ತುಮಕೂರು: ಅಪ್ಪ-ಅಮ್ಮ ಜಗಳಕ್ಕೆ ಮಗ ಬಲಿ; ಜಗಳ ಬಿಡಿಸಲು ಹೋದ ಪುತ್ರನನ್ನೇ ಬರ್ಬರವಾಗಿ ಹತ್ಯೆಗೈದ ತಂದೆ!

ಆರೋಪಿ ನಂಜೇಗೌಡ (50), ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ನಂತರ, ತನ್ನ ಮಗ ಸುನಿಲ್‌ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
Sunil
ಸುನೀಲ್
Updated on: 

ತುಮಕೂರು: ಗಂಡ ಹೆಂಡತಿ ಜಗಳ ಬಿಡಿಸಲು ಹೋದ ಮಗನನ್ನೇ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ.

ಆರೋಪಿ ನಂಜೇಗೌಡ (50), ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ನಂತರ, ತನ್ನ ಮಗ ಸುನಿಲ್‌ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

16 ವರ್ಷದ ಸುನೀಲ್‌ ಕೊಲೆಯಾದ ಹುಡುಗ. ತಂದೆ ನಂಜೆಗೌಡ ಮಧ್ಯ ವ್ಯಸನಿಯಾಗಿದ್ದು, ಕುಡಿದು ಬಂದು ಪತ್ನಿ ರಂಜಿತಾಳೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ಈ ಹಿಂದೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದಿದ್ದ. ಕುಣಿಗಲ್ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ಸುನಿಲ್, ಈ ಹಲ್ಲೆಯಿಂದಾಗಿ ಮೃತಪಟ್ಟಿದ್ದಾನೆ.

ನಂಜೆಗೌಡ ಇಂದು ಬೆಳಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ, ಜಗಳ ತಾರಕಕ್ಕೇರಿ ರಂಜಿತಾ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಸುನೀಲ್ ಮಧ್ಯ ಪ್ರವೇಶಿಸಿ ಅವರ ಜಗಳ ಬಿಡಿಸಲು ಮುಂದಾಗಿದ್ದಾನೆ.

ಈ ವೇಳೆ ಕೊಪಗೊಂಡ ನಂಜೆಗೌಡ ಪತ್ನಿಯನ್ನು ಮನೆಯಿಂದ ಆಚೆಗೆ ತಳ್ಳಿ ಬಾಗಿಲು ಹಾಕಿಕೊಂಡು ಮನೆಯಲ್ಲಿದ್ದ ಹಾರೆಕೋಲಿನಿಂದ ಮಗನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಕೊಲೆಗೈದು ವಿಕೃತಿ ಮೆರೆದಿದ್ದಾನೆ.

Sunil
2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು; ಕೊನೆಗೆ ಕೊಡಲಿಯಿಂದ ಕೊಚ್ಚಿ ಹತ್ಯೆ!

ತನ್ನ ತಾಯಿಯನ್ನು ರಕ್ಷಿಸಲು ಹೋಗಿ ಸ್ವತಃ ತಂದೆಯ ಕೈಯಲ್ಲೇ ಮಗ ಕೊಲೆಯಾದ ಈ ಘಟನೆಯು ಗ್ರಾಮಸ್ಥರು ಮತ್ತು ಸಂಬಂಧಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ನಂಜೇಗೌಡನನ್ನು ವಶಕ್ಕೆ ಪಡೆದರು. ಆದರೆ, ಪೊಲೀಸರು ಆತನನ್ನು ವಾಹನದತ್ತ ಕರೆದೊಯ್ಯುತ್ತಿದ್ದಾಗ, ಆಕ್ರೋಶಗೊಂಡ ಗ್ರಾಮಸ್ಥರ ಗುಂಪೊಂದು ಆತನನ್ನು ಪೊಲೀಸ್ ಜೀಪಿನಿಂದ ಹೊರಗೆ ಎಳೆದು ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X