

ಬೆಂಗಳೂರು: ಕುಮಾರಸ್ವಾಮಿ ಏನು ಹಳ್ಳಿ ಗುಗ್ಗೂನಾ, ವಿಲೇಜ್ ಈಡಿಯಟ್ಸ್ ಥರ ಆಡೋದನ್ನು ಕೇಂದ್ರ ಸಚಿವರು ನಿಲ್ಲಿಸಬೇಕೆಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಇಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, 'ಭಾರತದ ಆತ್ಮ ಹಳ್ಳಿಗಳಲ್ಲಿದೆ’ ಎಂಬ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆಗೆ ಉತ್ತರ ನೀಡಿದ್ದಾರೆ.
‘ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹಳ್ಳಿಗರೆಂದರೆ ಗುಗ್ಗುಗಳಲ್ಲ’ ಎಂದಿದ್ದಾರೆ.
'ಗೃಹ ಇಲಾಖೆಗೆ ಪ್ರಿಯಾಂಕ್ ಖರ್ಗೆ ನಾಲಾಯಕ್' ಎಂಬ ಕುಮಾರಸ್ವಾಮಿಗೆ ಹೇ ಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ , 'ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲವಾ? ಮಕ್ಕಳ ಆಟ ಆಡುತ್ತಿದ್ದಾರಾ? ಜನರು ನಿಮಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ನಿಮ್ಮ ಪಾಲಿಟಿಕ್ಸ್ ನಲ್ಲಿ ಒಂದು ಬಾರಿಯೂ100 ಸೀಟು ಗೆಲ್ಲಲು ಆಗಲಿಲ್ಲ. ಚಿಕ್ಕ ಮಕ್ಕಳ ಹಾಗೆ ಮಾತನಾಡಿ ಘನತೆ ಕಳೆದುಕೊಂಡಿದ್ದಾರೆ' ಎಂದಿದ್ದರು.