NOT EVERY VOICE DESERVES A RESPONSE: ಸಿಂಹ ಸುಮ್ಮನೆ ಕೂತಿದ್ರೂ ಬೊಗಳುತ್ತಿರುವ ನಾಯಿಗಳು; Hdk ಗೆ ಹಾಸನ DC ಕೌಂಟರ್!

ಸಿಂಹ ಸುಮ್ಮನೆ ಕೂತಿದ್ರೂ ನಾಯಿಗಳು ಬೊಗಳುವ ಇಮೇಜ್ ಹಾಕಿದ್ದಾರೆ. ಇದರ ಜೊತೆಗೆ NOT EVERY VOICE DESERVES A RESPONSE (ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ) ಎಂದು ಬರವಿದೆ.
ಎಚ್ ಡಿಕೆ ಲಂಚದ ಬಾಂಬ್‌ಗೆ ಹಾಸನ DC ಕೌಂಟರ್
ಎಚ್ ಡಿಕೆ ಲಂಚದ ಬಾಂಬ್‌ಗೆ ಹಾಸನ DC ಕೌಂಟರ್
Updated on: 

ಹಾಸನ: ಹಾಸನ ಡಿಸಿ ಕೆ.ಎಸ್‌ ಲತಾಕುಮಾರಿ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನಡುವಿನ ಜಟಾಪಟಿ ತಾರಕಕ್ಕೇರಿದೆ.

ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರ ಲಂಚದ ಆರೋಪಕ್ಕೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದ ಲತಾಕುಮಾರಿ ಅವರು ಬಳಿಕ ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಸ್ಟೇಟಸ್‌ ಪೋಸ್ಟ್‌ ಹಾಕುವ ಮೂಲಕ ಮತ್ತೊಮ್ಮೆ ಕೌಂಟರ್‌ ಕೊಟ್ಟಿದ್ದಾರೆ. ತಮ್ಮ ವಾಟ್ಸಪ್‌, ಎಕ್ಸ್‌ಗಳಲ್ಲಿ ಇಂಗ್ಲಿಷ್‌ ಬರಹವಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.

ಸಿಂಹ ಸುಮ್ಮನೆ ಕೂತಿದ್ರೂ ನಾಯಿಗಳು ಬೊಗಳುವ ಇಮೇಜ್ ಹಾಕಿದ್ದಾರೆ. ಇದರ ಜೊತೆಗೆ NOT EVERY VOICE DESERVES A RESPONSE (ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ) ಎಂಬ ಬರಹವಿದೆ. ಎರಡು ಅರ್ಥವಿರುವ ಈ ಪೋಸ್ಟರ್‌ನ ಪೋಸ್ಟ್‌ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ್ದ ಹಾಸನ ಡಿಸಿ, ನನ್ನನ್ನ ಟಾರ್ಗೆಟ್‌ ಮಾಡಿದ್ದಾರೆ, ಡೇ 1 ನಿಂದ (ಕರ್ತವ್ಯದ ಮೊದಲ ದಿನದಿಂದ) ಇದನ್ನ ಅನುಭವಿಸುತ್ತಲೇ ಬಂದಿದ್ದೇನೆ. ಇನ್ನೂ ಏನೇನು ಆರೋಪಗಳು ಬರುತ್ತವೆಯೋ ಗೊತ್ತಿಲ್ಲ. ಆದ್ರೆ ನಾವ್‌ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿನೇ ಬಂದಿರ್ತೀವಿ. ಅದಕ್ಕೆಲ್ಲ ನಮಗೆ ಟ್ರೈನಿಂಗ್‌ ಆಗಿರುತ್ತೆ. ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು, ಹೆಣ್ಣುಮಕ್ಕಳನ್ನ ತೇಜೋವಧೆ ಮಾಡುವ ಕೆಲಸ ಮಾಡಲಾಗ್ತಿದೆ. ಜನ ಇದನ್ನ ನಂಬಬೇಡಿ ಎಂದು ಮನವಿ ಮಾಡಿದ್ದರು.

ಎಚ್ ಡಿಕೆ ಲಂಚದ ಬಾಂಬ್‌ಗೆ ಹಾಸನ DC ಕೌಂಟರ್
ತೇಜೋವಧೆಗೆ ಹುನ್ನಾರ: 'ಸತ್ಯಾಸತ್ಯತೆ' ಹೊರಬರಬೇಕಿದೆ; HD ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು, Video

ಹಾಸನದಲ್ಲೇ ಉಳಿದುಕೊಳ್ಳಲು ಜಿಲ್ಲಾಧಿಕಾರಿ ಲತಾಕುಮಾರಿಯವರು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರು.ಲಂಚ ನೀಡಿದ್ದಾರೆ ಎಂದು ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕರ ವಾಟ್ಸ್‌ಆ್ಯಪ್‌ ಚಾಟ್‌ಗಳನ್ನು ಬಹಿರಂಗಗೊಳಿಸಿದ್ದರು.

ಎಚ್ಡಿಕೆಯವರ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ತಮ್ಮ ವಿರುದ್ಧ ಮಾಡಿರುವ ಲಂಚದ ಆರೋಪಗಳು ಸಂಪೂರ್ಣ ಸುಳ್ಳು. ವಾಟ್ಸ್‌ಆ್ಯಪ್‌ ಚಾಟ್‌ಗಳ ಸತ್ಯಾಸತ್ಯತೆ ಕುರಿತು ತನಿಖೆಯಾಗಲಿ. ಚಾಟ್‌ಗಳನ್ನು ಎಡಿಟ್ ಮಾಡಲಾಗಿದೆ ಎಂದು ನಮ್ಮ ಪಿಎ ಹೇಳುತ್ತಿದ್ದಾರೆ. ಈ ವಿಚಾರವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರುತ್ತೇನೆ. ಅಲ್ಲದೆ, ಈ ಬಗ್ಗೆ ಪೊಲೀಸ್‌ ಹಾಗೂ ಸೈಬರ್‌ ಕ್ರೈಂ ವಿಭಾಗಕ್ಕೂ ದೂರು ನೀಡುತ್ತೇನೆ ಎಂದರು.

ಪ್ರತಿ ಪ್ರೆಸ್ ಮೀಟ್‌ನಲ್ಲೂ ಒಂದೊಂದು ಸುಳ್ಳು ಆರೋಪ ಕೇಳುತ್ತೇವೆ. ಅದು ಸುಳ್ಳು ಎಂದು ನಮಗೆ ಗೊತ್ತಿರುವುದರಿಂದ ಧೈರ್ಯವಾಗಿ ಎದುರಿಸುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X