ವಾಸ್ತು ಪ್ರಕಾರ ನವೀಕರಣ: ಕುಮಾರಕೃಪಾ ಗೆಸ್ಟ್‌ಹೌಸ್‌ಗೆ 'ಗಂಗಾ' ಎಂದು ನಾಮಕರಣ; ನೊಣವಿನಕೆರೆ ಅಜ್ಜಯ್ಯ ನೇತೃತ್ವದಲ್ಲಿ ವಿಶೇಷ ಹೋಮ-ಹವನ!

ನವೀಕೃತ ಗಂಗಾ ನಿವಾಸದಲ್ಲಿರುವ ಕೊಠಡಿಗಳಿಗೂ ನದಿಗಳ ಹೆಸರುಗಳನ್ನು ಇಡಲಾಗಿದ್ದು, ಹೇಮಾವತಿ, ಶಾಲ್ಮಲ, ತುಂಗಭದ್ರಾ ಎಂದು ಹೆಸರಿಸಲಾಗಿದೆ. ಕಾವೇರಿ ನಿವಾಸ ಮತ್ತು ಕೃಷ್ಣ ಕಚೇರಿಗಳ ಮಾದರಿಯಲ್ಲೇ ಈ ನಿವಾಸಕ್ಕೂ ನದಿ ಹೆಸರಿಡಲಾಗಿದೆ.
ವಾಸ್ತು ಪ್ರಕಾರ ನವೀಕರಣ: ಕುಮಾರಕೃಪಾ ಗೆಸ್ಟ್‌ಹೌಸ್‌ಗೆ 'ಗಂಗಾ' ಎಂದು ನಾಮಕರಣ; ನೊಣವಿನಕೆರೆ ಅಜ್ಜಯ್ಯ ನೇತೃತ್ವದಲ್ಲಿ ವಿಶೇಷ ಹೋಮ-ಹವನ!
Updated on: 

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕುಮಾರ ಕೃಪಾ ಅತಿಥಿಗೃಹವನ್ನು ನವೀಕರಿಸಿ ಡಿಕೆ ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿ ಮಾಡಲಾಗಿದೆ. ಇದಕ್ಕೆ 'ಗಂಗಾ' ಎಂದು ಹೊಸ ನಾಮಕರಣ ಮಾಡಲಾಗಿದ್ದು, ಬಿಗಿ ಭದ್ರತೆಯೊಂದಿಗೆ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ನೆರವೇರಲಿದೆ.

ಸಿಎಂ ಡಿಕೆ ಶಿವಕುಮಾರ್ ಅವರು ಕುಮಾರಕೃಪಾ ಗೆಸ್ಟ್ ಹೌಸ್‌ಗೆ ಗಂಗಾ ಎಂದು ಮರುನಾಮಕರಣ ಮಾಡಿ, ಅದನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಿದ್ದಾರೆ. ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ನಾಮಫಲಕವನ್ನು ಸಹ ಅಳವಡಿಸಲಾಗಿದೆ.

ನವೀಕೃತ ಗಂಗಾ ನಿವಾಸದಲ್ಲಿರುವ ಕೊಠಡಿಗಳಿಗೂ ನದಿಗಳ ಹೆಸರುಗಳನ್ನು ಇಡಲಾಗಿದ್ದು, ಹೇಮಾವತಿ, ಶಾಲ್ಮಲ, ತುಂಗಭದ್ರಾ ಎಂದು ಹೆಸರಿಸಲಾಗಿದೆ. ಕಾವೇರಿ ನಿವಾಸ ಮತ್ತು ಕೃಷ್ಣ ಕಚೇರಿಗಳ ಮಾದರಿಯಲ್ಲೇ ಈ ನಿವಾಸಕ್ಕೂ ನದಿ ಹೆಸರಿಡಲಾಗಿದೆ.

ಇದಕ್ಕೆ ಪೂರ್ವಭಾವಿಯಾಗಿ ಭಾನುವಾರ ರಾತ್ರಿಯಿಂದಲೇ ನೊಣವಿನಕೆರೆ ಅಜ್ಜಯ್ಯನವರ ನೇತೃತ್ವದಲ್ಲಿ ನೂತನ ನಿವಾಸದಲ್ಲಿ ವಿಶೇಷ ಪೂಜೆ ಹಾಗೂ ಹೋಮ-ಹವನಗಳು ಆರಂಭವಾಗಿವೆ. ಸದ್ಯ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರು ನೂತನ ನಿವಾಸದಲ್ಲೇ ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ.

ವಾಸ್ತು ಪ್ರಕಾರ ನವೀಕರಣ: ಕುಮಾರಕೃಪಾ ಗೆಸ್ಟ್‌ಹೌಸ್‌ಗೆ 'ಗಂಗಾ' ಎಂದು ನಾಮಕರಣ; ನೊಣವಿನಕೆರೆ ಅಜ್ಜಯ್ಯ ನೇತೃತ್ವದಲ್ಲಿ ವಿಶೇಷ ಹೋಮ-ಹವನ!
ಸಿಎಂ ಡಿ.ಕೆ ಶಿವಕುಮಾರ್ ನಿವಾಸ ಬಳಿ ವಾಮಚಾರ ಪ್ರಯೋಗ ಶಂಕೆ: ತನಿಖೆಗಿಳಿದ ಪೊಲೀಸರು

ಸದಾಶಿವನಗರದಲ್ಲಿದ್ದ ನಿವಾಸದಿಂದ ನಿರ್ವಹಿಸುತ್ತಿದ್ದ ಹಲವು ಸಾರ್ವಜನಿಕ ಕೆಲಸಗಳನ್ನು ಇನ್ನು ಮುಂದೆ ಗಂಗಾ ನಿವಾಸದಿಂದಲೇ ನಿರ್ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಬರುವವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಹಾಗೂ ಪ್ರತ್ಯೇಕ ಮಾರ್ಗವನ್ನೂ ಕಲ್ಪಿಸಲಾಗಿದೆ.

ಪೂಜಾ ಕಾರ್ಯಕ್ರಮಗಳು ಅತ್ಯಂತ ಗೌಪ್ಯ ಹಾಗೂ ಕೌಟುಂಬಿಕವಾಗಿ ನಡೆಯುತ್ತಿರುವುದರಿಂದ ನವೀಕೃತ ನಿವಾಸದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು ಮಾತ್ರವಲ್ಲದೆ, ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನಿರಾಕರಿಸಲಾಗಿದೆ. ಗೇಟ್ ಬಳಿಯೇ ಬ್ಯಾರಿಕೇಡ್ ಹಾಕಿ ತಡೆದಿರುವ ಪೊಲೀಸರು, ಒಳಗೆ ತೆರಳಲು ಯಾರಿಗೂ ಅನುಮತಿ ನೀಡಿಲ್ಲ.

ಐತಿಹಾಸಿಕ ಹಿನ್ನೆಲೆಯುಳ್ಳ ಕುಮಾರಕೃಪಾ ಗೆಸ್ಟ್‌ಹೌಸ್‌ಗೆ 'ಗಂಗಾ' ಎಂದು ಮರುನಾಮಕರಣ ಮಾಡಿ, ವಾಸ್ತು ಪ್ರಕಾರ ನವೀಕರಿಸಿ ಸಿಎಂ ಅಧಿಕೃತ ಗೃಹವನ್ನಾಗಿ ಮಾಡಿಕೊಂಡಿರುವುದು ಇದೀಗ ರಾಜಕೀಯ ವಲಯದಲ್ಲೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X