ಮಂಡ್ಯ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಇಬ್ಬರು ಪ್ರೇಮಿಗಳು ಆತ್ಮಹತ್ಯೆ, ಮೃತದೇಹಗಳು ಛಿದ್ರ, ಛಿದ್ರ!

8 ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಸಹನಾ (25) ಅವರಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವಿದೆ. ಆದಾಗ್ಯೂ ಅವರು ವಾಸವಿದ್ದ ಬಿಲ್ಡಿಂಗ್‌ನಲ್ಲೇ ಇದ್ದ ಯುವಕ ರಾಹುಲ್ (23) ಜೊತೆಗಿನ ಅಕ್ರಮ ಸಂಬಂಧ ಈ ದುರಂತಕ್ಕೆ ಕಾರಣವಾಗಿದೆ.
sahana
ಸಾವಿಗೆ ಶರಣಾದ ಸಹನಾ
Updated on: 

ಮಂಡ್ಯ: ಚಲಿಸುತ್ತಿದ ರೈಲಿಗೆ ತಲೆಕೊಟ್ಟು ವಿವಾಹಿತ ಮಹಿಳೆ ಹಾಗೂ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ನಗರದ ಹೊರವಲಯದಲ್ಲಿರುವ ವಿಸಿ ಫಾರಂ ರೈಲ್ವೆ ಗೇಟ್ ಬಳಿ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಸಹನಾ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. ಮೃತದೇಹಗಳು ಛಿದ್ರ ಛಿದ್ರಗೊಂಡಿವೆ.

8 ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಸಹನಾ (25) ಅವರಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವಿದೆ. ಆದಾಗ್ಯೂ ಅವರು ವಾಸವಿದ್ದ ಬಿಲ್ಡಿಂಗ್‌ನಲ್ಲೇ ಇದ್ದ ಯುವಕ ರಾಹುಲ್ (23) ಜೊತೆಗಿನ ಅಕ್ರಮ ಸಂಬಂಧ ಈ ದುರಂತಕ್ಕೆ ಕಾರಣವಾಗಿದೆ.

ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿದ್ದ ದಂಪತಿ ನಡುವೆ ಅಕ್ರಮ ಸಂಬಂಧದ ವಿಚಾರ ತಿಳಿದು ಆಗಾಗ್ಗೆ ಜಗಳವಾಗುತ್ತಿತ್ತು. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ಬುದ್ಧಿ ಹೇಳಿದ್ದರೂ ಸಹನಾ, ರಾಹುಲ್ ಸಹವಾಸ ಬಿಟ್ಟಿರಲಿಲ್ಲ.

ಕಳೆದ ಸೋಮವಾರವೂ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ತೀವ್ರ ಜಗಳವಾಗಿದ್ದು, ನಾನು ರಾಹುಲ್ ಜೊತೆಯೇ ಬಾಳುತ್ತೇನೆ" ಎಂದಿದ್ದ ಸಹನಾಗೆ, "ನಿಮ್ಮಿಬ್ಬರನ್ನು ಬಾಳಲು ಬಿಡಲ್ಲ" ಎಂದು ಗಂಡ ವಿರೇಶ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಗಂಡನ ಗದರಿಕೆಯ ಬಳಿಕ ಮಂಗಳವಾರ ಬೆಂಗಳೂರಿನ ಮನೆಯಿಂದ ಹೊರಟಿದ್ದ ಸಹನಾ, ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದು ತಂಗಿದ್ದಳು ಎನ್ನಲಾಗಿದೆ.

ಗುರುವಾರ ಮಂಡ್ಯದ ಗುನ್ನಾಯಕನಹಳ್ಳಿಗೆ ಬಂದಿದ್ದ ರಾಹುಲ್, ಸಹನಾಳನ್ನು ಪಿಕ್ ಮಾಡಿಕೊಂಡು ಗಂಡ ವಿರೇಶ್ ವಿರುದ್ಧ ದೂರು ನೀಡಲು ಇಬ್ಬರೂ ತೀರ್ಮಾನಿಸಿದ್ದರು. ಆದರೆ "ಗಂಡ ವಿರೇಶ್ ನಮ್ಮನ್ನು ನೆಮ್ಮದಿಯಿಂದ ಬಾಳಲು ಬಿಡುವುದಿಲ್ಲ" ಎಂದು ತೀವ್ರ ಮನನೊಂದ ಭಗ್ನಪ್ರೇಮಿಗಳು ಅಂತಿಮವಾಗಿ ಪ್ರಾಣ ತ್ಯಾಗ ಮಾಡಲು ನಿರ್ಧರಿಸಿದ್ದರು. ಇಂದು ಬೆಳಿಗ್ಗೆ ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಚಲಿಸುವ ರೈಲಿಗೆ ಇಬ್ಬರೂ ತಲೆಕೊಟ್ಟು ಭೀಕರವಾಗಿ ಸಾವಿಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

sahana
ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ 12 ಬಾರಿ ಇರಿದ ಜಿಮ್‌ ಟ್ರೈನರ್‌; ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ರೈಲ್ವೆ ಪೊಲೀಸರು ಸ್ಥಳದಲ್ಲಿದ್ದ ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಮೃತರ ಕಡೆಯವರಿಗೆ ಘಟನೆಯ ಕುರಿತು ಮಂಡ್ಯ ರೈಲ್ವೆ ಪೊಲೀಸರು ಈಗಾಗಲೇ ಮಾಹಿತಿ ರವಾನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X