ಬೆನ್ನು ನೋವು ಹೇಗಿದೆ? ಇನ್ನು ಎಷ್ಟು ದಿನ ಇರಬೇಕು? ನರಕ ಆಗ್ತಿದೆ...: ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ – ಸುಬ್ಬಿ!

ಪವಿತ್ರಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್‌, ʻಇಷ್ಟು ದಿನ ಇದ್ದೀಯಾ, ಇನ್ನೂ 4 ರಿಂದ 5 ತಿಂಗಳು ಇರು. ಮೆಂಟಲಿ ಸ್ಟ್ರಾಂಗ್‌ ಆಗಿರು, ಹೃದಯ ಗಟ್ಟಿ ಮಾಡ್ಕೊʼ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
Darshan-Pavithra Gowda
ದರ್ಶನ್-ಪವಿತ್ರಾ ಗೌಡ
Updated on: 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಮತ್ತು ಅವರ ಗೆಳತಿ ಪವಿತ್ರಾಗೌಡ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ವೇಳೆ ನಡೆಸಿದ ಮಾತುಕತೆಯ ವಿಚಾರ ಇದೀಗ ಎಲ್ಲರ ಗಮನ ಸೆಳೆದಿದೆ.

ಇಂದು ಕೋರ್ಟ್‌ ವಿಚಾರಣೆ ವೇಳೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳಾದ ದರ್ಶನ್ ಹಾಗೂ ಅವರ ಗೆಳತಿ ಪವಿತ್ರಾಗೌಡ ಅವರು ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸುಬ್ಬು, ಊಟ ಆಯ್ತಾ…? ಬೆನ್ನು ನೋವು ಹೇಗಿದೆ? ಎಂದು ಪವಿತ್ರಾ ಗೌಡ ಅವರು, ದರ್ಶನ್‌ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

Darshan-Pavithra Gowda
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಬೇಡಿಕೆಗೆ ಕೋರ್ಟ್ ಅಸ್ತು; ಆದರೆ ಷರತ್ತುಗಳು ಅನ್ವಯ!

ಬೆನ್ನು ನೋವು ಹೇಗಿದೆ…? ಫಿಸಿಯೋಥೆರಪಿ ಆಯ್ತಾ…? ಇನ್ನೂ ಎಷ್ಟು ದಿನ ಮಾಡಿಸಬೇಕು…?ʼʼ ಎಂದು ಪವಿತ್ರಾಗೌಡ, ದರ್ಶನ್‌ ಯೋಗಕ್ಷೇಮ ವಿಚಾರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್‌ ಕೂಡ, ʻʻಬೆನ್ನು ಪೂರ್ತಿ ಮುರಿದು ಹೋದಂತಾಗಿದೆ, ನೋವು ಆಗ್ತಿದೆ. ಫಿಸಿಯೋಥೆರಪಿ ಮಾಡ್ತಾ ಇದ್ದಾರೆ. ಒಂದು ಸೆಷನ್‌ ಆಗಿದೆ ಅಷ್ಟೇ, ಇನ್ನೂ ಮಾಡಿಸಬೇಕು ಎಂದು ಹೇಳಿಕೊಂಡಿದ್ದಾರಂತೆ.

ಇದೇ ವೇಳೆ ಬೇಸರ ಹೊರಹಾಕಿದ ಪವಿತ್ರಾ ಗೌಡ, ಇನ್ನು ಎಷ್ಟು ದಿನ ಹೀಗೆ ಜೈಲಲ್ಲಿ ಇರಬೇಕು? ಎಂದು ಪವಿತ್ರಾ ಗೌಡ ಕೇಳಿದಾಗ, ದರ್ಶನ್‌ ಕೈ ಸನ್ನೆಯ ಮೂಲಕ 4 ಎಂದು ಸೂಚಿಸಿದ್ರಂತೆ. ಇದಕ್ಕೆ ಪವಿತ್ರಾಗೌಡ, ʻನಂಗೆ ಇಲ್ಲಿ ಇರೋದಕ್ಕೆ ಆಗ್ತಾ ಇಲ್ಲ, ನರಕ ಆಗ್ತಿದೆʼ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಪವಿತ್ರಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್‌, ʻಇಷ್ಟು ದಿನ ಇದ್ದೀಯಾ, ಇನ್ನೂ 4 ರಿಂದ 5 ತಿಂಗಳು ಇರು. ಮೆಂಟಲಿ ಸ್ಟ್ರಾಂಗ್‌ ಆಗಿರು, ಹೃದಯ ಗಟ್ಟಿ ಮಾಡ್ಕೊʼ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ಇಬ್ಬರು, ಕಾನ್ಫರೆನ್ಸ್‌ ಕಟ್ಟಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದರಂತೆ. ಕೆಲವೇ ಕ್ಷಣಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ಮತ್ತೆ ಸಂಪರ್ಕಕ್ಕೆ ಬಂದ ಕೂಡಲೇ ಇಬ್ಬರೂ ಮೌನವಾಗಿದ್ದಾರೆ ಎಂದು ಮೂಲಗಳಿಂದ ತಿಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X