ಅಭಿಷೇಕ್ ರಾಜಕೀಯ ಪ್ರವೇಶ: ಸಿದ್ದರಾಮಯ್ಯ ರಾಜಿನಾಮೆ ಬಗ್ಗೆ ಸುಮಲತಾ ಅಂಬರೀಷ್ ಪ್ರತಿಕ್ರಿಯೆ

ಇದು ಶಾಕ್ ಏನಿಲ್ಲ. ಎರಡೂ ವರ್ಷದಿಂದ ಈ ಚರ್ಚೆ ನಡೆಯುತ್ತಿದೆ. ಇದೇನು ಶಾಕಿಂಗ್ ನ್ಯೂಸ್ ಅಲ್ಲ. ಯಾರೇ ಸಿಎಂ ಆದ್ರೂ ಒಳ್ಳೆಯ ಆಡಳಿತ ಕೊಡಬೇಕು ಅಷ್ಟೇ. ಅದನ್ನೇ ಜನರು ನಿರೀಕ್ಷೆ ಮಾಡೋದು ಎಂದು ಹೇಳಿದರು.
Sumalatha Ambhareesh
ಸುಮಲತಾ ಅಂಬರೀಷ್
Updated on

ಮದ್ದೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವುದನ್ನು ಎಲ್ಲರೂ ನಿರೀಕ್ಷೆ ಮಾಡಿದ್ದರು. ಇದು ಶಾಕಿಂಗ್ ಸುದ್ದಿ ಏನಲ್ಲ ಎಂದು ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಈ ಸಂಬಂಧ ಮದ್ದೂರಿನಲ್ಲಿ ಮಾತನಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಷ್, ‘ಸಿಎಂ ರಾಜೀನಾಮೆ ಎಲ್ಲರು ನಿರೀಕ್ಷೆ ಮಾಡಿದ್ದೆವು, ಇದು ಶಾಕ್ ಏನಿಲ್ಲ. ಎರಡೂ ವರ್ಷದಿಂದ ಈ ಚರ್ಚೆ ನಡೆಯುತ್ತಿದೆ. ಇದೇನು ಶಾಕಿಂಗ್ ನ್ಯೂಸ್ ಅಲ್ಲ. ಯಾರೇ ಸಿಎಂ ಆದ್ರೂ ಒಳ್ಳೆಯ ಆಡಳಿತ ಕೊಡಬೇಕು ಅಷ್ಟೇ. ಅದನ್ನೇ ಜನರು ನಿರೀಕ್ಷೆ ಮಾಡೋದು ಎಂದು ಹೇಳಿದರು.

ಪುತ್ರ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನಾನು ನಿರ್ಧಾರ ಮಾಡಲ್ಲ. ರಾಜಕೀಯ ಅಥವಾ ಸಿನಿಮಾ ರಂಗ ಎರಡರಲ್ಲಿ ಯಾವುದಾನ್ನಾದರೂ ಆಯ್ಕೆ ಮಾಡಿಕೊಳ್ಳುವುದು ಅಭಿಷೇಕ್‌ಗೆ ಬಿಟ್ಟ ವಿಚಾರ ಎಂದರು.

ಈಗ ನಾನು ಬಿಜೆಪಿ ಪಕ್ಷದಲ್ಲಿ ಇದ್ದೇನೆ. ಪಕ್ಷವು ಏನು ಸೂಚನೆ ನೀಡುತ್ತದೆ ಆ ಪ್ರಕಾರ ಪಕ್ಷದ ಸಂಘಟನೆ ವಿಷಯದಲ್ಲಿ ನಡೆದುಕೊಳ್ಳುತ್ತೇನೆ ಎಂದು ಸುಮಲತಾ ಮಾಹಿತಿ ನೀಡಿದ್ದಾರೆ.

Sumalatha Ambhareesh
ಸಿದ್ದರಾಮಯ್ಯ ರಾಜಮನೆತನಕ್ಕೆ ಹತ್ತಿರವೂ ಇಲ್ಲ, ದೂರವೂ ಇಲ್ಲ: ಪ್ರಮೋದಾದೇವಿ ಒಡೆಯರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com