

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಬಿರುಕು ಇಲ್ಲ ಎಂದು ಸಂಸದ ಸುನಿಲ್ ಬೋಸ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಹಾಗೂ ಮಹದೇವಪ್ಪ ನಡುವಿನ ಮುನಿಸಿನ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು. ಅವರದ್ದು ಸುಮಾರು 40 ವರ್ಷಗಳ ಸುದೀರ್ಘ ಸ್ನೇಹ. ಯಾವುದೋ ಒಂದು ವಿಚಾರಕ್ಕೆ ಇಬ್ಬರೂ ತಮ್ಮ ಸಂಬಂಧವನ್ನು ಬಿಟ್ಟುಕೊಡುವವರಲ್ಲ ಎಂದು ಹೇಳಿದ್ದಾರೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಬಿರುಕು ಇಲ್ಲ ಎಂದು ಸಂಸದ ಸುನಿಲ್ ಬೋಸ್ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರದ್ದು ಸುಮಾರು 40 ವರ್ಷಗಳ ಸುದೀರ್ಘ ಸ್ನೇಹ. ಯಾವುದೋ ಒಂದು ವಿಚಾರಕ್ಕೆ ಇಬ್ಬರೂ ತಮ್ಮ ಸಂಬಂಧವನ್ನು ಬಿಟ್ಟುಕೊಡುವವರಲ್ಲ. ಇಬ್ಬರ ನಡುವಿನ ಸ್ನೇಹದಲ್ಲಿ ಬಿರುಕು ಮೂಡಲು ಸಾಧ್ಯವೇ ಇಲ್ಲ ಎಂದು ಸುನಿಲ್ ಬೋಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಕರೆದಿದ್ದ ಸಂವಿಧಾನದ ಪೂರ್ವಭಾವಿ ಸಭೆಗೆ ಹೆಚ್.ಸಿ. ಮಹದೇವಪ್ಪ ಗೈರಾಗಿದ್ದ ವಿಚಾರದ ಬಗ್ಗೆಯೂ ಸುನಿಲ್ ಬೋಸ್ ಸ್ಪಷ್ಟನೆ ನೀಡಿದ್ದಾರೆ. ಮಹದೇವಪ್ಪ ಅವರಿಗೆ ವೈರಲ್ ಫೀವರ್ ಇದ್ದ ಕಾರಣ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಮಹದೇವಪ್ಪ ಅವರೇ ತಿಳಿಸಿದ್ದಾರೆ. ಹೀಗಾಗಿ ಅವರು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಲಿದ್ದಾರೆ ಎಂದು ಸುನಿಲ್ ಬೋಸ್ ಹೇಳಿದ್ದಾರೆ.