ತಾಂತ್ರಿಕ ದೋಷ: ಮೈಸೂರಿನಲ್ಲಿಯೇ ಕೆಟ್ಟು ನಿಂತಿದ್ದ ಪ್ರಧಾನಿ ಮೋದಿಯ ಬೆಂಗಾವಲು ಹೆಲಿಕಾಪ್ಟರ್ ರಿಪೇರಿ ಬಳಿಕ ನಿರ್ಗಮನ!

ನಿನ್ನೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಪ್ರಧಾನಿ ಮೋದಿ ಅವರು ಲಲಿತಮಹಲ್‌ ಹೆಲಿಪ್ಯಾಡ್‌ಗೆ ಆಗಮಿಸಿದ್ದರು.
PM Modi's Convoy
ಪ್ರಧಾನಿ ಮೋದಿಯ ಬೆಂಗಾವಲು ಹೆಲಿಕಾಪ್ಟರ್
Updated on: 

ಮೈಸೂರು: ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಹೆಲಿಕಾಪ್ಟರ್‌ ರಿಪೇರಿ ಬಳಿಕ ನಿರ್ಗಮಿಸಿದೆ.

ನಿನ್ನೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಪ್ರಧಾನಿ ಮೋದಿ ಅವರು ಲಲಿತಮಹಲ್‌ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಈ ವೇಳೆ ಒಂದು ಹೆಲಿಕಾಪ್ಟರ್‌ನಲ್ಲಿ ಮೋದಿ ಆಗಮಿಸಿದ್ದರು. ಪ್ರಧಾನಿ ಮೋದಿ ಅವರ ಬೆಂಗಾವಲಿಗೆ ಒಟ್ಟು ಎರಡು ಹೆಲಿಕಾಪ್ಟರ್‌ಗಳಿದ್ದವು.

ಪ್ರಧಾನಿ ಮೋದಿ ಲ್ಯಾಂಡಿಂಗ್‌ ಆದ ನಂತರ ಟೇಕ್‌ ಆಫ್‌ ಆಗಬೇಕಿದ್ದ 3 ಹೆಲಿಕಾಪ್ಟರ್‌ಗಳಲ್ಲಿ 2 ಹೆಲಿಕಾಪ್ಟರ್‌ಗಳು ಟೇಕ್‌ ಆಫ್‌ ಆಗಿದ್ದವು. ಆದರೆ .ಇಂಡಿಯನ್‌ ಏರ್‌ ಫೋರ್ಸ್‌ಗೆ ಸೇರಿದ ಒಂದು ಹೆಲಿಕಾಪ್ಟರ್‌ ನ್ನು ತಾಂತ್ರಿಕ ದೋಷದಿಂದ ಮೈಸೂರಿನ ಲಲಿತ್ ಮಹಲ್ ಬಳಿಯ ಜಯಚಾಮರಾಜ ಒಡೆಯರ್ ಹೆಲಿಪ್ಯಾಡ್ ನಲ್ಲಿಯೇ ನಿಲ್ಲಿಸಲಾಗಿತ್ತು.

PM Modi's Convoy
ಮೈಸೂರು: ಅಸ್ವಸ್ಥಗೊಂಡು ಬೀಳುವ ಸ್ಥಿತಿಯಲ್ಲಿದ್ದ 70ರ ವೃದ್ಧ ಕಾರ್ಯಕರ್ತೆಗೆ ಜ್ಯೂಸ್ ಕೊಟ್ಟು ಆರೈಕೆ; ಪ್ರಧಾನಿ ಮೋದಿ ಮಾನವೀಯತೆಗೆ ಜನರ ಮೆಚ್ಚುಗೆ!

ಬೆಂಗಳೂರಿನಿಂದ ಮೈಸೂರಿಗೆ ಬಂದ ಬಳಿಕ ಈ ವಿಶೇಷ ಹೆಲಿಕಾಪ್ಟರ್‌ ಮತ್ತೆ ಹಾರಲೇ ಇಲ್ಲ. ನಿಂತಲ್ಲೇ ನಿಂತುಬಿಟ್ಟಿತು. ಮೈಸೂರು ಸ್ಥಳೀಯ ಪೊಲೀಸರು ಹೆಲಿಪ್ಯಾಡ್ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಅಲ್ಲಿ ನಿಲ್ಲಿಸಲಾದ ಹೆಲಿಕಾಪ್ಟರ್‌ಗೆ ಭದ್ರತೆ ಒದಗಿಸಿದ್ದರು. ಈ ವ್ಯವಸ್ಥೆಗಳ ಭಾಗವಾಗಿ ಮೈಸೂರು ನಗರ ಪಾಲಿಕೆಯ ಸಿಬ್ಬಂದಿಯನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಈ ಮಧ್ಯೆ ನಿನ್ನೆಯಿಂದಲೂ ನಿಂತಿದ್ದ ಹೆಲಿಕಾಪ್ಟರ್‌ ಅನ್ನು ಅಧಿಕಾರಿಗಳು ರಿಪೇರಿ ಮಾಡಿದರು. ಕೆಟ್ಟು ನಿಂತಿದ್ದ ಹೆಲಿಕಾಪ್ಟರ್‌ ಅನ್ನು ಪೈಲಟ್‌ ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X