ಬೆಂಗಳೂರು: ನವೆಂಬರ್ 17ರಿಂದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ

ಕಳೆದ 18 ವರ್ಷಗಳಿಗೂ ಹೆಚ್ಚು ಕಾಲದಿಂದ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ ಆರರಿಂದ ಎಂಟು ಗಂಟೆಗಳ ಕಾಲ ಕೆಲಸ ಮಾಡುವುದರ ಜತೆಗೆ ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುತ್ತಾರೆ.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ನಿಗದಿತ ಮಾಸಿಕ ಗೌರವಧನ 15,000 ರೂ, ಮೊಬೈಲ್ ಫೋನ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಇದೇ ನವೆಂಬರ್ 17ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಹಲವು ಬಾರಿ ಮನವಿ ಸಲ್ಲಿಸಿದರೂ ರಾಜ್ಯ ಸರ್ಕಾರ ತಮ್ಮ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದೆ.

ಕಳೆದ 18 ವರ್ಷಗಳಿಗೂ ಹೆಚ್ಚು ಕಾಲದಿಂದ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ ಆರರಿಂದ ಎಂಟು ಗಂಟೆಗಳ ಕಾಲ ಕೆಲಸ ಮಾಡುವುದರ ಜತೆಗೆ ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುತ್ತಾರೆ.

ಆದರೆ, ಅವರಿಗೆ ನೀಡಲಾಗುತ್ತಿರುವ ಸಂಭಾವನೆ ಬಹುತೇಕ ಪ್ರೋತ್ಸಾಹಧನ ಆಧಾರಿತವಾಗಿದ್ದು, ಇದರಿಂದ ಆರ್ಥಿಕ ಅಭದ್ರತೆ ಎದುರಿಸುವಂತಾಗಿದೆ. ಇತರ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ನಿಗದಿತ ಗೌರವಧನ ನೀಡಲಾಗುತ್ತಿದೆ ಎಂದು ಸಂಘ ಗಮನ ಸೆಳೆದಿದೆ.

Representational image
ಗೌರವಧನ ನೀಡದ ಸರ್ಕಾರ: ಜಾತಿ ಗಣತಿ ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರು ಬಹಿಷ್ಕಾರ

ಸಂಘವು ಸರ್ಕಾರದ ಮುಂದೆ ಏಳು ಪ್ರಮುಖ ಬೇಡಿಕೆಗಳು

  • ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ. ನಿಗದಿತ ಗೌರವಧನ ನೀಡಬೇಕು.

  • ಉತ್ತಮ ಗುಣಮಟ್ಟದ ಮೊಬೈಲ್ ಫೋನ್‌ಗಳನ್ನು ಒದಗಿಸುವುದರ ಜತೆಗೆ ರೀಚಾರ್ಜ್ ಭತ್ಯೆ ನೀಡಬೇಕು.

  • ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು.

  • ಆರೋಗ್ಯ ಇಲಾಖೆಗೆ ಸಂಬಂಧಿಸದ ಕೆಲಸಗಳನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸುವುದನ್ನು ನಿಲ್ಲಿಸಬೇಕು.

  • 2025ರ ಫೆಬ್ರವರಿ 25ರಿಂದ ಸೇವೆಯಿಂದ ಕೈಬಿಡಲಾಗಿರುವ ಆಶಾ ಕಾರ್ಯಕರ್ತೆಯರ ಫೆಸಿಲಿಟೇಟರ್‌ಗಳನ್ನು ಸೂಕ್ತ ಗೌರವಧನದೊಂದಿಗೆ ಮತ್ತೆ ಸೇವೆಗೆ ನೇಮಿಸಿಕೊಳ್ಳಬೇಕು.

  • ಬಾಕಿ ಉಳಿದಿರುವ ಗೌರವಧನ ಮತ್ತು ಇತರ ಮೊತ್ತಗಳನ್ನು ಪಾವತಿಸಬೇಕು.

  • 2024-25ನೇ ಸಾಲಿನ ಹೆಚ್ಚುವರಿ ಮಾಸಿಕ 1,500 ರೂ. ಪ್ರೋತ್ಸಾಹಧನ ಸೇರಿದಂತೆ ಬಾಕಿ ಇರುವ ಎಲ್ಲ ಮೊತ್ತಗಳನ್ನು ಬಿಡುಗಡೆ ಮಾಡಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X