ಆಧಾರ್ ಕಾರ್ಡ್ ವಯಸ್ಸಿನ ಅಧಿಕೃತ ಪುರಾವೆಯಲ್ಲ: ಕರ್ನಾಟಕ ಹೈಕೋರ್ಟ್

ಆಧಾರ್ ಕಾರ್ಡ್ ಕೇವಲ ವ್ಯಕ್ತಿಯ ಗುರುತಿನ ದಾಖಲೆಯೇ ಹೊರತು, ಅದು ಜನ್ಮ ದಿನಾಂಕ ಅಥವಾ ವಯಸ್ಸನ್ನು ದೃಢಪಡಿಸುವ ಅಧಿಕೃತ ಪುರಾವೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:
Aadhar card
ಆಧಾರ್ ಕಾರ್ಡ್ online desk
Updated on: 

ಬೆಂಗಳೂರು: ಆಧಾರ್ ಕಾರ್ಡ್ ಕೇವಲ ಗುರುತಿನ ದಾಖಲೆಯೇ ಹೊರತು, ವ್ಯಕ್ತಿಯ ವಯಸ್ಸು ಅಥವಾ ಜನ್ಮದಿನಾಂಕವನ್ನು ನಿರ್ಧರಿಸುವ ಅಧಿಕೃತ ಪುರಾವೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಯಸ್ಸನ್ನು ದೃಢಪಡಿಸುವ ಬೇರೆ ಅಧಿಕೃತ ದಾಖಲೆಗಳಿಲ್ಲದ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ನಮೂದಿಸಿರುವ ವಯಸ್ಸನ್ನೇ ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಡಿಸೆಂಬರ್ 18, 2021 ರಂದು ಮೈಸೂರಿನಿಂದ ಗುರುವಾಯನಕೆರೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಷರೀಫ್ ಎಂಬುವವರು ಬೇಲೂರು-ಮೂಡಿಗೆರೆ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮಂಗಳೂರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ಮೃತರ ಕುಟುಂಬಕ್ಕೆ ₹26,73,100 ಪರಿಹಾರ ನೀಡಿತ್ತು. ಆದ್ರೆ, ಷರೀಫ್ ಅವರ ಆಧಾರ್ ಕಾರ್ಡ್‌ನಲ್ಲಿ ವಯಸ್ಸು 35 ವರ್ಷ 7 ತಿಂಗಳು ಎಂದು ನಮೂದಾಗಿದ್ದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ 32 ವರ್ಷ ಎಂದು ದಾಖಲಾಗಿತ್ತು. ಕೆಳಹಂತದ ನ್ಯಾಯಮಂಡಳಿಯು ಆಧಾರ್ ವಿವರ ಆಧರಿಸಿ ವಯಸ್ಸನ್ನು 36 ವರ್ಷ ಎಂದು ಪರಿಗಣಿಸಿ ಪರಿಹಾರ ಲೆಕ್ಕಹಾಕಿತ್ತು. ಇದನ್ನು ಪ್ರಶ್ನಿಸಿ ಮೃತರ ಪತ್ನಿ ಸಕೀನಾ, ಮಗಳು ಮತ್ತು ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪರಿಹಾರ ಮೊತ್ತ ಹೆಚ್ಚಳ

ಇನ್ನು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು, "ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಮರಣೋತ್ತರ ಪರೀಕ್ಷಾ ವರದಿಯ ವಯಸ್ಸನ್ನು ಪರಿಗಣಿಸಿ ಪರಿಹಾರದ ಮೊತ್ತವನ್ನು ₹26,73,100 ರಿಂದ ₹28,68,000 ಕ್ಕೆ (ಹೆಚ್ಚುವರಿ ₹1.95 ಲಕ್ಷ) ಏರಿಸಿ ಆದೇಶಿಸಿದೆ". ಜೊತೆಗೆ, ಹೆಚ್ಚುವರಿ ಮೊತ್ತಕ್ಕೆ ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ಸೂಚಿಸಿದೆ. ಇದೆ ವೇಳೆ, ಮೃತರ ವಯಸ್ಸನ್ನು ಸಾಬೀತುಪಡಿಸಲು ಕುಟುಂಬಸ್ಥರು ಬೇರೆ ದಾಖಲೆಗಳನ್ನು ಹಾಜರುಪಡಿಸಬೇಕು ಎಂಬ ಇನ್ಶೂರೆನ್ಸ್ ಕಂಪನಿಯ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, "ಬೇರೆ ದಾಖಲೆಗಳಿಲ್ಲದಿದ್ದಾಗ ಮರಣೋತ್ತರ ಪರೀಕ್ಷಾ ವರದಿಯನ್ನು ವೈಜ್ಞಾನಿಕ ಮೌಲ್ಯಮಾಪನವೆಂದು ಪರಿಗಣಿಸಬೇಕು" ಎಂದು ಸುಪ್ರೀಂ ಕೋರ್ಟ್‌ನ ಸುನೀತಾ ಮತ್ತು ಇತರರು ವಿರುದ್ಧ ವಿನೋದ್ ಸಿಂಗ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದೆ.

Aadhar card
ಮಗಳು ಮೇಜರ್ ಆದರೂ ಶಿಕ್ಷಣದ ಹೊಣೆ ತಂದೆಯದ್ದೇ; ಉನ್ನತ ಶಿಕ್ಷಣದ ವೆಚ್ಚ ಭರಿಸಬೇಕು: High court

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X