ಬೆಂಗಳೂರು ಮೆಟ್ರೋ: ಪಿಂಕ್ ಲೈನ್‌ನಲ್ಲಿ ಮೊದಲ ದಿನವೇ 33 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ!

ಮೊದಲ ದಿನವೇ ಪಿಂಕ್ ಲೈನ್ ಸಾವಿರಾರು ನಾಗರಿಕರನ್ನು ಆಕರ್ಷಿಸಿತು. ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಒಟ್ಟು 33,409 ಪ್ರಯಾಣಿಕರು ಸಂಚರಿಸಿರುವ ಮಾಹಿತಿ ಸಿಕ್ಕಿದೆ.
Pink Line Metro
ಪಿಂಕ್ ಲೈನ್ ನಲ್ಲಿ ಮೆಟ್ರೋ
Updated on: 

ಬೆಂಗಳೂರು: ಕಾಳೇನ ಅಗ್ರಹಾರ ಮತ್ತು ಎಸ್ ಜಿ ಪಾಳ್ಯ ನಡುವಿನ ಪಿಂಕ್ ಲೈನ್ ( ಗುಲಾಬಿ ಮಾರ್ಗ) ಮಾರ್ಗದಲ್ಲಿ ಶನಿವಾರ ಬೆಳಗ್ಗೆ 6 ​​ಗಂಟೆಗೆ ರೈಲು ಸಂಚಾರ ಪ್ರಾರಂಭವಾಯಿತು. ಮೊದಲ ದಿನದಂದು ಇದರಲ್ಲಿ ಸಂಚರಿಸಿದ ಪ್ರಯಾಣಿಸಿದ ಜನರ ಮುಖಗಳಲ್ಲಿ ನಿರಾಳತೆ, ಸಂತೋಷ ಮತ್ತು ಉತ್ಸಾಹ ಎದ್ದು ಕಾಣುತ್ತಿತ್ತು.

ಬಿಎಂಆರ್‌ಸಿಎಲ್ (BMRCL) ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದ ಪ್ರತಿಯೊಬ್ಬರಿಗೂ ಗುಲಾಬಿ ಬಣ್ಣದ ಗುಲಾಬಿ ಹೂವನ್ನು ನೀಡಿತು. ಗುಲಾಬಿ ಬಣ್ಣದ ಉಡುಪು ಧರಿಸಿ, ಕೈಯಲ್ಲಿ ಗುಲಾಬಿ ಹೂವುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ ಪುಟ್ಟ ಬಾಲಕಿಯರ ದೃಶ್ಯ ಮನಸ್ಸಿಗೆ ಮುದ ನೀಡುವಂತಿತ್ತು.

ಮೊದಲ ದಿನವೇ ಪಿಂಕ್ ಲೈನ್ ಸಾವಿರಾರು ನಾಗರಿಕರನ್ನು ಆಕರ್ಷಿಸಿತು. ಬೆಳಿಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಒಟ್ಟು 33,409 ಪ್ರಯಾಣಿಕರು ಸಂಚರಿಸಿರುವ ಮಾಹಿತಿ ಸಿಕ್ಕಿದೆ. ಬೆಳಗಿನ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೂ, ಮಧ್ಯಾಹ್ನದ ವೇಳೆಗೆ ಗಣನೀಯವಾಗಿ ಹೆಚ್ಚಾಯಿತು ಮತ್ತು ಸಂಜೆಯ ಹೊತ್ತಿಗೆ ಇನ್ನಷ್ಟು ಏರಿಕೆಯಾಯಿತು. ಜಯದೇವ ಇಂಟರ್‌ಚೇಂಜ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಸೋಮವಾರದಿಂದ ಪ್ರಯಾಣಿಕರ ನೈಜ ಸಂಖ್ಯೆ ತಿಳಿಯಲಿದ್ದು, ತಿಂಗಳ ಅಂತ್ಯದ ವೇಳೆಗೆ ಇದು ಸ್ಥಿರಗೊಳ್ಳಲಿದೆ" ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಬೊಮ್ಮಸಂದ್ರ ಮತ್ತು ಸುದ್ದಗುಂಟೆ ಪಾಳ್ಯದ ಕಡೆಗೆ ಹೋಗುವ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಹೆಚ್ಚಿನ ಪ್ರಯಾಣಿಕರು ಕಾಳೇನ ಅಗ್ರಹಾರ ಮತ್ತು ಆರ್.ವಿ. ರಸ್ತೆಯ ಕಡೆಗೆ ಸಂಚರಿಸಿದರು. ಬೊಮ್ಮಸಂದ್ರದ ಕಡೆಗೆ 1,065 ಪ್ರಯಾಣಿಕರು ಮತ್ತು ಸುದ್ದಗುಂಟೆ ಪಾಳ್ಯದ ಕಡೆಗೆ 1,596 ಪ್ರಯಾಣಿಕರು ಪ್ರಯಾಣಿಸಿದರು. ಮತ್ತೊಂದೆಡೆ, 4,346 ಪ್ರಯಾಣಿಕರು ಕಾಳೇನ ಅಗ್ರಹಾರದ ಕಡೆಗೆ ಮತ್ತು 4,263 ಪ್ರಯಾಣಿಕರು ಆರ್.ವಿ. ರಸ್ತೆಯ ಕಡೆಗೆ ಪ್ರಯಾಣಿಸಿದ್ದಾರೆ. ಕಾರಣ ಏನೇ ಇರಲಿ, ಕಾಳೇನ ಅಗ್ರಹಾರದಿಂದ ಎಸ್‌ಜಿ ಪಾಳ್ಯದವರೆಗಿನ ಆರು ನಿಲ್ದಾಣಗಳನ್ನು ಒಳಗೊಂಡ 7.5 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗವು ಹಬ್ಬದ ವಾತಾವರಣವನ್ನು ಹೊಂದಿತ್ತು.

Pink Line Metro
ನನ್ನ ಬಳಿ ಹಣವಿಲ್ಲ ಅಂದೆ, ಮೋದಿ ಅವರೇ ಟಿಕೆಟ್ ತಗೊಂಡ್ರು: ಪಿಂಕ್ ಲೈನ್ ಉದ್ಘಾಟನೆ ವೇಳೆ PM ಸೌಹಾರ್ದ ನಡೆ ನೆನೆದ DKS

ಹತ್ತಿರದಲ್ಲಿಯೇ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಮಾಲ್‌ಗಳು, ಕಾಲೇಜುಗಳು ಮತ್ತು ಶಾಲೆಗಳು ಇರುವುದರಿಂದ, 'ಪಿಂಕ್ ಲೈನ್' (Pink Line) ವಿವಿಧ ವಯೋಮಾನದ ಜನರ ನಾನಾ ಅಗತ್ಯಗಳನ್ನು ಪೂರೈಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X