ತುಂಗಭದ್ರಾ ನದಿಯಲ್ಲಿ ಮುಳುಗಿ ಐವರು ನೀರುಪಾಲು; ಎಲ್ಲರ ಮೃತದೇಹ ಹೊರತೆಗೆದ ಸಿಬ್ಬಂದಿ!

ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಘಟನೆ ನಡೆದಿದೆ. ಮೃತರನ್ನು ಮಂತ್ರಾಲಯದ ನಿವಾಸಿ 25 ವರ್ಷದ ರಾಘವೇಂದ್ರ, 23 ವರ್ಷದ ಧನುಷ್, 22 ವರ್ಷದ ಸಂಧ್ಯಾ ಮೃತ ದುರ್ದೈವಿಗಳು.
Five Drown In River
ನೀರಿನಲ್ಲಿ ಮುಳುಗಿ ಐವರು ಸಾವು
Updated on

ಬಳ್ಳಾರಿ: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಘಟನೆ ನಡೆದಿದೆ. ಮೃತರನ್ನು ಮಂತ್ರಾಲಯದ ನಿವಾಸಿ 25 ವರ್ಷದ ರಾಘವೇಂದ್ರ, 23 ವರ್ಷದ ಧನುಷ್, 22 ವರ್ಷದ ಸಂಧ್ಯಾ, ಹೈದರಾಬಾದ್‌ ಮೂಲದ 35 ವರ್ಷದ ಸತೀಶ್, 5 ವರ್ಷದ ಯುವನ ಚಂದ್ರ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್​​ ಅಪರ್ಣಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರು ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದರು. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೀನುಗಾರರ ಸಹಾಯದೊಂದಿಗೆ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

Five Drown In River
ಧಾರವಾಡದಲ್ಲಿ ಘೋರ ದುರಂತ: ಈಜಲು ಹೋಗಿದ್ದ ಮೂವರು ಬಾಲಕರು ಜಲಸಮಾಧಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com