರೂ ನಾಲ್ವರು ವಿದೇಶಿಗರು ರೈಲಿನಲ್ಲಿ ಪ್ರಯಾಣ ಮಾಡಿ ಹುಬ್ಬಳ್ಳಿವರೆಗೆ ಬಂದಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದಿರುವ ಆರ್‌ಪಿಎಫ್ ಸಿಬ್ಬಂದಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Four Bangladeshi infiltrators arrested in Hubballi
'BJP ಬಂಗಾಳ ಗೆದ್ದರೆ... ನಮಗೆ ಉಳಿಗಾಲವಿಲ್ಲ: ಬಾಂಗ್ಲಾದೇಶ ಸಂಸತ್ತಿನಲ್ಲಿ NCP ಸಂಸದನ ಅಳಲು, Video!

ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಆರ್‌ಪಿಎಫ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com