ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೆ "ಅರೇಬಿಕ್' ಹೆಸರಿಡುವಂತೆ CM ಡಿಕೆಶಿಗೆ ಸಚಿವ ಜಮೀರ್ ಅಹ್ಮದ್ ಮನವಿ; ನೆಟ್ಟಿಗರ ಆಕ್ರೋಶ!

ಹೌದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪಿಂಕ್ ಲೈನ್ ಮಾರ್ಗದಲ್ಲಿರುವ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ‘ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
Minister Zameer Ahmed Khan seeks renaming of Kadugondanahalli Metro station as Arabic College
ಜಮೀರ್ ಅಹ್ಮದ್ - ಡಿಕೆ ಶಿವಕುಮಾರ್
Updated on: 

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಮೆಟ್ರೋ ನಿಲ್ದಾಣವೊಂದರ ಹೆಸರು ಬದಲಾವಣೆ ವಿಚಾರ ವಿವಾದಕ್ಕೆ ಕಾರಣವಾಗಿದೆ.

ಹೌದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪಿಂಕ್ ಲೈನ್ ಮಾರ್ಗದಲ್ಲಿರುವ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ‘ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ "ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ' ಎಂದು ಹೆಸರು ಮರು ನಾಮಕರಣ ಮಾಡುವುದಕ್ಕೆ ಮನವಿ ಮಾಡಿದ್ದಾರೆ.

Minister Zameer Ahmed Khan seeks renaming of Kadugondanahalli Metro station as Arabic College
ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; 20 ಸಾವಿರ ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!

ಸ್ಥಳೀಯ ಪ್ರದೇಶದ ಐತಿಹಾಸಿಕ ಮತ್ತು ಭೌಗೋಳಿಕ ಗುರುತನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಹೆಸರನ್ನು ಪರಿಗಣಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ನಾಗೇಂದ್ರ ಹಾಗೂ ಹೆಸ್ಕಾಂ ಅಧ್ಯಕ್ಷರಾದ ಜನಾಬ್ ಅಜ್ಜಂಪೀರ್ ಖಾದ್ರಿ ಅವರು ಸಹ ಇದ್ದರು.

ಆದರೆ ಈ ಪ್ರಸ್ತಾಪಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿಲ್ದಾಣಕ್ಕೆ ಕನ್ನಡ ಏಕೀಕರಣ ಹೋರಾಟಗಾರರ ಹೆಸರಿಡುವಂತೆ ಆಗ್ರಹ ಕೇಳಿಬಂದಿದೆ.

ಆದರೆ ನಿಲ್ದಾಣಕ್ಕೆ ಈಗಾಗಲೇ ಕಾಡುಗೊಂಡನಹಳ್ಳಿ ಎಂಬ ಸ್ಥಳೀಯ ಹೆಸರಿರುವಾಗ ಅದನ್ನು ಬದಲಾಯಿಸುವ ಅಗತ್ಯವೇನು ಎಂಬ ಪ್ರಶ್ನೆಯನ್ನು ಕನ್ನಡಪರ ಸಂಘಟನೆಗಳು ಮುಂದಿಟ್ಟಿವೆ.

ನೆಟ್ಟಿಗರ ಆಕ್ರೋಶ

ಈ ಪ್ರಸ್ತಾವಕ್ಕೆ ನೆಟ್ಟಿಗರು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡುಗೊಂಡನಹಳ್ಳಿ ಸರಿಯಾದ ಹೆಸರು ಯಾವ ಬದಲಾವಣೆಯೂ ಬೇಕಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

'ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ' ಎನ್ನುವುದಕ್ಕಿಂತಲೂ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣ ಎನ್ನುವುದು ಅತ್ಯಂತ ಸೂಕ್ತವಾದ ಹೆಸರಾಗಿದೆ. ಬೆಂಗಳೂರಿನಲ್ಲಿ ಆಯಾ ಪ್ರದೇಶದ ಜನ ಹೆಚ್ಚಾಗಿ ಗುರುತಿಸುವ ಹೆಸರುಗಳನ್ನೇ ನಾಮಕರಣ ಮಾಡುವುದು ಉತ್ತಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮತ್ತು ಬೆಂಗಳೂರಿಗೂ ಅರೇಬಿಕ್‌ಗೂ ಏನು ಸಂಬಂಧ ,ಈಗ ನೀವು ಯಾರು ಮಾತಾಡಲ್ಲ , ಸುಮ್ಮನೆ ಮೋಹನ್‌ದಾಸ್ ಪೈ ಹಿಂದೆ ಬಿದ್ದಿದ್ದೀರಿ ಎಂದೂ ಕೆಲವರು ಕನ್ನಡಪರ ಸಂಘಟನೆಗಳು ಈ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X