ಪ್ರಧಾನಿ ಮೋದಿ ಬಳಿ ಚರ್ಚೆಗೆ ಖಾಸಗಿ ಟೈಮ್ ಕೇಳಿದೆ, ಡೆಲ್ಲಿಗೆ ಬನ್ನಿ ಅಂದ್ರು- ಸಂಚಲನ ಮೂಡಿಸಿದ CM DK Shivakumar ಮಾತು

ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬರುತ್ತಿದ್ದು, ನಾವು ಅವರನ್ನು ಗೌರವಯುತವಾಗಿ ಸ್ವಾಗತಿಸಿ, ಗೌರವಯುತವಾಗಿ ನಮ್ಮ ರಾಜ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
DK Shivakumar
ಡಿಕೆ ಶಿವಕುಮಾರ್online desk
Updated on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲವು ವಿಷಯಗಳನ್ನು ಖಾಸಗಿಯಾಗಿ ಚರ್ಚಿಸಲು ತಾವು ಸಮಯ ಕೋರಿದ್ದು, ಅದಕ್ಕೆ ಪ್ರತಿಯಾಗಿ ಪ್ರಧಾನಿಯವರು ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಭೇಟಿಯ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.

DK Shivakumar
Watch | ನಮ್ಮ ಮೆಟ್ರೋ: ಕೇಂದ್ರದ ಪಾಲು ಕೇವಲ ಶೇ.16; ತೇಜಸ್ವಿ ಸೂರ್ಯ ಹೇಳಿದ್ದೇನು?

ಬರ ಪರಿಹಾರದ ಬಗ್ಗೆ ಚರ್ಚೆ ಮಾಡುವಿರಾ ಎಂದು ಗುರುವಾರ ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿ ವೇಳೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, “ಖಂಡಿತವಾಗಿ ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇವೆ. ಆದರೆ ನಾನು ಅವರೊಂದಿಗೆ ಏನು ಚರ್ಚೆ ಮಾಡುತ್ತೇನೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಖಾಸಗಿಯಾಗಿ ಕೆಲವು ವಿಚಾರಗಳ ಚರ್ಚೆ ಮಾಡಲು ಸಮಯ ಕೇಳಿದ್ದು, ಅವರು ದೆಹಲಿಗೆ ಆಗಮಿಸುವಂತೆ ತಿಳಿಸಿದ್ದಾರೆ” ಎಂದರು.

ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬರುತ್ತಿದ್ದು, ನಾವು ಅವರನ್ನು ಗೌರವಯುತವಾಗಿ ಸ್ವಾಗತಿಸಿ, ಗೌರವಯುತವಾಗಿ ನಮ್ಮ ರಾಜ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ. “ಕರ್ನಾಟಕ ರಾಜ್ಯದಿಂದ ಭಾರತ ದೇಶಕ್ಕೆ ಗೌರವ ಬರುವ ವಿಚಾರ ಇದೆ. ಹೀಗಾಗಿ ಅವರು ನಮಗೆ ಸಹಕಾರ ನೀಡಬೇಕು, ನಾವು ಅವರಿಗೆ ಸಹಕಾರ ನೀಡಬೇಕು” ಎಂದು ಸಿಎಂ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X