ನಿಶ್ಚಿತಾರ್ಥ ಮಾಡಿಕೊಂಡ Biggboss ಜೋಡಿ: ಉಂಗುರ ಬದಲಿಸಿಕೊಂಡ ಶಿಶಿರ್-ಐಶ್ವರ್ಯಾ!

ಕನ್ನಡ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾಗಿದ್ದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ನಡುವಿನ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಸ್ಪರ್ಧಿಗಳು ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Aishwarya Shindogi, Shishir Shastry
ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರಿ
Updated on: 

ಕನ್ನಡ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಗಳಾಗಿದ್ದ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ನಡುವಿನ ಸ್ನೇಹ ನಂತರ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಸ್ಪರ್ಧಿಗಳು ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಕಿರುತೆರೆ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡರು.

Aishwarya Shindogi, Shishir Shastry
ನನ್ನ ಪತಿ 'ಜೆಂಟಲ್‌ಮ್ಯಾನ್'; ಇತರ ನಟರೊಂದಿಗೆ ಸಂಬಂಧ ಕಲ್ಪಿಸುವುದು ನನಗೆ 'ನೋವು' ಉಂಟುಮಾಡುತ್ತದೆ; ಕೀರ್ತಿ ಸುರೇಶ್!

ನಿಶ್ಚಿತಾರ್ಥದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿದ ಶಿಶಿರ್, ನಮ್ಮ ಜರ್ನಿ ಪ್ರೀತಿಯಿಂದ ಶುರುವಾಗಿದ್ದಲ್ಲ. ಒಟ್ಟಿಗೆ ಕೆಲಸ ಮಾಡುತ್ತಾ ಆರಂಭವಾದ ಪರಿಚಯ ಸ್ನೇಹವಾಯಿತು. ಸ್ನೇಹದಿಂದ ಗೌರವ ಹೆಚ್ಚಾಯಿತು. ಬಳಿಕ ಅದು ಪ್ರೀತಿಗೆ ತಿರುಗಿತು. ಪ್ರೀತಿಸಿ ಮದುವೆಯಾಗುತ್ತೇವೆ ಎಂದು ನಾವೇ ಅಂದುಕೊಂಡಿರಲಿಲ್ಲ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಆಗಿಲ್ಲ. ಆದರೆ ಐಶ್ವರ್ಯ ಬಗ್ಗೆ ನನಗೆ ವಿಶೇಷ ಭಾವನೆ ಇತ್ತು. ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯನೇ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X